ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ

ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯವು ೧೯೬೩ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ.

Aitm
Anjuman Institute of Technology and Management (AITM), Bhatkal
ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ, ಭಟ್ಕಳ
ವಿದ್ಯಾರ್ಥಿಗಳ ಸಂಖ್ಯೆ೨೦೦೦
ಪದವಿ ಶಿಕ್ಷಣ೭೪೦
ಸ್ನಾತಕೋತ್ತರ ಶಿಕ್ಷಣ೧೨೦
ಅಂತರ್ಜಾಲ ತಾಣhttp://www.aitmb.ac.in/

ವಿಭಾಗಗಳು ಬದಲಾಯಿಸಿ

ಪದವಿ ವಿಭಾಗಗಳು

  1. ವಾಹನ ಎಂಜಿನಿಯರಿಂಗ್
  2. ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
  3. ಸಿವಿಲ್ ಎಂಜಿನಿಯರಿಂಗ್
  4. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  5. ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
  6. ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್
  7. ಕೈಗಾರಿಕಾ ಮತ್ತು ನಿರ್ಮಾಣ ಎಂಜಿನಿಯರಿಂಗ್
  8. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  9. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  10. ಯಾಂತ್ರಿಕ ಎಂಜಿನಿಯರಿಂಗ್
  • ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ವಿಜ್ಞಾನ (ಎಮ್. ಸಿ. ಎ.)
  • ಸ್ನಾತಕೋತ್ತರ ವ್ಯವಹಾರ ಆಡಳಿತ (ಎಮ್. ಬಿ. ಎ.)

ಆವರಣ ಬದಲಾಯಿಸಿ

ಮಹಾವಿದ್ಯಾಲಯವು ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ ಬದಲಾಯಿಸಿ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ ಬದಲಾಯಿಸಿ

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ ಬದಲಾಯಿಸಿ

  • ಅರ್ಹತೆ ವಿದ್ಯಾರ್ಥಿವೇತನ
  • ರಕ್ಷಣಾ ವಿದ್ಯಾರ್ಥಿವೇತನ
  • ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
  • ಯೋಜನೆ ವಿದ್ಯಾರ್ಥಿವೇತನ
  • ಆಯಾ ರಾಜ್ಯ ಸರ್ಕಾರದ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
  • ಮೆಟ್ರಿಕ್ ವಿದ್ಯಾರ್ಥಿ ವಿದ್ಯಾರ್ಥಿವೇತನ
  • ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿವೇತನ
  • ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ
  • ಮಾಜಿ ರಕ್ಷಣಾ ವಿದ್ಯಾರ್ಥಿವೇತನ
  • ಅಂಗವಿಕಲರ ವಿದ್ಯಾರ್ಥಿವೇತನ

ವಿದ್ಯಾರ್ಥಿನಿಲಯಗಳು ಬದಲಾಯಿಸಿ

  • ವಿದ್ಯಾರ್ಥಿನಿಲಯ
  • ವಿದ್ಯಾರ್ಥಿನಿಯರ ಹಾಸ್ಟೆಲ್

ಜೀವನ ಮಾರ್ಗದರ್ಶನ ಕೇಂದ್ರ ಬದಲಾಯಿಸಿ

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಅಧಿಕೃತ ಅಂತರ್ಜಾಲ ತಾಣ