ಅಗಪಾಂತಸ್ ಹೂ ಬಿಡುವ ಲಶುನ (ಬಲ್ಖ್) ಸಸ್ಯಗಳಲ್ಲಿ ಬಹುಮುಖ್ಯ ಬಗೆಯದಾಗಿದ್ದು, ಲಿಲಿಯೇಸೀ ಕುಟುಂಬಕ್ಕೆ ಸೇರಿದೆ. ಇದೊಂದು ಜನಪ್ರಿಯ ಅಲಂಕಾರ ಸಸ್ಯ. ಇದನ್ನು ವಿಶಾಲವಾದ ಕುಂಡಗಳಲ್ಲಿ ಬೆಳೆಸಿ ದಾರಿ ಪಕ್ಕದಲ್ಲಿ ಮತ್ತು ಉದ್ಯಾನದ ಹಸಲೆಯ ತುದಿಗಳಲ್ಲಿ ಇಟ್ಟಾಗ ಬಹು ಸುಂದರವಾಗಿ ಕಾಣುತ್ತದೆ. ಅಗಪಾಂತಸ್ ಒಂದು ಋತುವಿನಲ್ಲಿ ತನ್ನ ಹಸಿರು ಭಾಗವನ್ನು ಹೊರವಾಗಿ ಬೆಳೆಸಿಕೊಂಡು, ಇನ್ನೊಂದು ಋತುವಿನಲ್ಲಿ ಸುಂದರವಾಗಿ ಹೂಬಿಡುವ ದ್ವೈವಾರ್ಷಿಕ ಸಸ್ಯ. ಈ ಸಸ್ಯದಲ್ಲಿ ಭೂಗತ ಗುಪ್ತಕಾಂಡವೂ ಉದ್ದವಾದ ಮತ್ತು ಕಿರಿದಾದ ಎಲೆಗಳೂ ಇವೆ. ಹೂಗೊಂಚಲು ಅಂಬೆಲ್ ಮಾದರಿಯದು. ಆರು ಕೇಸರಗಳೂ ಮೂರು ಕೋಶದ ಉನ್ನತಸ್ಥಿತಿಯ ಅಂಡಾಶಯವೂ ಇರುತ್ತವೆ. ಫಲ ಕ್ಯಾಪ್ಸೂಲ್ ಮಾದರಿಯದು.

ಅಗಪಾಂತಸ್
Agapanthus africanus
Scientific classification e
Unrecognized taxon (fix): Agapanthus
Type species
Agapanthus africanus
Synonyms[]
  • Tulbaghia Heist. 1755, rejected name, not L. 1771
  • Abumon Adans.
  • Mauhlia Dahl
Agapanthus flower and leaves

ಅಗಪಾಂತಸ್ ಆಫ್ರಿಕ್ಯಾನಸ್

ಬದಲಾಯಿಸಿ

ಅಗಪಾಂತಸ್ ಆಫ್ರಿಕ್ಯಾನಸ್ ಎಂಬುದು ಆಫ್ರಿಕದ ಮೂಲವಾಸಿ. ಇದರ ನೀಳಾಕಾರದ ಹಸಿರು ಕೊಳವೆ ಎಲೆ ನೋಡಲು ಅಂದವಾಗಿ ಕಾಣುತ್ತದೆ. ಹೂಗೊಂಚಲು ಅನೇಕ ಹೂಗಳನ್ನೊಳಗೊಂಡ ಅಂಬೆಲ್ ಮಾದರಿಯದು. ಪತ್ರಪುಷ್ಪಗಳೂ ದಳಗಳೂ ಸಂಯುಕ್ತರಚನೆಯನ್ನು ತಳೆದಿವೆ. ಪರಾಗಕೋಶಗಳು ಮೊದಲು ಹಳದಿಬಣ್ಣವಾಗಿದ್ದು ಅನಂತರ ಕಂದುಬಣ್ಣಕ್ಕೆ ತಿರುಗುವುದರಿಂದ ಬಹಳ ಆಕರ್ಷಕವಾಗಿ ಕಾಣುತ್ತವೆ.

