ಅಡಿಪೋಮಾಸ್ಟಿಯಾ
ಅಡಿಪೋಮಾಸ್ಟಿಯಾ ಅಥವಾ ಲಿಪೋಮಾಸ್ಟಿಯಾ, ಇದನ್ನು ಆಡುಮಾತಿನಲ್ಲಿ ಕೊಬ್ಬಿನ ಸ್ತನಗಳು ಎಂದೂ ಕರೆಯಲಾಗುತ್ತದೆ. ಇದು ನಿಜವಾದ ಸ್ತನ ಗ್ರಂಥಿಗಳ ಅಂಗಾಂಶವಿಲ್ಲದೆಯೇ ಸ್ತನಗಳಲ್ಲಿ ಹೆಚ್ಚುವರಿ ಚರ್ಮ ಮತ್ತು ಅಡಿಪೋಸ್ ಅಂಗಾಂಶಗಳ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಗಿದೆ.
ಯಾರಲ್ಲಿ ಕಂಡುಬರುತ್ತದೆ?
ಬದಲಾಯಿಸಿಕೊಬ್ಬಿನ ಸ್ತನಗಳು ಸಾಮಾನ್ಯವಾಗಿ ಸ್ಥೂಲಕಾಯತೆಯಿರುವ ಪುರುಷರಲ್ಲಿ ಕಂಡುಬರುತ್ತದೆ. ಭಾರೀ ತೂಕ ನಷ್ಟಕ್ಕೆ ಒಳಗಾದ ಪುರುಷರಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರ ಸಮಾನಾರ್ಥಕ ಪದವೆಂದರೆ ಸೂಡೋಜೆನೆನೊಮಾಸ್ಟಿಯಾ.
ಭಿನ್ನತೆ
ಬದಲಾಯಿಸಿಇದು ಗೈನೆಕೊಮಾಸ್ಟಿಯಾ (ಮಹಿಳಾ ಸ್ತನಗಳು) ದಿಂದ ಪ್ರತ್ಯೇಕವಾಗಿದೆ ಮತ್ತು ಭಿನ್ನ ಪರಿಸ್ಥಿತಿಯನ್ನು ಹೊಂದಿದೆ. ಇದು ಪುರುಷದಲ್ಲಿ ನಿಜವಾದ ಗ್ರಂಥಿಗಳ ಸ್ತನ ಬೆಳವಣಿಗೆಯನ್ನು ಒಳಗೊಂಡಿರುತ್ತದೆ. ಈ ಎರಡೂ ಪರಿಸ್ಥಿತಿಗಳನ್ನೂ ಗ್ರಂಥಿಗಳ ಅಂಗಾಂಶದ ಇರುವಿಕೆಯನ್ನು ಸಾಮಾನ್ಯ ಸ್ಪರ್ಷದಿಂದ ಸುಲಭವಾಗಿ ಗುರುತಿಸಬಹುದು. ಇನ್ನೊಂದು ವ್ಯತ್ಯಾಸವೆಂದರೆ, ಸೂಡೋಜೆನೆಕೊಮಾಸ್ಟಿಯಾದಲ್ಲಿ ಸ್ತನ ನೋವು / ಮೃದುತ್ವವು ಕಂಡುಬರುವುದಿಲ್ಲ. ಕೆಲವೊಮ್ಮೆ, ಗೈನೆಕೊಮಾಸ್ಟಿಯಾ ಮತ್ತು ಸೂಡೋಜೆನೆಕೊಮಾಸ್ಟಿಯಾಗಳು ಒಟ್ಟಿಗೇ ಇರುತ್ತವೆ. ಕೊಬ್ಬಿನ ಅಂಗಾಂಶವು ಅರೋಮಾಟೇಸ್ ನ್ನು ತೋರಿಸಿದರೆ, ಈಸ್ಟ್ರೊಜೆನ್ ಸಂಶ್ಲೇಷಣೆಗೆ ಕಿಣ್ವ ಕಾರಣವಾಗುತ್ತದೆ. ಈಸ್ಟ್ರೊಜೆನ್ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಹೊಂದಿರುವ ಪುರುಷರಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ, ಇದರಿಂದಾಗಿ ಗ್ರಂಥಿಗಳಲ್ಲಿ ಏಕಕಾಲಿಕ ಹಿಗ್ಗುವಿಕೆ ಕಂಡುಬರುತ್ತದೆ.[೧]
ಕಾರಣ
ಬದಲಾಯಿಸಿಸೂಡೋಜೆನೆಕೊಮಾಸ್ಟಿಯಾಗೆ ಕಾರಣವಾಗುವ ಮುಖ್ಯ ಅಂಶಗಳೆಂದರೆ, ಪುರುಷರಲ್ಲಿ ಹೆಚ್ಚಿನ ಈಸ್ಟ್ರೊಜೆನ್ ಮಟ್ಟ, ಕಡಿಮೆಯಾಗುವ ಟೆಸ್ಟೋಸ್ಟೆರಾನ್ ಮಟ್ಟ ಮತ್ತು ಕಡಿಮೆ ಚಯಾಪಚಯ ಕ್ರಿಯೆ. ಪುರುಷರಲ್ಲಿ ಎದೆಯ ದೇಹ ಕೊಬ್ಬು ಸಾಂದ್ರತೆಯುಳ್ಳದ್ದಾಗಿದ್ದರೂ, ಹೆಚ್ಚಿನ ಮಟ್ಟದ ಈಸ್ಟ್ರೊಜೆನ್ ಗಳ ಬೇರ್ಪಡಿಸಲಾಗದ ಅಂಶವಿದೆ. ಪುರುಷರ ಸ್ತನಗಳಲ್ಲಿ ಹೆಚ್ಚುವರಿ ಚರ್ಮ ಮತ್ತು ಅಡಿಪೋಸ್ ಅಂಗಾಂಶಗಳ ಬೆಳವಣಿಗೆ ಎಂದು ಇದನ್ನು ಗುರುತಿಸಬಹುದು.[೨]
ಉಲ್ಲೇಖಗಳು
ಬದಲಾಯಿಸಿ- ↑ https://www.prajavani.net/article/%E0%B2%97%E0%B2%82%E0%B2%A1%E0%B2%B8%E0%B2%B0-%E0%B2%A6%E0%B3%8A%E0%B2%A1%E0%B3%8D%E0%B2%A1-%E0%B2%B8%E0%B3%8D%E0%B2%A4%E0%B2%A8
- ↑ "ಆರ್ಕೈವ್ ನಕಲು". Archived from the original on 2016-11-29. Retrieved 2018-10-08.