ಅಂತಾರಾಷ್ಟ್ರೀಯ ಶಾಂತಿ ದಿನ

 

ಅಂತಾರಾಷ್ಟ್ರೀಯ ಶಾಂತಿ ದಿನ, (ಕೆಲವೊಮ್ಮೆ ಅಧಿಕೃತವಾಗಿ ವಿಶ್ವ ಶಾಂತಿ ದಿನ ಎಂದು ಕರೆಯಲಾಗುತ್ತದೆ) ಇದನ್ನು ವಿಶ್ವಸಂಸ್ಥೆಯ ಘೋಷಣೆಯಂತೆ ವಾರ್ಷಿಕವಾಗಿ ಸೆಪ್ಟೆಂಬರ್ 21 ರಂದು ಆಚರಿಸಲಾಗುತ್ತದೆ. ಇದು ವಿಶ್ವ ಶಾಂತಿಗೆ , ನಿರ್ದಿಷ್ಟವಾಗಿ ಯುದ್ಧ ಮತ್ತು ಹಿಂಸೆಯ ಅನುಪಸ್ಥಿತಿಗೆ ಸಮರ್ಪಿತವಾಗಿದೆ- ಉದಾಹರಣೆಗೆ ಮಾನವೀಯ ನೆರವು ಒದಗಿಸಲು ಯುದ್ಧ ವಲಯದಲ್ಲಿ ತಾತ್ಕಾಲಿಕ ಕದನ ವಿರಾಮ ಉಂಟುಮಾಡಬಹುದು. ಈ ದಿನವನ್ನು ಮೊದಲು 1981 ರಲ್ಲಿ ಆಚರಿಸಲಾಯಿತು ಮತ್ತು ಇದನ್ನು ಅನೇಕ ರಾಷ್ಟ್ರಗಳು, ರಾಜಕೀಯ ಗುಂಪುಗಳು, ಮಿಲಿಟರಿ ಗುಂಪುಗಳು ಮತ್ತು ಜನರು ಆಚರಿಸಿದರು. []

ದಿನವನ್ನು ಉದ್ಘಾಟಿಸಲು, ವಿಶ್ವಸಂಸ್ಥೆಯ ಶಾಂತಿಗಂಟೆಯನ್ನು ನ್ಯೂಯಾರ್ಕ್ ಸಿಟಿಯಲ್ಲಿ ಇರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಬಾರಿಸಲಾಗುತ್ತದೆ. ಈ ಗಂಟೆಯನ್ನು ಆಫ್ರಿಕಾವನ್ನು ಹೊರತುಪಡಿಸಿ ಎಲ್ಲಾ ಖಂಡಗಳ ಮಕ್ಕಳು ದಾನ ಮಾಡಿದ ನಾಣ್ಯಗಳಿಂದ ತಯಾರಿಸಲಾಗಿದ್ದು ಜಪಾನಿನ ವಿಶ್ವಸಂಸ್ಥೆಯ ಅಸೋಸಿಯೇಶನ್ ನಿಂದ "ಯುದ್ಧದ ಮಾನವ ವೆಚ್ಚದ ಜ್ಞಾಪಕಾರ್ಥ" ಕೊಡುಗೆಯಾಗಿದೆ; ಅದರ ಬದಿಯಲ್ಲಿ "ಸಂಪೂರ್ಣ ವಿಶ್ವ ಶಾಂತಿಯು ಚಿರಾಯುವಾಗಲಿ" ಎಂದು ಬರೆಯಲಾಗಿದೆ. []

ಇತಿಹಾಸ

ಬದಲಾಯಿಸಿ

1981– ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ನಿರ್ಣಯದ ಅಂಗೀಕಾರ

ಬದಲಾಯಿಸಿ

ವಿಶ್ವಸಂಸ್ಥೆಯ ಸಾಮಾನ್ಯಸಭೆಯು , ಯುನೈಟೆಡ್ ಕಿಂಗ್‌ಡಮ್ ಮತ್ತು ಕೋಸ್ಟರಿಕಾ ಪ್ರಾಯೋಜಿಸಿದ ನಿರ್ಣಯದಲ್ಲಿ , [] ಅಂತರಾಷ್ಟ್ರೀಯ ಶಾಂತಿ ದಿನವನ್ನು , ಶಾಂತಿಯ ಆದರ್ಶಗಳನ್ನು ಸ್ಮರಿಸಲು ಮತ್ತು ಬಲಪಡಿಸಲು ಮೀಸಲಾಗಿಡುವುದಾಗಿ ಘೋಷಿಸಿತು. [] ಆರಂಭದಲ್ಲಿ ಆಯ್ಕೆ ಮಾಡಿದ ದಿನಾಂಕವು ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನಗಳ ನಿಯಮಿತ ಆರಂಭಿಕ ದಿನವಾದ , ಸೆಪ್ಟೆಂಬರ್ ಮೂರನೇ ಮಂಗಳವಾರವಾಗಿತ್ತು. [] (ಇದನ್ನು 2001 ರಲ್ಲಿ ಪ್ರಸ್ತುತ ವಾರ್ಷಿಕ ಆಚರಣೆಯಾದ 21 ಸೆಪ್ಟೆಂಬರ್ ಗೆ ಬದಲಾಯಿಸಲಾಯಿತು - ಈ ಕುರಿತು ಹೆಚ್ಚಿನ ಮಾಹಿತಿಗೆ ಕೆಳಗೆ 2001ರ ಅಡಿಯಲ್ಲಿ ನೋಡಿ. )

1983 ರಲ್ಲಿ ಆರಂಭಗೊಂಡು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕೋರಿಕೆಯ ಮೇರೆಗೆ, ಶಾಂತಿ ಮಾರ್ಗದ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ, "ವಿ ದ ಪೀಪಲ್ಸ್(ನಾವು ಜನರು)" ಉಪಕ್ರಮ(ಇನಿಶಿಯೇಟಿವ್)ದ ವಾರ್ಷಿಕ ವರದಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸಲಾಗುತ್ತಿದೆ. [] 2006 ರಲ್ಲಿ ಹೆಸರನ್ನು "ವಿ ದ ಪೀಪಲ್ಸ್" ಇನಿಶಿಯೇಟಿವ್ ನಿಂದ "ಕಲ್ಚರ್ ಆಫ್ ಪೀಸ್ ಇನಿಶಿಯೇಟಿವ್" ಎಂದು ಬದಲಾಯಿಸಲಾಯಿತು. []

2001 ರಲ್ಲಿ ಸಾಮಾನ್ಯಸಭೆಯ ಆರಂಭದ ದಿನವನ್ನು ಸೆಪ್ಟೆಂಬರ್ 11 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಅದೇ ದಿನ ಬೆಳಿಗ್ಗೆ , ಸಾಮಾನ್ಯವಾಗಿ 9/11 ಎಂದು ಉಲ್ಲೇಖಿಸಲಾಗುವ, ಸೆಪ್ಟೆಂಬರ್ 11 ರ ದಾಳಿಯನ್ನು ಉಗ್ರಗಾಮಿ ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪಾದ ಅಲ್-ಖೈದಾ ಸಂಘಟನೆಯು ಅಮೇರಿಕಾ ಸಂಯುಕ್ತ ಸಂಸ್ಥಾನದ ವಿರುದ್ಧ ನಾಲ್ಕು ಸಂಘಟಿತ ಭಯೋತ್ಪಾದಕ ದಾಳಿಗಳನ್ನು ವಿಶ್ವಸಂಸ್ಥೆಯ ಕಚೇರಿಯಿಂದ ಸ್ವಲ್ಪ ದೂರದಲ್ಲಿ ಮಾಡಿತು. ಆ ವರ್ಷವೇ 2002 ರಲ್ಲಿ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಶಾಂತಿ ದಿನಯ ಆಚರಣೆಯನ್ನು ಮೂರನೆಯ ಮಂಗಳವಾರದಿಂದ ನಿರ್ದಿಷ್ಟವಾಗಿ ಸೆಪ್ಟೆಂಬರ್ ಇಪ್ಪತ್ತೊಂದನೇ ದಿನಕ್ಕೆ ಬದಲಾಯಿಸಲಾಯಿತು. ಮತ್ತು ಆ ದಿನವನ್ನು ಜಾಗತಿಕ ಕದನ ವಿರಾಮ ಮತ್ತು ಅಹಿಂಸೆಯ ದಿನ ಕೂಡ ಎಂದು ಘೋಷಿಸಲಾಯಿತು.

 
ಜಿನೀವಾದಲ್ಲಿ 2009ರ ಅಂತರಾಷ್ಟ್ರೀಯ ಶಾಂತಿ ದಿನದಂದು ಮಕ್ಕಳಿಂದ ಚಿತ್ರಕಲೆ.
 
ಏಕ್ತಾ ಪರಿಷತ್ ( ಗಾಂಧಿ ಭವನ, ಭೋಪಾಲ್), ಸೆಪ್ಟೆಂಬರ್ 2014ರಲ್ಲಿ ಆಯೋಜಿಸಿದ ಅಂತರರಾಷ್ಟ್ರೀಯ ಶಾಂತಿ ದಿನಾಚರಣೆ,


ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "International Day of Peace Event Information". Secretary-General of the United Nations. Archived from the original on 25 June 2013. Retrieved 18 July 2013.
  2. "Secretary-General's Message on the International Day of Peace 21 September 2002". Archived from the original on 4 July 2007. Retrieved 6 January 2008.
  3. International Day of Peace
  4. International Year of Peace and International Day of Peace
  5. "International Day of Peace". SA News Channel (in ಅಮೆರಿಕನ್ ಇಂಗ್ಲಿಷ್). 2021-09-21. Retrieved 2021-09-21.
  6. 2005 “WE THE PEOPLES” INITIATIVE (celebration of the International Day of Peace) Archived at archive.org, Accessed 17 November 2019
  7. 2005 “WE THE PEOPLES” INITIATIVE (celebration of the International Day of Peace) Archived at archive.org, Accessed 17 November 2019