ಅಂಗುಳು
ಅಂಗುಳು ಮಾನವನಲ್ಲೂ ಬೆನ್ನೆಲುಬುಗಳಿರುವ ಪ್ರಾಣಿಗಳಲ್ಲೂ ಬಾಯಿಯ ಒಳಗೆ ಛಾವಣಿಯಾಗಿರುವ ಭಾಗ (ಪೆಲೇಟ್).ಮೂಗಿನ ಹೊಳ್ಳುಗಳಿಗೆ ಇದೇ ತಳ; ಅಂದರೆ ಮೂಗು ಬಾಯಿಗಳ ನಡುವೆ ಇದೆ. ಅಂಗುಳದ ಮುಂಭಾಗ ಎಲುಬಿನಿಂದಾದುದರಿಂದ ಗಡುಸಾಗಿದೆ; ಅದರ ಹಿಂಭಾಗ ಮೆತ್ತಗೆ ಇದೆ. ಮೆತ್ತಗಿನ ಅಂಗುಳ ಹಿಂದೆ ಸಾಗಿದಂತೆ ಸಡಿಲಾಗಿ ಮಧ್ಯಭಾಗದಲ್ಲಿ ಚಾಚಿಕೊಂಡಿರುತ್ತದೆ. ಇದಕ್ಕೆ ಕಿರುನಾಲಿಗೆ ಅಥವಾ ನಂಗಿಲು ಎನ್ನುತ್ತಾರೆ. ಆಹಾರವಾಗಲಿ, ನೀರಾಗಲಿ ನುಂಗುವಾಗ ಮೂಗಿನೊಳಗೆ ಹೋಗದಂತೆ ಕಿರುನಾಲಿಗೆ ತಡೆಯುತ್ತದೆ. ಮಲಗಿದವರು ಗೊರಕೆ ಶಬ್ದ ಮಾಡುವಾಗ ಕಿರುನಾಲಿಗೆ ಕಂಪಿಸುತ್ತದೆ. ಎರಡೂ ಪಕ್ಕಗಳಿಂದ ಬೆಳೆಯುತ್ತ ಮಧ್ಯದಲ್ಲಿ ಒಂದುಗೂಡಿರುವ ಅಂಗುಳವು ಒಮ್ಮೊಮ್ಮೆ ಪಿಂಡಗೂಸಿನ ಬೆಳವಣಿಗೆಯಲ್ಲಿ ಕೂಡಿಕೊಳ್ಳುವುದಿಲ್ಲ. ಆಗ ಮಧ್ಯದಲ್ಲಿ ಸೀಳು ಉಂಟಾಗುತ್ತದೆ. ಇದಕ್ಕೆ ಸೀಳು ಅಂಗುಳ (ಕ್ಲೆಫ್ಟ್ ಪೆಲೇಟ್) ಕಾರಣ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: