ಎಗ್ ಭುರ್ಜಿ

(ಅಂಡಾ ಭುರ್ಜಿ ಇಂದ ಪುನರ್ನಿರ್ದೇಶಿತ)

ಎಗ್ ಭುರ್ಜಿ ಅಥವಾ ಮೊಟ್ಟೆ ಭುರ್ಜಿ ಉತ್ತರ ಹಾಗೂ ಪಶ್ಚಿಮ ಭಾರತ ಮತ್ತು ಪಾಕಿಸ್ತಾನದಲ್ಲಿ ಜನಪ್ರಿಯವಿರುವ ಒಂದು ತಿನಿಸು. ಇದನ್ನು ಹಲವುವೇಳೆ ಸ್ಕ್ರ್ಯಾಂಬಲ್ಡ್ ಎಗ್ ಮತ್ತು ಪಾರ್ಸಿ ತಿನಿಸಾದ ಅಕೂರಿ ಎಂದು ತಪ್ಪಾಗಿ ತಿಳಿಯಲಾಗುತ್ತದೆ, ಆದರೆ ಎಗ್ ಭುರ್ಜಿ ಸಮಷ್ಟಿಯಲ್ಲಿ ಒಂದು ವಿಭಿನ್ನವೇ ಆದ ತಿನಿಸು. ಭಿನ್ನತೆ ಅದರ ತಯಾರಿಕೆ ಮತ್ತು ಸಾಟೆ ಮಾಡಿದ ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ, ಮತ್ತು ಐಚ್ಛಿಕ ಸಂಬಾರ ಪದಾರ್ಥಗಳ ಸೇರಿಸುವಿಕೆಯಲ್ಲಿ ಇದೆ. ಇದರ ತಯಾರಿಕೆಯಲ್ಲಿ ಅನೇಕ ಪರಿವರ್ತನೆಗಳನ್ನೂ ಮಾಡಬಹುದು. ಮೊಟ್ಟೆಗಳ ಬದಲಿಗೆ ಪನೀರ್ಅನ್ನು ಬಳಸಬಹುದು. ಹೆಂಚಿನ ಮೇಲೆ ಹಾಕುವ ಮೊದಲು ಕಲಕಿದ ಮೊಟ್ಟೆಗಳಿಗೆ ಟೊಮೇಟೊಗಳನ್ನು ಸೇರಿಸಬಹುದು, ಇದರಿಂದ ತಿನಿಸಿಗೆ ತೀಕ್ಷ್ಣ ಹಾಗೂ ಹುಳಿ ಸುವಾಸನೆ ಬರುತ್ತದೆ. ತಿನಿಸನ್ನು ಹೆಚ್ಚು ತಣಿಸುವಂತೆ ಮಾಡಲು ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡ ಬೇಯಿಸಿದ ಆಲೂಗಡ್ಡೆಗಳನ್ನು ಸೇರಿಸಲಾಗುತ್ತದೆ. ರುಚಿ ಹಾಗೂ ಪೌಷ್ಟಿಕ ಮೌಲ್ಯವನ್ನು ಸುಧಾರಿಸಲು ಬಟಾಣಿ, ಗಜ್ಜರಿ, ದೊಣ್ಣೆ ಮೆಣಸಿನಕಾಯಿ ಮತ್ತು ಇತರ ಹೋಲುವಂಥ ತರಕಾರಿಗಳನ್ನು ಈ ತಿನಿಸಿಗೆ ಸೇರಿಸಬಹುದು.