ಅಕ್ಷತಾ ಹುಂಚದಕಟ್ಟೆ

ಅಕ್ಷತಾ ಹುಂಚದಕಟ್ಟೆ (ಹುಟ್ಟು: ೧೯೮೦) ಕನ್ನಡ ಭಾಷೆಯ ಕವಯತ್ರಿ, ವಿಮರ್ಶಕಿ, ಸಂಪಾದಕಿ ಮತ್ತು ಪ್ರಕಾಶಕಿ.[] ಕವನಸಂಕಲನಗಳು, ಪ್ರಬಂಧ ಲೇಖನಗಳನ್ನು ಪ್ರಕಟಿಸಿರುವ ಅಕ್ಷತಾ, ತಾವೇ ಆರಂಭಿಸಿದ 'ಅಹರ್ನಿಶಿ ಪ್ರಕಾಶನ'ದ ಮೂಲಕ ನೂರಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಡಿದಾಳು ಶಾಮಣ್ಣ ಅವರ ಆತ್ಮಕಥೆ 'ಕಾಡುತೊರೆಯ ಜಾಡು' ಕೃತಿಯ ನಿರೂಪಣೆಗಾಗಿ ಅಕ್ಷತಾ ಅವರಿಗೆ ೨೦೧೧ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.[] []

ಅಕ್ಷತಾ ಹುಂಚದಕಟ್ಟೆ
ಜನನ೧೯೮೦
ಹುಂಚದಕಟ್ಟೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ, ಕರ್ನಾಟಕ
ವೃತ್ತಿ
  • ಪ್ರಕಾಶಕಿ
  • ಲೇಖಕಿ
ಭಾಷೆಕನ್ನಡ
ಪ್ರಕಾರ/ಶೈಲಿಕವಿತೆ, ವಿಮರ್ಶೆ

ಬಾಲ್ಯ-ಶಿಕ್ಷಣ

ಬದಲಾಯಿಸಿ

ಅಕ್ಷತಾ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆಯಲ್ಲಿ. ತಂದೆ ಕೃಷ್ಣಮೂರ್ತಿ, ತಾಯಿ ಶೈಲಾ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ.[]

ಲೇಖಕಿಯಾಗಿ

ಬದಲಾಯಿಸಿ

'ಅಕ್ಷತಾ ಕೆ.' ಎಂಬ ಹೆಸರಿನಲ್ಲಿ "ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ" ಎಂಬ ಮೊದಲ ಕವನಸಂಕಲನ ಪ್ರಕಟವಾಯಿತು. ನಂತರ ಅಕ್ಷತಾ ಹುಂಚದಕಟ್ಟೆ ಎಂದೇ ಗುರುತಿಸಿಕೊಂಡ ಅವರು ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು.

ರೈತ ಹೋರಾಟಗಾರ ಕಡಿದಾಳ್ ಶಾಮಣ್ಣ ಅವರ ಆತ್ಮಕತೆ "ಕಾಡುತೊರೆಯ ಜಾಡು" ಕೃತಿಯನ್ನು ನಿರೂಪಿಸಿ, ಪ್ರಕಟಿಸಿದರು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆಯಿತು. ಕಿ. ರಂ. ನಾಗರಾಜ ಅವರ ಬೇಂದ್ರೆ ಕುರಿತ ಭಾಷಣಗಳನ್ನು ಬರಹ ರೂಪಕ್ಕೆ ತಂದು "ಮತ್ತೆ ಮತ್ತೆ ಬೇಂದ್ರೆ" ಪುಸ್ತಕ ಹೊರತಂದರು.

ಸಮಕಾಲೀನ ಮಾನವ ತಲ್ಲಣಗಳು, ಸಾಮಾಜಿಕ ಜೀವನದ ಸಂಘರ್ಷಗಳನ್ನು ತಮ್ಮ ಕವಿತೆಗಳ ಮೂಲಕ ಪ್ರಸ್ತುತ ಪಡಿಸುವ ಅಕ್ಷತಾ ಅವರ ಬರಹಗಳಲ್ಲಿ, ಸ್ತ್ರೀಸಂವೇದನೆಯ ದನಿಯೂ ಪ್ರಧಾನವಾಗಿದೆ.

