ಅಂಚೆಚೀಟಿಗಳಲ್ಲಿ ಮಹಿಳಾ ಲೋಕ

ಪರಸ್ಪರ ಮಾಹಿತಿ ವಿನಿಮಯಕ್ಕಾಗಿ ರೂಪುಗೊಂಡ ಅಂಚೆ ವ್ಯವಸ್ಥೆ ಮೊದಮೊದಲಿಗೆ ಆಡಳಿತಗಾರರಿಗೆ ಮಾತ್ರ ಸೀಮಿತವಾಗಿತ್ತು. ಕೇವಲ ರಾಜಮಹರಾಜರು ಉಪಯೋಗಿಸಬಹುದಾಗಿದ್ದ ಅಂಚೆ ಸೌಲಭ್ಯ ಕ್ರಮೇಣ ಸಾರ್ವಜನಿಕರ ಬಳಕೆಗೂ ಬಂದಿತು. ಪಾರಿವಾಳಗಳು,ಓಲೆಕಾರರು,ಕುದುರೆ ಅಂಚೆಯಾಳುಗಳು,ಕುದುರೆ ಸಾರೋಟುಗಳು ಮೊದಲಾದ ಮಾಧ್ಯಮಗಳು ಅಂಚೆ ಆಡಳಿತಕ್ಕೆ ಸೇರಿ ಕೊನೆಗೆ ಆಧುನಿಕ ಬದುಕಿನೊಳಗೆ ಅಂಚೆ ಸೇರಿಕೊಂಡಿತು.೧೯ನೇಯ ಶತಮಾನದ ವೇಳೆಗೆ ಅಂಚೆ ಎಲ್ಲರಿಗೂ ಅನಿವಾರ್ಯ ಸೌಲಭ್ಯವಾಗಿ,ಆ ಸದರ್ಭದಲ್ಲಿ ಅನ್ವೇಷಣೆಗೊಂಡ ಸಂಪರ್ಕ ಸಾಧನಗಳೂ ಅಂಚೆ ಸಾಗಾಟಕ್ಕೆ ಉಪಯೋಗಿಸಲ್ಪಟ್ಟವು.ಸರ್ ರೋಲ್ಯಾಂಡ್ ಹಿಲ್ ಅವರು ಅಂಚೆ ರವಾನೆಗೆ ಬಳಕೆ ಮಾಡಿದ ಸ್ಟ್ಯಾಂಪ್(ಅಂಚೆ ಚೀಟಿ) ಬಹುಬೇಗ ಜನಪ್ರಿಯವಾಯಿತಲ್ಲದೆ ಬೇರೆ ದೇಶಗಳಲ್ಲೂ ಉಪಯೋಗಕ್ಕೆ ಬಂದಿತು.

ಅಂಚೆಯಲ್ಲಿ ವಿಕ್ಟೋರಿಯಾ ಬದಲಾಯಿಸಿ

 
ಕ್ವೀನ್ ವಿಕ್ತೋರಿಯ ಅಂಚೆ ಚೀಟಿಯಲ್ಲಿ

ಇಂಗ್ಲೆಂಡ್‍ನಲ್ಲಿ ಮೊದಲಿಗೆ ಅಂಚೆ ಚೀಟಿಯನ್ನು ಬಳಸಿದಾಗ,ಅದನ್ನು ಅಧಿಕೃತಗೊಳಿಸಲು ದೇಶವನ್ನು ಆಳುತ್ತಿದ್ದ ಮಹರಾಣಿಯ ಚಿತ್ರವನ್ನೇ ಚಿತ್ರಿಸಲಾಗಿತ್ತು.’ಪೆನ್ನಿಬ್ಲಾಕ್’ ಹೆಸರಿನಿಂದ ವಿಶ್ವವಿಖ್ಯಾತವಾದ ಅಂಚೆಚೀಟಿಯಲ್ಲಿ ವಿಕ್ಟೋರಿಯಾ ರಾಣಿಯವರ ಭಾವ ಚಿತ್ರವಿತ್ತು. ೧೮೪೦ರ ಮೇ ೬ ರಂದು ಬಿಡುಗಡೆಗೊಂಡ ಅಂಚೆಚೀಟಿ ಮುಂದಿನ ೬೦ ವರ್ಷಗಳ ಕಾಲ ನಿರಂತರವಾಗಿ ಮುಂದುವರೆಯಿತು. ಈ ಅವಧಿಯಲ್ಲಿ ಅಂಚೆಚೀಟಿಗಳ ಅಳತೆ,ಆಕಾರ ಹಾಗೂ ವಿನ್ಯಾಸಗಳಲ್ಲಿ ಬದಲಾವಣೆಗಳಾದವು.ಬೆಲೆಗಳಲ್ಲಿ ವ್ಯತ್ಯಾಸಗಳಾದವು,ವಿಕ್ಟೋರಿಯಾ ರಾಣಿಯ ಚಿತ್ರ ಮಾತ್ರ ಬದಲಾಗಲಿಲ್ಲ. ಆರು ದಶಕಗಳ ಅವಧಿಯಲ್ಲಿ ನೂರು ಬಗೆಯ ಅಂಚೆಚೀಟಿಗಳಲ್ಲೂ ಇಂಗ್ಲೆಂಡಿನ ವಿಕ್ಟೋರಿಯ ರಾಣಿ ಮುಖಚಿತ್ರ ಕಾಣಿಸಿಕೊಂಡಿತು. ಲಕ್ಷಾಂತರ ಅಂಚೆಚೀಟಿಗಳು ಮುದ್ರಣವಾದ ಮೇಲೆ ಅಂಚೆ ಕಾಗದಪತ್ರಗಳ ವಹಿವಾಟಿಕೆ ಬಳಸುತ್ತಿದ್ದ ವರ್ಣರಂಜಿತ ಕಾಗದದ ತುಂಡಿನಲ್ಲಿ ಬೇರೆ ಚಿತ್ರಗಳೂ ಬರತೊಡಗಿದವು.ಪ್ರಾಣಿ-ಪಕ್ಷಿಗಳ ಚಿತ್ರವು ಸಹ ಕಾಣಿಸಿಕೊಂಡವು,ಅಲ್ಲದೇ ಪ್ರಕೃತಿಯ ಚಿತ್ರಗಳೂ ಸಹ ಅಂಚೆಚೀಟಿಗಳಲ್ಲಿ ಅನಾವರಣಗೊಂಡಿವೆ.ಇಂಗ್ಲೆಂಡ್‍ನಲ್ಲಿ ಮೊದಲಿನಿಂದಲೂ ಅಂಚೆಚೀಟಿಗಳಲ್ಲಿ ಮಹಿಳೆಯರು(ಮಹಾರಾಣಿ) ಆದ್ಯತೆ ಪಡೆದರೂ ಬೇರೆ ದೇಶಗಳಲ್ಲಿ ವಿಶೇಷವಾಗಿ ಯುರೋಪ್‍ನಲ್ಲಿ ಪುರುಷರೇ ಹೆಚ್ಚಿನ ಪ್ರಾಧಾನ್ಯ ಪಡೆದರು.ಇಂಗ್ಲೆಂಡ್ ಆಡಳಿತದಲ್ಲಿದ್ದ ಭಾರತದಲ್ಲೂ ವಿಕ್ಟೋರಿಯಾ ರಾಣಿ ಕಿರೀಟ ಹೊತ್ತ ಚಿತ್ರಗಳೇ ಅಂಚೆಚೀಟಿಗಳಲ್ಲಿ ಕಾಣಿಸಿಕೊಂಡವು.ಬ್ರಿಟಿಷ್ ಆಡಳಿತಾವಧಿಯಲ್ಲಿ ಮಹಿಳೆಯರು ಮಾತ್ರವಲ್ಲ,ಯಾವ ಪುರುಷರೂ ಅಂಚೆಚೀಟಿಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ೨೦ನೆಯ ಶತಮಾನದಲ್ಲಿ ಅಂಚೆಚೀಟಿಗಳ ಬಳಕೆ ಹೆಚ್ಚುತ್ತಿದ್ದಂತೆ ಅದರ ವಿನ್ಯಾಸದಲ್ಲಿ, ವಿಷಯ ಅಳವಡಿಕೆಯಲ್ಲಿ ಹಲವು ರೀತಿಯ ಮಾರ್ಪಾಡುಗಳಾದವು.ಅಂಚೆಚೀಟಿ ಸಂಗ್ರಹಿಸುವ ಹವ್ಯಾಸಕ್ಕೆ ಜನಮನ್ನಣೆ ಸಿಕ್ಕ ಮೇಲೆ ಅಂಚೆಚೀಟಿಗಳನ್ನು ಆಕರ್ಷಿಸುವ ಕೆಲಸವನ್ನು ಎಲ್ಲಾ ದೇಶಗಳೂ ಕೈಗೊಂಡವು.ಆಯಾ ದೇಶಗಳ ಸಂಸ್ಕೃತಿ,ಪ್ರಕೃತಿ,ಜನಸಮುದಾಯ,ಆಚಾರ-ವಿಚಾರಗಳೂ ಅಂಚೆಚೀಟಿಗಳಲ್ಲಿ ಪ್ರತಿಬಿಂಬಿತವಾದವು.ಶುರುವಿನಲ್ಲಿ ರಾಷ್ಟ್ರ ನಾಯಕರು ಅಂಚೆಚೀಟಿಗಳಲ್ಲಿ ಕಂಡುಬಂದ ಬಳಿಕ ಮಹಿಳೆಯರೂ ಕಂಡುಬಂದರು. ಭಾರತವು ಸ್ವತಂತ್ರಗೊಂಡ ಸಮಯದಲ್ಲಿ ಅಂಚೆಚೀಟಿಗಳ ಒಟ್ಟಾರೆ ದೃಷ್ಟಿಕೋನವೇ ಹೊಸತನವನ್ನು ಪಡೆದಿತ್ತು. ರಾಷ್ಟ್ರಧ್ವಜ,ರಾಷ್ಟ್ರಚಿಹ್ನೆ ಮೊದಲಾದವು ಸ್ವಾತಂತ್ರ್ಯಾನಂತರದ ಭಾರತೀಯ ಅಂಚೆಚೀಟಿಗಳ ವಿಷಯಗಳಾಗಿದ್ದವು ಬಳಿಕ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಚಿತ್ರವು ಅಚ್ಚಾಯಿತು.ಪ್ರಸಿದ್ದ ಸ್ಮಾರಕಗಳು,ಐತಿಹಾಸಿಕ ಕಟ್ಟಡಗಳು,ದೇಶದ ಪ್ರಮುಖ ಯೋಜನೆಗಳನ್ನು ಉಲ್ಲೇಖಿಸುವ ಅಂಚೆಚೀಟಿಗಳು ಇಲ್ಲಿ ಉಪಯೋಗಕ್ಕೆ ಬಂದವು.ಭಾರತವು ಸಾಧು-ಸಂತರ ನಾಡಾಗಿದೆ.ನಮ್ಮ ದೇಶವಾಸಿಗಳ ಮೇಲೆ ಅಪಾರ ಪ್ರಭಾವ ಬೀರಿದ ಸಂತಸ ಸರಣಿಯೊಂದನ್ನು ಭಾರತೀಯ ಅಂಚೆ ಇಲಾಖೆ ೧೯೫೨ರ ಅಕ್ಟೋಬರ್ ನಲ್ಲಿ ಹೊರ ತಂದಿತು.ಅದರಲ್ಲಿ ಕಬೀರ್,ತುಳಸಿದಾಸ,ಸೂರದಾಸ,ಗಾಲೀಬ್ ಹಾಗೂ ಮೀರಾಬಾಯಿ ಅವರ ಚಿತ್ರಗಳು ಚಿತ್ರಿತವಾಗಿದ್ದವು.ಆ ಬಳಿಕ ಭಾರತೀಯ ಅಂಚೆಚೀಟಿಗಳಲ್ಲಿ ನೂರಾರು ಮಹಿಳೆಯರು ತಮ್ಮಸ್ಥಾನವನ್ನು ಪಡೆದಿದ್ದಾರೆ.ಭವ್ಯ ಇತಿಹಾಸವಿರುವ ಭಾರತೀಯ ಸಮಾಜದಲ್ಲಿ ಅನೇಕ ಮಹಿಳೆಯರು ಸಾಧನೆಗಳ ಮೂಲಕ ಅಚ್ಚಳಿಯದೆ ನೆಲೆ ನಿಂತಿದ್ದಾರೆ.ಸಂತ ಕವಯಿತ್ರಿಯರು,ವೀರವನಿತೆಯರು,ಸಮಾಜ ಪರಿವರ್ತಕರು,ಕವಿ,ಸಾಹಿತಿಗಳು ಇವರಲ್ಲಿದ್ದಾರೆ.

 
ಇಂಡೊನೇಶಿಯದ ಅಂಚೆ ಚೀಟಿ

ಸಂತ ಮೀರಾಬಾಯಿ ಬದಲಾಯಿಸಿ