ಅಡ್ಕಬಾರೆ
ಅಡ್ಕಬಾರೆ
ಬದಲಾಯಿಸಿಕನ್ನಡ ಹಣ್ಣುಗಳು ಇತ್ತಿಚಿನ ದಿನಗಳಲ್ಲಿ ಕಾಣಸಿಗುವುದು ತೀರಾ ಅಪರೂಪ. ಹಿಂದಿನ ಕಾಲದಲ್ಲಿ ಆಹಾರದ ಮೂಲವಾಗಿದ್ದ ಕಾಡುಹಣ್ಣುಗಳ ಸಾಲಿನಲ್ಲಿ ಅಡ್ಕಬಾರೆಯು ಒಂದು.ನೋಡಲು ಅಂಬಟೆ ಕಾಯಿಯ ಗಾತ್ರ ,ಬಣ್ಣವನ್ನು ಹೋಲುವ ಅಡ್ಕಬಾರೆ ಮಲೆನಾಡಿನ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಉತ್ತರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳ ಕಾಡುಗಳಲ್ಲೂ ಕಾಣಸಿಗುವ ಹಣ್ಣಿದು.ಮುಂಡಾಗೋಡ, ಯಲ್ಲಾಪುರದ ಕಾಡುಗಳಲ್ಲಿ ಇವುಗಳ ದರ್ಶನವಾಗುವುದು ಹೆಚ್ಚು.ಅಡ್ಕಬಾರೆಯ ಮರ ಸಣ್ಣ ಮುಳ್ಳುಗಳಿಂದ ಕೂಡಿದ್ದು ಮರವನ್ನು ಕಿಟಕಿ,ಬಾಗಿಲು ತಯಾರಿಯಲ್ಲಿ ಬಳಸುತ್ತಾರೆ. ಮಾರ್ಚ್ ತಿಂಗಳಲ್ಲಿ ಸಣ್ಣ ಕಾಯಿಗಳು ಕಾಣಸಿಗುತ್ತವೆ.ಆಗಸ್ಟ್ ತಿಂಗಳಲ್ಲಿ ಕಾಯಿ ಬೆಳೆತು ಪದಾರ್ಥಕ್ಕೆ ಸಿದ್ಧವಾಗುತ್ತವೆ.ಕಾಯಿ ಬೆಳೆತಂತೆ ಕಡು ಹಸಿರು ಬಣ್ಣಕ್ಕೆ ತಿರುಗುತ್ತದೆ. ಮರ ನೂರಾರು ಕಾಯಿಗಳನ್ನು ನೀಡುತ್ತಿದ್ದು ಇವು ಮಾರುಕಟ್ಟೆಯಲ್ಲಿ ಕೆಲವೊಂದು ಕಡೆ ಸಿಗುತ್ತವೆ. ಯುವಜನತೆಗೆ ಇದು ಅಪರಿಚಿತ ಹಣ್ಣು ಕೂಡ. ಔಷಧೀಯ ಗುಣವನ್ನು ಹೊಂದಿರುವ ಅಡ್ಕಬಾರೆಯ ಮೇಲಿನ ಸಿಪ್ಪೆ ಸುಲಿದು ಕತ್ತರಿಸಿದರೆ ಪದಾರ್ಥದಲ್ಲಿ ಬಳಕೆಯಾಗುತ್ತದೆ.ಕಾಯಿಯ ಒಳಗಿನ ತಿರುಳನ್ನು ಕಷಾಯ ಮಾಡಿ ಕುಡಿದರೆ ಹೊಟ್ಟೆನೋವು ನಿವಾರಣೆಯಾಗುತ್ತದೆ. ಕಾಯಿಯನ್ನು ಕಲ್ಲಿನಿಂದ ಜಜ್ಜಿ ಬೇಯಿಸಿ ಅದರ ನೀರಿನಿಂದ ಸ್ನಾನ ಮಾಡಿದರೆ ಕೆಲವೊಂದು ಚರ್ಮ ರೋಗಗಳು ವಾಸಿಯಾಗುತ್ತವೆ.ಹಸಿ ಕಾಯಿಯನ್ನು ಬೇಯಿಸದೆ ತಿನ್ನುವಂತಿಲ್ಲ .ಕಾಯಿ ಕಹಿಯಾಗಿದ್ದು ೨೦ರಿಂದ ೨೫ ಕಾಯಿಗಳು ಒಂದು ಕೆ.ಜಿ. ತೂಗುತ್ತವೆ.ಹತ್ತಾರು ಔಷಧೀಯ ಗುಣಗಳಿಂದ ಕೂಡಿರುವ ಅಡ್ಕಬಾರೆಯನ್ನು ವರ್ಷದಲ್ಲಿ ಒಮ್ಮೆ ಯಾದರೂ ಸೇವಿಸಬೇಕೆಂಬುದು ಹಿರಿಯರ ಮಾತು. ಅದೇನೆ ಇರಲಿ ಇತಿಹಾಸದ ಪುಟ ಸೇರುತ್ತಿರುವ ಈ ಹಣ್ಣನ್ನು ಉಳಿಸಿ ಬೆಳೆಸುವತ್ತ ನಮ್ಮ ಪ್ರಯತ್ನ ಸಾಗಬೇಕಿದೆ.