ಅಗುವಾಡಾ ಕೋಟೆ
ಅಗುವಾಡಾ ಕೋಟೆ ಭಾರತದ ಗೋವಾದಲ್ಲಿ ಸ್ಥಿತವಾಗಿರುವ, ಚೆನ್ನಾಗಿ ಸಂರಕ್ಷಿತವಾದ ಹದಿನೇಳನೇ ಶತಮಾನದ ಪೋರ್ಚುಗೀಸ್ ಕೋಟೆಯಾಗಿದೆ. ಇದರ ಜೊತೆಗೆ ಒಂದು ದೀಪಗೃಹವಿದೆ. ಇದು ಅರಬ್ಬೀ ಸಮುದ್ರವನ್ನು ನೋಡುತ್ತಿರುವಂತೆ ಸಿಂಕೇರಿಮ್ ಬೀಚ್‍ನ ಹತ್ತಿರ ಸ್ಥಿತವಾಗಿದೆ.
ಡಚ್ಚರು ಮತ್ತು ಮರಾಠರ ವಿರುದ್ಧ ರಕ್ಷಣೆ ಒದಗಿಸಲು ಈ ಕೋಟೆಯನ್ನು ೧೬೧೨ರಲ್ಲಿ ನಿರ್ಮಿಸಲಾಯಿತು. ಆ ಕಾಲದಲ್ಲಿ ಯೂರೋಪ್‍ನಿಂದ ಬರುವ ನೌಕೆಗಳಿಗೆ ಇದು ಸಂದರ್ಭ ಬಿಂದುವಾಗಿತ್ತು. ಈ ಕೋಟೆಯು ಮಹದಾಯಿ ನದಿಯ ತೀರದಲ್ಲಿ, ಕ್ಯಾಂಡೊಲಿಮ್‍ನ ದಕ್ಷಿಣಕ್ಕಿರುವ ಬೀಚ್‍ನ ಮೇಲೆ ನಿಂತಿದೆ.
ಕೋಟೆಯೊಳಗಿನ ಒಂದು ಸಿಹಿನೀರಿನ ಬುಗ್ಗೆ ನಿಲ್ಲುತ್ತಿದ್ದ ಹಡಗುಗಳಿಗೆ ನೀರನ್ನು ಪೂರೈಕೆ ಮಾಡುತ್ತಿತ್ತು. ಹೀಗೆ ಈ ಕೋಟೆಗೆ ಅಗುವಾಡಾ ಎಂಬ ಹೆಸರು ಬಂದಿತು: ಪೋರ್ಚುಗೀಸ್ ಭಾಷೆಯಲ್ಲಿ ಅಗುವಾಡಾ ಎಂದರೆ ನೀರಿರುವ ಎಂದಿದೆ.
ಛಾಯಾಂಕಣ
ಬದಲಾಯಿಸಿ-
ಅಗುವಾಡಾ ಕೊಟೆಯ ದೀಪಗೃಹ
-
ಮಾಹಿತಿ ಫಲಕ
-
ಅಗುವಾಡಾ ಕೋಟೆಯ (ಕೆಳಭಾಗದ) ರಕ್ಷಣಾತ್ಮಕ ಗೋಡೆ
-
ಅಗುವಾಡಾ ಕೋಟೆಯ (ಕೆಳಭಾಗದ) ರಕ್ಷಣಾತ್ಮಕ ಗೋಡೆ
-
ಅಗುವಾಡಾ ಕೋಟೆ (ಮೇಲ್ಭಾಗ)
-
ಅಗುವಾಡಾ ಕೋಟೆ (ಮೇಲ್ಭಾಗ)
-
ಅಗುವಾಡಾ ಕೋಟೆ (ಮೇಲ್ಭಾಗ)
-
ಅಗುವಾಡಾ ಕೋಟೆ (ಮೇಲ್ಭಾಗ)
-
ಅಗುವಾಡಾ ಕೋಟೆ (ಮೇಲ್ಭಾಗ)
ಹೊರಗಿನ ಕೊಂಡಿಗಳು
ಬದಲಾಯಿಸಿ- Fort Aguada Archived 2020-10-24 ವೇಬ್ಯಾಕ್ ಮೆಷಿನ್ ನಲ್ಲಿ. - spherical panorama 360°.
- Fort Agauda & nearby attractions