ಸಸ್ಯಾಭಿವೃದ್ಧಿ

ಬದಲಾಯಿಸಿ

ಅಗಪಾಂತಸ್ ಸಸ್ಯಗಳನ್ನು ಚಿಕ್ಕ ಲಶುನಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಇದನ್ನು ಬೀಜಗಳಿಂದ ವೃದ್ಧಿಸ ಬಹುದಾದರೂ ಸಾಮಾನ್ಯವಾಗಿ ಲಶುನಗಳಿಂದಲೇ ಬೆಳೆಸುವುದು ವಾಡಿಕೆ. ಅನ್ಯಪರಾಗಸ್ಪರ್ಶದಿಂದ ಗರ್ಭಧಾರಣೆಯಾಗಿ ಉತ್ಪತ್ತಿಯಾಗುವ ಬೀಜಗಳಿಂದ ಬೆಳೆದರೆ ಮುಂದಿನ ಪೀಳಿಗೆಯ ಗಿಡಗಳಲ್ಲಿ ಮೂಲ ಗಿಡದ ಸೊಗಸು ಮಾಯವಾಗಬಹುದಾದ್ದರಿಂದ ಬೀಜಗಳ ಮೂಲಕ ಬೆಳೆಸುವುದು ವಾಡಿಕೆಯಲ್ಲಿಲ್ಲ. ಅಗಪಾಂತಸ್ ಸಸ್ಯಗಳು ಸಮುದ್ರಮಟ್ಟದಿಂದ 1000ಮೀ-2000ಮೀ ಎತ್ತರ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ದೃಢವಾಗಿ ಮತ್ತು ಆಳವಾಗಿ ಬೇರು ಬಿಡುವುದರಿಂದ, ಇವುಗಳ ಬೇಸಾಯಕ್ಕೆ ಹೆಚ್ಚಿನ ತೇವ ಅವಶ್ಯವಾದದ್ದರಿಂದ, ಇವುಗಳಿಗೆ ಕಾಲಕ್ಕೆ ಸರಿಯಾಗಿ ನೀರು ಕೊಡುವುದು ಅಗತ್ಯ. ಆದರೆ ಇವು ಜೌಗನ್ನು ಸಹಿಸುವ ಶಕ್ತಿಯನ್ನು ಪಡೆದಿಲ್ಲ. ಅಗಪಾಂತಸ್ ಸಸ್ಯಗಳು ಪಾಶರ್್ವನೆರಳಿನಲ್ಲಿ ಸಮೃದ್ಧಿಯಾಗಿ ಬೆಳೆದು ಹೂಬಿಡುತ್ತವೆ. ಜೊತೆಗೆ ಅವಕ್ಕೆ ಧಾರಾಳವಾದ ಗಾಳಿ ಬೆಳಕು ಅಗತ್ಯ. ಇವು ಫಲವತ್ತಾಗಿಲ್ಲದ ಮಣ್ಣಿನಲ್ಲಿ ಬೆಳೆಯಲಾರವಾದ್ದರಿಂದ ದ್ರಾವಣ ಗೊಬ್ಬರವನ್ನು ಎರಡು ವಾರಗಳಿಗೊಮ್ಮೆ ಕೊಡುತ್ತಿರಬೇಕು. ಕುಂಡದ ಮಣ್ಣನ್ನು ಕೊನೆಯಪಕ್ಷ ಮೂರು ವರ್ಷಗಳಿಗೆ ಒಂದು ಸಾರಿಯಾದರೂ ಬದಲಾಯಿಸಬೇಕು. ಅಗಪಾಂತಸ್ ಸಸ್ಯಗಳು ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹೂ ಬಿಡುತ್ತವೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Agapanthus". World Checklist of Selected Plant Families. Royal Botanic Gardens, Kew. Retrieved 2013-12-10.[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು

ಬದಲಾಯಿಸಿ
ಉಲ್ಲೇಖಗಳು At:
NMNH Department of Botany