ಅಡ್ರಿನಲ್ ಗ್ರಂಥಿಗಳ ರೋಗಗಳು

ಅಡ್ರಿನಲ್ ಗ್ರಂಥಿಗಳ ರೋಗಗಳನ್ನು ಕುಸುರಿಯವೆಂದೂ (ಮೆಡುಲ್ಲ) ರಗಟೆಯವೆಂದೂ (ಕಾರ್ಟೆಕ್ಸ್) ವಿಂಗಡಿಸಬಹುದು. ಕುಸುರಿಯಲ್ಲಿ ಏಳುವ ರೋಗಕ್ಕೆ, ಒಂದು ಗಂತಿ (ಮಬ್ಬಣ ಕಣಗಂತಿ, ಫ್ಯಾಗ್ರೆಮೋಸಿಟೋಮ) ಕಾರಣ. ಆಗ ಈ ಗಂತಿಯಿಂದ ಅಡ್ರಿಲೀನ್, ನಾರಡ್ರಿನಲೀನ್ ವಿಪರೀತ ಸುರಿವುದರಿಂದ, ಕೈಕಾಲುಗಳು ತಣ್ಣಗೆ ನೀಲಿಗಟ್ಟಿ, ಆಗಿಂದಾಗ್ಗೆ ರಕ್ತದ ಒತ್ತಡದೇರಿಕೆ, ಎದೆಯಲ್ಲಿನ ಗುಂಡಿಗೆಯ ಡವಡವಿಕೆ, ಬೆವರಿಕೆ, ಚಿಟ್ಟಿಡಿಸುವ ತಲೆನೋವುಗಳು, ಕಳವಳ, ಓಕರಿಕೆ, ವಾಂತಿ ಆಗುತ್ತವೆ. ಗಂತಿಯನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕುವುದೇ ವಾಸಿಮಾಡುವ ಉಪಾಯ.[]

ಅಡ್ರಿನಲ್ ರಗಟೆ

ಬದಲಾಯಿಸಿ

ಅದರ ನಿಜಗೆಲಸ ಏರುಪೇರಾದಂತೆ ವಿಂಗಡಿಸಬಹುದು; ಅತಿಗೆಲಸ, ಕೆಲಸಗೊರೆ. ಈ ಎರಡನೆಯದಕ್ಕೆ ಅಡಿಸನ್ನನ ರೋಗ (ನೋಡಿ- ಅಡಿಸನ್ನನ-ರೋಗ) ಎಂಬ ಹೆಸರಿದೆ.