ಕೃತಿಗಳು

ಬದಲಾಯಿಸಿ
ಕಾವ್ಯ
  • ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ
  • ನೀರ ಮೇಲಣ ಚಿತ್ರ[]
  • ಕಟ್ಟು-ಬಿಚ್ಚು

ಪ್ರಕಾಶಕಿಯಾಗಿ

ಬದಲಾಯಿಸಿ

ಜನಪ್ರಿಯ ಸಾಹಿತ್ಯದ ಭರದಲ್ಲಿ ಕನ್ನಡದ ಸಮಕಾಲೀನ ಸಾಹಿತಿಗಳ ಬರಹಗಳು ಸರಿಯಾಗಿ ಪ್ರಕಟಗೊಳ್ಳದ ಕೊರತೆಯನ್ನು ಕಂಡ ಅಕ್ಷತಾ ತಾವೇ ೨೦೦೮ರಲ್ಲಿ ಅಹರ್ನಿಶಿ ಪ್ರಕಾಶನ ಆರಂಭಿಸಿದರು.[] ಈವರೆಗೆ ೮೦ಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿರುವ ಅಹರ್ನಿಶಿ ಪ್ರಕಾಶನವು ಹೊಸಲೇಖಕರನ್ನು ಗುರುತಿಸುವ, ಅವರ ಕೃತಿಗಳನ್ನು ಪ್ರಕಟಿಸುವ ಕಾರ್ಯದಲ್ಲಿ ತೊಡಗಿದೆ.

ಅಹರ್ನಿಶಿ ಪ್ರಕಾಶನ ಪ್ರಕಟಿಸಿದ ಕೆಲವು ಪುಸ್ತಕಗಳು
  • ಕಾಡುತೊರೆಯ ಜಾಡು (ಆತ್ಮಕತೆ)
  • ನೀರ ಮೇಲಿನ ಚಿತ್ರ (ಕಾವ್ಯ)
  • ನಾಳೀನ ಚಿಂತ್ಯಾಕ (ನಟಿ ಶಾಂತಾ ಹುಬ್ಳೀಕರ್ ಆತ್ಮಕತೆ)
  • ಮತ್ತೆ ಮತ್ತೆ ಬೇಂದ್ರೆ (ಭಾಷಣ ಬರಹ)
  • ನಮ್ಮ ಶಾಮಣ್ಣ (ಸಂಪಾದನೆ)[]
  • ಅನುದಿನದ ಅಂತರಗಂಗೆ (ಪ್ರತಿಭಾ ನಂದಕುಮಾರ್ ಅವರ ಆತ್ಮಕತೆ) []
  • ಕಾಗೆ ಮುಟ್ಟಿದ ನೀರು (ಲೇಖನಗಳು)
  • ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ (ಕೆ. ವಿ. ನಾರಾಯಣ)
  • ಅಮರ ಸುಳ್ಯದ ರೈತ ಹೋರಾಟ (ಪುರುಷೋತ್ತಮ ಬಿಳಿಮಲೆ)
  • ಸ್ತ್ರೀವಾದ ಮತ್ತು ಲೈಂಗಿಕತಾವಾದ (ಎಚ್. ಎಸ್. ಶ್ರೀಮತಿ)
  • ಗಾಂಧಿ ಬಂದ (ಎಚ್. ನಾಗವೇಣಿ)

ಮುಂತಾದವು

ಪ್ರಶಸ್ತಿ-ಪುರಸ್ಕಾರಗಳು

ಬದಲಾಯಿಸಿ

ಉಲ್ಲೇಖನಗಳು

ಬದಲಾಯಿಸಿ
  1. ೧.೦ ೧.೧ Pratibha Nandakumar (4 December 2016). "NO LONGER VOICES FROM THE MARGINS". Bangalore Mirror. Retrieved 21 May 2021.
  2. "ಪ್ರಶಸ್ತಿ ಹಿಂತಿರುಗಿಸಿದ ಅಕ್ಷತಾ ಹುಂಚದಕಟ್ಟೆ". Kannada Prabha. 19 August 2015. Retrieved 21 May 2021.
  3. "Writer to return award". The Hindu. 19 October 2015. Retrieved 21 May 2021.
  4. "ಕವಯತ್ರಿ ಅಕ್ಷತಾ ಹುಂಚದಕಟ್ಟೆ". Book Brahma. Retrieved 21 May 2021.
  5. Karunya (2 February 2016). "ನೀರ ಮೇಲಣ ಚಿತ್ರ: ಕನಸೊಂದ ಮೆತ್ತಿಕೊಂಡ ಕಣ್ಣ ರೆಪ್ಪೆ". Varthabharati. Retrieved 21 May 2021.
  6. "A living institution". The Hindu. 21 April 2016. Retrieved 21 April 2021.
  7. Amulya B. (6 March 2021). "Stories we build, stories we tell". Deccan Herald. Retrieved 21 May 2021.
  8. "ವಿಜಯರಾಘವನ್, ಅಕ್ಷತಾಗೆ ಪುತಿನ ಕಾವ್ಯ ಪ್ರಶಸ್ತಿ". Prajavani. 23 December 2016. Retrieved 21 May 2021.