ಅಕ್ಯಾಬ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಅಕ್ಯಾಬ್ ಮಯನ್ಮಾರ್ ನ ಅರಕಾನ್ ಪ್ರಾಂತ್ಯದ ಪಶ್ಚಿಮ ತೀರದಲ್ಲಿ ಮಾಯುಕಲಾಡನ್ ಮತ್ತು ಲೆಮ್ರೊ ನದಿಗಳ ಸಂಗಮದಲ್ಲಿರುವ ಮುಖ್ಯ ರೇವುಪಟ್ಟಣ ಹಿಂದೆ ಮೀನುಗಾರಿಕೆಯ ಒಂದು ಹಳ್ಳಿಯಾಗಿದ್ದು ಇಂದು ಮಯನ್ಮಾರಿನ ಒಂದು ಪ್ರಮುಖ ರೇವುಪಟ್ಟಣವಾಗಿ ಬೆಳೆದಿದೆ. ಬೌದ್ಧರೇ 1/3 ಭಾಗದಷ್ಟಿದ್ದಾರೆ. ಅಕ್ಕಿಯನ್ನು ಹೆಚ್ಚಾಗಿ ರಫ್ತು ಮಾಡುತ್ತಾರೆ. ಇಲ್ಲಿ ಅನೇಕ ಸಾರ್ವಜನಿಕ ಕಟ್ಟಡಗಳ ಜೊತೆಗೆ ದೊಡ್ಡ ಅಕ್ಕಿ ಗಿರಣಿಗಳೂ ಇವೆ.
ಸಿಟ್ವೆ ಪಟ್ಟಣವು ಹಿಂದೆ ಅಕ್ಯಾಬ್ ಎಂದು ಕರೆಯುಲಾಗುತ್ತಿತ್ತು. ಅಕ್ಯಾಬ್ ಮ್ಯಾನ್ಮಾರ್‍ನ ರಾಖಿನೆ ರಾಜ್ಯದ ರಾಜಧಾನಿ. ಸಿಟ್ವೆ, ಸೈಟ್‍ವೇ ಎಂದು ರಾಖಿನೆ ಭಾಷೆಯಲ್ಲಿ ಉಚ್ಚರಿಸಲಾಗುತ್ತದೆ. ಈ ತಾಣವು ಬಂಗಾಳ ಕೊಲ್ಲಿಯಲ್ಲಿ ಕೊನೆಗೊಳ್ಳುವ ಕಲದನ್, ಮಯು, ಮತ್ತು ಲೇ ಮ್ರೊ ನದಿಗಳ ರಚಿಸುವ ಸಣ್ಣ ದ್ವೀಪದಲ್ಲಿ ಇದೆ. ನಗರ ೧೮೧,000 ನಿವಾಸಿಗಳನ್ನು (೨೦೦೬) ಹೊಂದಿದೆ. ಇದು ಸಿಟ್ವೆ ಉಪಜಿಲ್ಲೆ ಮತ್ತು ಸಿಟ್ವೆ ಜಿಲ್ಲೆಯ ಆಡಳಿತ ಕ್ಷೇತ್ರವಾಗಿದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: