ಅಚ್ಚು (ವಾಹನ)
ಅಚ್ಚು ತಿರುಗುತ್ತಿರುವ ಗಾಲಿ ಅಥವಾ ಗೇರ್‍ಗಾಗಿ ಮಧ್ಯದಲ್ಲಿರುವ ನಡುಕಡ್ಡಿ. ಗಾಲಿಯಿರುವ ವಾಹನಗಳಲ್ಲಿ, ಅಚ್ಚನ್ನು ಗಾಲಿಗಳಿಗೆ ಬೆಸೆಯಬಹುದು, ಇದರಲ್ಲಿ ಅಚ್ಚು ಗಾಲಿಗಳ ಜೊತೆ ತಿರುಗುತ್ತದೆ, ಅಥವಾ ಅಚ್ಚನ್ನು ವಾಹನಕ್ಕೆ ಬೆಸೆಯಬಹುದು, ಇದರಲ್ಲಿ ಗಾಲಿಗಳು ಅಚ್ಚಿನ ಸುತ್ತ ತಿರುಗುತ್ತವೆ. ಮೊದಲನೇ ಸಂದರ್ಭದಲ್ಲಿ, ಅಚ್ಚಿಗೆ ಆಧಾರ ನೀಡುವ ಸೇರಿಕೆ ಬಿಂದುಗಳ ಸ್ಥಳದಲ್ಲಿ ಆಧಾರ ಸಾಧನಗಳು ಅಥವಾ ಒಳಪದರಗಳನ್ನು ಒದಗಿಸಲಾಗುತ್ತದೆ. ಎರಡನೇ ಸಂದರ್ಭದಲ್ಲಿ, ಗಾಲಿ ಅಥವಾ ಗೇರ್‍ಗೆ ಅಚ್ಚಿನ ಸುತ್ತ ತಿರುಗಲು ಆಸ್ಪದನೀಡಲು ಆಧಾರ ಸಾಧನ ಅಥವಾ ಒಳಪದರವು ಗಾಲಿಯಲ್ಲಿನ ಮಧ್ಯದ ಕುಳಿಯ ಒಳಗೆ ಕುಳಿತಿರುತ್ತದೆ. ಕೆಲವೊಮ್ಮೆ, ವಿಶೇಷವಾಗಿ ಸೈಕಲ್‍ಗಳಲ್ಲಿ, ಎರಡನೇ ಪ್ರಕಾರದ ಅಚ್ಚನ್ನು ತಿರುಗು ಅಚ್ಚು ಎಂದು ಸೂಚಿಸಲಾಗುತ್ತದೆ.
ಕಟ್ಟುನಿಟ್ಟಾಗಿ ಹೇಳುವುದಾದರೆ, ಗಾಲಿಯ ಜೊತೆ ತಿರುಗುವ ನಡುಕಡ್ಡಿಯನ್ನು ಅಚ್ಚು ಎಂದು ಕರೆಯಲಾಗುತ್ತದೆ. ಆದರೆ, ಹೆಚ್ಚು ಸಡಿಲ ಬಳಕೆಯಲ್ಲಿ, ಸುತ್ತುವರಿದ ಅಚ್ಚಿನ ನೆಲೆಯನ್ನು ಒಳಗೊಂಡಂತೆ ಇಡೀ ಯಾಂತ್ರಿಕ ಸಮೂಹವನ್ನು ಅಚ್ಚು ಎಂದು ಕರೆಯಲಾಗುತ್ತದೆ.
ಅಚ್ಚುಗಳು ಬಹುತೇಕ ಬಳಕೆಯ ಗಾಲಿಯಿರುವ ವಾಹನಗಳ ಅವಿಭಾಜ್ಯ ಅಂಗವಾಗಿವೆ. ಶಕ್ತಿಯೊದಗಿಸುವ ಅಚ್ಚು ಅಕ್ಷಾಧಾರ ವ್ಯವಸ್ಥೆಯಲ್ಲಿ, ಅಚ್ಚುಗಳು ಚಾಲಕ ತಿರುಗುಬಲವನ್ನು ಗಾಲಿಗೆ ಪ್ರಸರಿಸುವ ಕೆಲಸ ಮಾಡುತ್ತವೆ, ಜೊತೆಗೆ ಗಾಲಿಗಳ ಸ್ಥಾನವನ್ನು ಒಂದಕ್ಕೊಂದಕ್ಕೆ ಮತ್ತು ವಾಹನ ಕಾಯಕ್ಕೆ ಸಾಪೇಕ್ಷವಾಗಿರುವಂತೆ ಸುಸ್ಥಿತಿಯಲ್ಲಿಡುವ ಕೆಲಸ ಕೂಡ. ಈ ವ್ಯವಸ್ಥೆಯಲ್ಲಿ ಅಚ್ಚುಗಳು ವಾಹನ ಮತ್ತು ಯಾವುದೇ ಸರಕಿನ ಭಾರವನ್ನು ಕೂಡ ಹೊರಬೇಕು. ಭಾರೀ ಟ್ರಕ್‍ಗಳು ಮತ್ತು ಕೆಲವು ಇಗ್ಗಾಲಿ ಹಗುರ ಟ್ರಕ್‍ಗಳು ಮತ್ತು ವ್ಯಾನ್‍ಗಳಲ್ಲಿನ ಮುಂದಿರುವ ಕಡ್ಡಿ ಅಚ್ಚಿನಂತಹ ಚಾಲನೆ ಮಾಡದ ಅಚ್ಚು ನಡುಕಡ್ಡಿಯನ್ನು ಹೊಂದಿರುವುದಿಲ್ಲ ಮತ್ತು ಕೇವಲ ಜೋಲಿಕೆ ಹಾಗೂ ವಾಹನ ನಡೆಸುವ ಘಟಕವಾಗಿ ಕೆಲಸ ಮಾಡುತ್ತದೆ.