ಅಜಯ್ ವರ್ಮಾ ಅಲ್ಲೂರಿ
ಅಜಯ್ ವರ್ಮಾ ಅಲ್ಲೂರಿ ಕನ್ನಡದ ಹೊಸ ತಲೆಮಾರಿನ ಲೇಖಕ ಮತ್ತು ಅನುವಾದಕ. ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಇವರ ಕವಿತೆಗಳು ಇಂಗ್ಲಿಷ್, ಹಿಂದಿ, ಒಡಿಯಾ, ಮಲಯಾಳಂ ಭಾಷೆಗಳಿಗೆ ಅನುವಾದಗೊಂಡಿವೆ.
ಅಜಯ್ ವರ್ಮಾ ಅಲ್ಲೂರಿ | |
---|---|
ಜನನ | 07/09/1996 ಸಿಂಧನೂರು, ರಾಯಚೂರು ಜಿಲ್ಲೆ, ಕರ್ನಾಟಕ |
ವೃತ್ತಿ | ಕವಿ, ಕಥೆಗಾರ, ಅನುವಾದಕ |
ರಾಷ್ಟ್ರೀಯತೆ | ಭಾರತೀಯ |
ವಿಷಯ | ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ |
ಬಾಲ್ಯ ಮತ್ತು ವಿದ್ಯಾಭ್ಯಾಸ
ಬದಲಾಯಿಸಿಅಜಯ್ ವರ್ಮಾ ಅಲ್ಲೂರಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ 1996ರಲ್ಲಿ ಜನಿಸಿದ್ದಾರೆ. ಇವರ ತಂದೆ ಅಲ್ಲುರಿ ಕೊಂಡರಾಜು, ತಾಯಿ ರಾಣಿ. ಇವರ ಮನೆ ಮಾತು ತೆಲುಗು. ತಮ್ಮ ಶಾಲಾ ಮತ್ತು ಪದವಿ ಪೂರ್ಣ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿದ ಬಳಿಕ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ (ಭೌತಶಾಸ್ತ್ರ) ಹಾಗೂ ಭಾಷಾಂತರದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದಾರೆ. ಸದ್ಯ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ (ಇಂಗ್ಲಿಷ್) ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ಕೃತಿಗಳು
ಬದಲಾಯಿಸಿಕಾವ್ಯ
ಬದಲಾಯಿಸಿ- ಗಗನಸಿಂಧು - ಕಾವ್ಯ - 2015]
ಅನುವಾದ
ಬದಲಾಯಿಸಿ- ಡಯಾನಾ ಮರ - ಅನುವಾದಿತ ಕಾವ್ಯ - 2018
- ಕಲಲ ಕನ್ನೀಟಿ ಪಾಟ - ಅನುವಾದಿತ ಕಾವ್ಯ- 2019
- ವಿಮುಕ್ತೆ - ಅನುವಾದಿತ ಕಥೆಗಳು - 2019
- ನಾಲ್ಕನೇ ಎಕರೆ - ಅನುವಾದಿತ ನೀಳ್ಗತೆ - 2021
- ಆರ್ ಎಸ್ ಎಸ್: ಲೋತುಪಾತುಲು - 2022
ಪ್ರಶಸ್ತಿಗಳು
ಬದಲಾಯಿಸಿಕಳೆದ ಎರಡು-ಮೂರು ವರ್ಷಗಳಿಂದ ಈಚೆಗೆ ಅನುವಾದ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೆಲುಗು ಲೇಖಕಿ ಓಲ್ಗಾ ಅವರ 'ವಿಮುಕ್ತೆ' ಕೃತಿಯ ಅನುವಾದಕ್ಕಾಗಿ ಕುವೆಂಪು ಭಾಷಾಭಾರತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೨೦ನೇ ಸಾಲಿನ ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮೂಲಗಳು
ಬದಲಾಯಿಸಿhttps://www.bookbrahma.com/author/ajay-varma-alluri
https://www.kuvempubhashabharathi.org/books/translators_single.php?transID=26[ಶಾಶ್ವತವಾಗಿ ಮಡಿದ ಕೊಂಡಿ]