ಲಕ್ಷಣಗಳು

ಬದಲಾಯಿಸಿ

ಅಡ್ರಿನಲ್ ರಗಟೆಯ ಅತಿಗೆಲಸ ಹುಟ್ಟುತ್ತಲೇ ಬಂದಿರಬಹುದು, ಆಮೇಲೆ ಗಳಿಸಿದ್ದಾಗಿರಬಹುದು. ಹುಟ್ಟುತ್ತಾ ಬಂದಿದ್ದು ಇಕ್ಕೆಡೆಯಲ್ಲೂ ಮಲೆತವಾಗಿ (ಹೈಪರ್‍ಟ್ರೊಫಿ) ಹಿರಿದಾಗಿರಬಹುದು. ಗಳಿಸಿದ್ದಾದರೆ ಗಂತಿಯಿಂದಲೂ ಆಗಿರಬಹುದು. ಹೆಣ್ಣುಕೂಸಿನಲ್ಲಿ ಹುಟ್ಟುತ್ತಲೇ ಹಿರಿದಾಗಿದ್ದರೆ, ಮೈಮೇಲೆಲ್ಲ ಕೂದಲು ಬೆಳೆದು, ಮುಟ್ಟು ನಿಂತು, ಗಂಡಿನ ಲಕ್ಷಣಗಳೊಂದಿಗೆ ಹುಸಿಯಿರ್ಲಿಂಗಿತನ (ಸ್ಯೂಟೋ ಹರ್ಮಪ್ರೊಡಿಟಿಸಮ್) ಕಾಣಿಸಿಕೊಳ್ಳುತ್ತದೆ. ಗಂಡುಕೂಸಿನಲ್ಲಿ ಜನನಾಂಗಗಳ ಮುನ್ನೆರತ (ಫ್ರಿಕೊಸಿಟಿ) ಕಾಣುವುದು. ಸಂತಾನಬಲ ಕಳೆದು ಬೊಜ್ಜು ಮೈ ಬರುವುದು. ಇಬ್ಬರಲ್ಲೂ ಗಂಡುತನದೊಂದಿಗೆ, ಮೈಯಿಂದ ಉಪ್ಪು ಕಳೆವ ಲಕ್ಷಣ ಕೂಟವೂ (ಸಿಂಡ್ರೋಮ್) ಕಾಣಬರುತ್ತದೆ. ಗಳಿಸಿದ ಅಡ್ರಿನಲ್ ರಗಟೆಯ ಅತಿಗೆಲಸಕ್ಕೆ ಮೆಲುಪಿನ (ಬಿನೈನ್) ಇಲ್ಲವೇ ವಿಷಮ (ಮ್ಯಾಲಿಗ್ನೆಂಟ್) ಅಡ್ರಿನಲ್ ಗಂತಿಯೋ, ಅಡ್ರಿನಲ್ ಗ್ರಂಥಿಯ ಮಲೆತವೋ ಕಾರಣವಾಗಿರಬಹುದು. ಗಂತಿಯಾಗದ ಅಡ್ರಿನಲ್ ಗ್ರಂಥಿ ಅತಿಗೆಲಸದಲ್ಲಿ ಗ್ರಂಥಿಗಳು ಹಿರಿದಾಗದೆ ಇರುವುದು ಅಪರೂಪವಲ್ಲ. ಅಂಥದಕ್ಕೆ ತೆಮಡಿಕ ಗ್ರಂಥಿಯಲ್ಲಿ (ಪಿಟ್ಯೂಟರಿ ಗ್ಲಾಂಡ್) ಏಳುವ ಗಂತಿ ಕಾರಣ. ಅಡ್ರಿನಲ್ ರಗಟೆಯ ಗಳಿಸಿದ ಅತಿಗೆಲಸ. ಕಷಿಂಗನ ಲಕ್ಷಣಕೂಟವಾಗೋ ಅಡ್ರಿನಲ್ ಜನನಾಂಗದ (ಅಡ್ರಿನೊಜೆನಿಟಲ್) ಲಕ್ಷಣಕೂಟವಾಗೋ ಇವೆರಡೂ ಇದ್ದೋ ತೋರಿಬರುತ್ತದೆ. ಕಷಿಂಗನ ಲಕ್ಷಣಕೂಟದಲ್ಲಿ ಹೆಗ್ಗುರುತುಗಳಾಗಿ ಬೊಜ್ಜುತನ, ಎಲುತೂತುಗಳಾಗಿ (ಅಸ್ಟಿಯೂಪೊರೊಸಿಸ್), ಚರ್ಮ ತೆಳುಕಲಾಗಿ ಸುಲಭವಾಗಿ ಬಿರಿಯುವುದರಿಂದ ಉದಾ. ಬಣ್ಣದ ಪಟ್ಟೆಗಳು, ಸಿಹಿಮೂತ್ರ, ಮೊಗ ಹೊಟ್ಟೆ ಕಾಲುಗಳ ಕೆಂಪೇರಿಕೆ, ನಿತ್ರಾಣ, ಹಲವೇಳೆ ಮನೋಬೇನೆಗಳೂ ಇರಬಹುದು. ಹೆಣ್ಣಿನಲ್ಲಿ ಗಂಡಿನ ಲಕ್ಷಣಗಳು ಕಾಣುವುದೂ ಎಳೆಯವರಲ್ಲಿ ಜನನಾಂಗದ ಮುನ್ನೆರತವೂ ವಯಸ್ಕನಲ್ಲಿ ಹಲಮಟ್ಟದ ನಪುಂಸಕತ್ವ ಕಳೆವುದೇ ಅಡ್ರಿನಲ್ ಜನನಾಂಗದ ಲಕ್ಷಣ ಕೂಟ ಎನಿಸಿಕೊಳ್ಳುತ್ತದೆ.

