ಅಂಶುಮಂತ ಅಯೋಧ್ಯೆಯ ಸಗರ ಚಕ್ರವರ್ತಿಯ ಮೊಮ್ಮಗ. ಸಗರ ಅಶ್ವಮೇಧಯಾಗ ಪ್ರಾರಂಭಿಸಿದಾಗ ಯಾಗಾಶ್ವವನ್ನು ದೇವೇಂದ್ರ ಅಪಹರಿಸಿ ಪಾತಾಳಲೋಕದಲ್ಲಿಟ್ಟನು. ಆ ಅಶ್ವವನ್ನು ತರುವುದಕ್ಕಾಗಿ ಸಗರನ 60,000 ಮಕ್ಕಳು ಪಾತಾಳಕ್ಕೆ ಹೋಗಿ ಅಲ್ಲಿ ಕಪಿಲಮಹರ್ಷಿಯನ್ನು ಕೆಣಕಿ ಅವನ ಕೋಪಾಗ್ನಿಯಲ್ಲಿ ಬೆಂದು ಭಸ್ಮವಾದರು. ಪ್ರಾಜ್ಞನೂ ಸದ್ಗುಣಿಯೂ ಆದ ಅಂಶುಮಂತ ಹೋಗಿ ಆ ಕುದುರೆಯನ್ನು ತಂದು ಯಾಗ ಪುರ್ಣಗೊಳ್ಳುವಂತೆ ಮಾಡಿದ. ಸಗರ ಸ್ವರ್ಗಸ್ಥನಾದ ಮೇಲೆ ಅಂಶುಮಂತ ಪಟ್ಟಾಭಿಷಿಕ್ತನಾದ. ಇವನ ಅನಂತರ ದಿಲೀಪ, ಭಗೀರಥ ಮುಂತಾದವರು ರಾಜ್ಯವನ್ನು ಆಳಿದರು.[].[]). 

ಉಲ್ಲೇಖಗಳು

ಬದಲಾಯಿಸಿ
  1. http://www.mahabharataonline.com/translation/mahabharata_03107.php
  2. "ಆರ್ಕೈವ್ ನಕಲು". Archived from the original on 2016-12-07. Retrieved 2017-07-23.
"https://kn.wikipedia.org/w/index.php?title=ಅಂಶುಮಂತ&oldid=1052677" ಇಂದ ಪಡೆಯಲ್ಪಟ್ಟಿದೆ