ಅಡೂರುಸಂಪಾದಿಸಿ

ಕೈಲಾಸವಾಸಿ ಶಿವಪಾವ೯ತಿಯರು ತಮ್ಮ ಗಣಗಳಿಂದೊಡಗೂಡಿ ಕುಂಡುಕುಳಿ ಎಂಬಲ್ಲಿ ಭುವಿಗಿಳಿದರು ಬೇಡಡ್ಕ ಎಂಬಲ್ಲಿ ಶಿವ-ಪಾವ೯ತಿಯರು ಗಣದೊಂದಿಗೆ ಬೇಡ ಬೇಡತಿ ಮತ್ತು ಬೇಡ ಪಡೆಯಾಗಿ ವೇಷ ಪಲ್ಲಟಗೊಂಡರು. ಶಾಪಗ್ರಸ್ಥ ಮೂಕನೆಂಬ ದಾನವನು ಹಂದಿ ರೂಪದಲ್ಲಿದ್ದುದ್ದನ್ನು ಮನಗಂಡು ಶಿವನು ಅವನ ಶಾಪ ವಿಮೋಚನೆಗಾಗಿ ಅವನನ್ನು ಗುರಿಯಾಗಿರಿಸಿಕೊಂಡು ಬೇಟೆಯಾಡತೊಡಗಿದನು.'ಕುತ್ತಿಕೋಲ' ಎಂಬಲ್ಲಿಂದ ಆರಂಭಿಸಿದ ಬೇಟೆ ಬಂದಡ್ಕಕ್ಕೆ ತಲುಪಿದಾಗ ಅಲ್ಲಿ ಕಾಣಸಿಕ್ಕಿದ ಮೂಕ/ಹಂದಿ ಕಿರಾತ ರೂಪಿ ಶಿವನು ಬಾಣ ಪ್ರಯೋಗಿಸಲು ಅದು ನೋವು ತಾಳಲಾಗದೆ ಶಬ್ದ ಮಾಡುತ್ತಾ ಕೌಂಡಿಕಾನವನ್ನು ಪ್ರವೇಶಿಸಿ ಅಲ್ಲಿ ಅರ್ಜುನನ ತಪಸ್ಸಿಗೆ ಭಂಗವನುಂಟುಮಾಡಿತು. ಸಿಟ್ಟಿಗೆದ್ದ ಅರ್ಜುನನು ತಾನು ಒಂದು ಬಾಣವನ್ನು ಪ್ರಯೋಗಿಸಿ ಹಂದಿಯನ್ನು ಕೊಂದನು. ಸುತ್ತ ಹಂದಿ ಬಿದ್ದ ಸ್ಥಳವೇ 'ಪಂಜಳ' ವಾಗಿದೆ. (ಪಂಜಿ+ಸ್ಥಳ) ಹಂದಿಯನ್ನು ಕೊಂದವರಾರು ಎನ್ನುವ ಜಿಜ್ಞಾಸೆಯಲ್ಲಿ ಕಿರಾತನಿಗೂ (ಶಿವ) ಅರ್ಜುನನಿಗೂ ಹಂದಿಯನ್ನು ಕೊಂದವರು ತಾನು ನಾನೆಂದು ವಾಗ್ವಾದ ನಡೆದುದಲ್ಲದೆ ಮುಷ್ಟಿಯುದ್ದ, ಮಲ್ಲಯುದ್ದವಾಯಿತು. ಅವರಿಬ್ಬರು ಉರಾಳಾಡಿದರು. ಇವರು ಪರಸ್ಪರ ಹೋರಾಡುತ್ತಾ ಉರುಳಾಡುತ್ತಿದ್ದ ಈ ಸ್ಥಳವೇ ಮುಂದೆ 'ಅಡೂರು' ಎಂದಾಗಿದೆ ಎಂದು ಪ್ರತೀತಿ.

ಹಿನ್ನೆಲೆಸಂಪಾದಿಸಿ

ಮಹಾಭಾರತ ಕಾಲದಲ್ಲಿ ಅರ್ಜುನನ್ನು ಪರೀಕ್ಷಿಸಲು ಧರೆಗಿಳಿದ ಜಗದ ಮಾತಾಪಿತರುಗಳು ಬೇಡ ಬೇಡತಿಯರಾಗಿ ನಡೆದಾಡಿದ ಪುಣ್ಯ ಭೂಮಿಯಾಗಿದೆ. ಘೋರಾರಣ್ಯದಲ್ಲಿ ತಪೋನಿರತ ಅರ್ಜುನನಿಗೂ ಕಿರಾತನಿಗೂ ಹಂದಿಯ ನೆಪದಲ್ಲಿ ವಾಗ್ವಾದ ಉಂಟಾಗಿ, ನರಹರರಲ್ಲಿ ನಡೆದ ಯುದದಿಂದಲಾಗಿಯೇ ಈ ಕ್ಷೇತ್ರ ಉರುಡೂರು ಎಂದು ಖ್ಯಾತವಾಯಿತು.

ಸ್ಥಳದ ರೂಪಿಕರಣಸಂಪಾದಿಸಿ

ಈ ಪ್ರತೀತಿಯ ಮೂಲಕ ಶಿವ ಕ್ಷೇತ್ರವಾದ ಅಡೂರು ಸ್ಥಳ ನಾಮ ರೂಪಿತವಾಯಿತು. ಈ ಪ್ರತೀತಿಯು ಮಹಾಭಾರತದ ಇಂದ್ರಕೀಲ ಪ್ರಸಂಗವನ್ನು ನಮ್ಮ ಕಣ್ಣ ಮುಂದೆ ನಿಲ್ಲಿಸುತ್ತದೆ. ಸಮುದಾಯ ಮಹಾಭಾರತದ ಕಥಾನಾಯಕರು ನಮ್ಮೂರಿಗೆ ಬಂದಿದ್ದರೆನ್ನುವ ಮೂಲಕ ಈ ಸ್ಥಳವು ಪುರಾತನವಾದುದೆಂದು ನಂಬಿಸುತ್ತದೆ. ಜೊತೆಗೆ ಈ ಸ್ದಳಕ್ಕೊಂದು ಮಹಿಮೆಯ ಆವರಣವನ್ನು ಸೃಷ್ಟಿಸಿಕೊಂಡಿದೆ.[೧]

ದೈವ ಸಾನಿಧ್ಯಸಂಪಾದಿಸಿ

ತೆಂಕುಭಾಗದ ರಕ್ಷಕ ಶ್ರೀಗುಳಿಗ ದೈವವಾಗಿದೆ. ಕೊಪ್ಪಲ ಗುಳಿಗ ಎಂದು ಕರೆಯಲ್ಪಡುವ ದೈವ ಸಾನ್ನಿಧ್ಯವು ಅನತಿ ದೂರದ ಕೊಪ್ಪಲದಲ್ಲಿದೆ. ಶ್ರೀ ಸಾನ್ನಿಧ್ಯ ಕಟ್ಟೆಯ ನವೀಕರಣ ಸುತ್ತು ಆವರಣಗೋಡೆ ನಿರ್ಮಾಣ ಮತ್ತು ದಾರಿಯನ್ನು ಸರಿಪಡಿಸುವುದು.[೨]

ಉಲ್ಲೇಖಗಳುಸಂಪಾದಿಸಿ

  1. ಸ್ಥಳ ನಾಮಗಳು ಮತ್ತು ಐತಿಹ್ಯಗಳು ೨೦೧೬, ಪುಟ ಸಂಖ್ಯೆ ;07,ಸಂಪಾದಕರು ;ಪೂವಪ್ಪ ಕಣಿಯೂರು ಕನ್ನಡ ಸಂಘ
  2. Adoor Village in Kasaragod (Kasaragod) Kerala | villageinfo.in https://villageinfo.in › ... › Kasaragod
"https://kn.wikipedia.org/w/index.php?title=ಅಡೂರು&oldid=1017898" ಇಂದ ಪಡೆಯಲ್ಪಟ್ಟಿದೆ