ಚಿಕಿಸ್ತೆ

ಬದಲಾಯಿಸಿ

ಶಸ್ತ್ರಕ್ರಿಯೆಯಿಂದ ತೆಗೆವುದೇ ಅಡ್ರಿನಲ್ ಗಂತಿಯ ಚಿಕಿತ್ಸೆ. ಹುಟ್ಟುತ್ತಬಂದ ಮಲೆತಕ್ಕೆ ಕೊನೆಯ ತನಕವೂ ಕಾರ್ಟಿಸೋನ್ ಇಲ್ಲವೇ ಅದರಂಥ ಕೃತಕ ಸಮಗೂಲಿಗಳನ್ನು (ಅನಲೋಗ್) ಕೊಡುವುದೇ ಚಿಕಿತ್ಸೆ. ಮೈಯಿಂದ ಉಪ್ಪು ಕಳೆದು ಹೋಗುತ್ತಿದ್ದರೆ, ಉಪ್ಪನ್ನು ಉಳಿಸಿಕೊಳ್ಳುವ ಡಿಸಾಕ್ಸಿಕಾರ್ಟಿಕೊಸ್ಟಿರೋನನ್ನೂ ಕೊಡಬೇಕು. ಕಷಿಂಗನ ಲಕ್ಷಣಕೂಟದೊಂದಿಗಿನ ಗಂತಿಯಿಂದೇಳದೆ, ಗಳಿಸಿದ ಅಡ್ರಿನಲ್ ಅತಿಗೆಲಸಕ್ಕೆ ಬರುವ ಚಿಕಿತ್ಸೆಗಳಿವು: ತೆಮಡಿಕ ಗ್ರಂಥಿಯ ವಿಕಿರಣಿಡಿತ (ಇರ್ರೇಡಿಯೇಷನ್) ದೊಂದಿಗೆ, ಒಂದು ಅಡ್ರಿನಲ್ ಗ್ರಂಥಿ ತೆಗೆತ ಆಡ್ರಿನಲ್ ಗ್ರಂಥಿಗಳಲ್ಲಿ ಬಲುಪಾಲು ತೆಗೆತ; ತೆಮಡಿಕದ ತೆಗೆತ; ಅಡ್ರಿನಲ್‍ಗಳನ್ನೋ ತೆಮಡಿಕ ಗ್ರಂಥಿಯನ್ನೋ ಪೂರ್ತಿ ತೆಗೆದರೆ, ಹಾಳುಮಾಡಿದರೆ, ಅಡ್ರಿನಲ್ ಚೋದನಿಕಗಳನ್ನು ಬದಲುಸೇವಿಕೆ ಚಿಕಿತ್ಸೆಯಾಗಿ ಕೊಡುತ್ತಿರಬೇಕು.

ಆಲ್ಡೊಸ್ಟಿರೋನ್ ವಿಷತೆ

ಬದಲಾಯಿಸಿ

ಮುಮ್ಮೊದಲ ಆಲ್ಡೊಸ್ಟಿರೋನ್ ವಿಷತೆ (ಪ್ರೈಮರಿ ಅಲ್ಡೊಸ್ಟಿರೋನಿಸಮ್). ಅಡ್ರಿನಲ್ ರಗಟೆಯ ಅತಿಗೆಲಸದ ಒಂದು ಬಗೆ. ಗಂತಿಯಾಗಿರುವುದೇ ಸಾಮಾನ್ಯ ಕಾರಣವಾದರೂ ಗಂತಿಯಿಲ್ಲದೆ ಕೂಡ ಅಲ್ಡೊಸ್ಟಿರೋನ್ ಅತಿಯಾಗಿ ಸುರಿಯಲೂಬಹುದು. ರಕ್ತದ ಏರಿದೊತ್ತಡ ರಕ್ತರಸಿಕೆಯಲ್ಲಿನ ಪೊಟ್ಯಾಸಿಯಂ ಇಳಿತ, ರಕ್ತದಲ್ಲಿನ ಇಂಗಾಲಾಮ್ಲದ ಏರಿಕೆ, ಮೂತ್ರಪಿಂಡ ಕೆಟ್ಟಿರುವ ಪುರಾವೆಗಳು, ಮೂತ್ರದಲ್ಲಿ ಹೆಚ್ಚಾಗಿ ಪೊಟ್ಯಾಸಿಯಂ ಕಳೆತ, ಮೂತ್ರದಲ್ಲಿ ಬಹುವಾಗಿ ಆಲ್ಡೊಸ್ಟಿರೋನ್ ಹೆಚ್ಚು ಕಳೆತವೂ ಅಂಥ ಲಕ್ಷಣಕೂಟದಲ್ಲಿ ಇರುತ್ತವೆ. ಹಲವೇಳೆ ಎಡೆಸೆಳೆವು (ಟಿಟ್ಯನಿ). ಸ್ನಾಯು ನಿತ್ರಾಣ, ಹೇರಳವಾಗಿ ಮೂತ್ರ ಸುರಿತವೂ ರೋಗಿಯಲ್ಲಿ ಕಂಡುಬರುತ್ತದೆ. ಅಡ್ರಿನಲ್ ಗ್ರಂಥಿ ತೆಗೆದುಹಾಕಿದರೆ ರೋಗ ಲಕ್ಷಣಗಳು ಇಲ್ಲವಾಗುತ್ತವೆ. (ನೋಡಿ- ಅಡ್ರಿನಲ್-ಗ್ರಂಥಿಗಳು) (ನೋಡಿ- ಕಷಿಂಗ್,-ಹಾರ್ವೆ) (ಡಿ.ಎಸ್.ಎಸ್.)

ಉಲ್ಲೇಖಗಳು

ಬದಲಾಯಿಸಿ