ಅಂಗಾರಕ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಅಂಗಾರಕ ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಮತ್ತು ಜಯಸುಧಾ ರಾಘವೇಂದ್ರ ನಿರ್ಮಿಸಿದ 2014ರ ಚಲನಚಿತ್ರ. [೧] ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಪ್ರಣಿತಾ ಸುಭಾಷ್ ಮತ್ತು ಹಾರ್ಧಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವು 10 ಜನವರಿ 2014 ರಂದು ಮಿಶ್ರ ಮತ್ತು ನಕಾರಾತ್ಮಕ ವಿಮರ್ಶೆಗಳಿಗೆ ಬಿಡುಗಡೆಯಾಯಿತು.

ಕಥಾವಸ್ತು ಬದಲಾಯಿಸಿ

ಹಳ್ಳಿಯ ರಾಜಕಾರಣಿ(ಅವಿನಾಶ್)ಯೊಬ್ಬನ ಮಗ ವಿಜಯ್ (ಪ್ರಜ್ವಲ್) ತನ್ನ ಪದವಿಯ ನಂತರ ತನ್ನ ಹಳ್ಳಿಗೆ ಹಿಂತಿರುಗುತ್ತಾನೆ. ಅವನು ತನ್ನ ಹಳ್ಳಿಯಲ್ಲಿ ನೆಲೆಸಲು ಉದ್ದೇಶಿಸುತ್ತಾನೆ. ಸಾಮಾನ್ಯ ಹಳ್ಳಿಯ ಹುಡುಗಿ ಪ್ರಿಯಾ (ಪ್ರಣಿತಾ) ಳನ್ನು ಭೇಟಿಯಾಗುತ್ತಾನೆ. ಆದರೆ ಅವರ ತಂದೆ ಅವರು ಶ್ರೀಮಂತ ಕುಟುಂಬದಿಂದ ಬಂದ ಕಾವ್ಯವನ್ನು (ಹಾರ್ಧಿಕಾ) ಮದುವೆಯಾಗಬೇಕೆಂದು ಬಯಸುತ್ತಾರೆ,ಏಕೆಂದರೆ ಅದು ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ವಿಜಯ್ ತನ್ನ ನಿಲುವನ್ನು ದೃಢಪಡಿಸಿ ಪ್ರಿಯಾಳನ್ನು ಮದುವೆಯಾಗಲು ಮುಂದಾಗುವನು. ಈ ನಡುವೆ, ಅವನ ತಂದೆ ಜ್ಯೋತಿಷ್ಯದ ಮೂಲಕ ಸಂಚು ರೂಪಿಸಿ ಮದುವೆಯ ನಂತರ ವಿಷಯಗಳು ಕೆಟ್ಟದಾಗಿ ಹೋಗುತ್ತವೆ ಎಂದು ವಿಜಯ್ ನಂಬುವಂತೆ ಮಾಡುತ್ತಾನೆ. ದಂಪತಿಗಳು ಹೇಗೆ ಮತ್ತೆ ಒಂದಾಗುತ್ತಾರೆ ಮತ್ತು ಹಿರಿಯರ ಇಚ್ಛೆಗೆ ವಿರುದ್ಧವಾಗಿ ಹೋಗುತ್ತಾರೆ ಎಂಬುದು ಕಥಾವಸ್ತುವಿನ ಉಳಿದ ಭಾಗವನ್ನು ರೂಪಿಸುತ್ತದೆ.

ಪಾತ್ರವರ್ಗ ಬದಲಾಯಿಸಿ

ಬಿಡುಗಡೆ ಬದಲಾಯಿಸಿ

ವಿಮರ್ಶೆಗಳು ಬದಲಾಯಿಸಿ

ಚಲನಚಿತ್ರವು ವಿಮರ್ಶಕರಿಂದ ಹೆಚ್ಚಾಗಿ ಸಾಧಾರಣ ಮತ್ತು ಋಣಾತ್ಮಕ ವಿಮರ್ಶೆಗಳನ್ನು ತೆರೆಯಿತು. ಟೈಮ್ಸ್ ಆಫ್ ಇಂಡಿಯಾವು 3/5 ನಕ್ಷತ್ರಗಳನ್ನು ರೇಟ್ ಮಾಡಿತು, ಆದರೆ ನಿರ್ದೇಶಕರ ಕೆಲಸವನ್ನು ವಿಮರ್ಶೆ ಮಾಡುವಾಗ "ಚಿತ್ರವು ಯಾವುದೇ ಕಲ್ಪನೆಯಿಲ್ಲದೆ ಮಾಡಲಾದ ವ್ಯರ್ಥಶ್ರಮದ್ದಾಗಿದೆ" ಎಂದು ಹೇಳುತ್ತದೆ. [೨] ಭಾರತೀಯ ಸಿನಿ ಗ್ಯಾಲರಿಯು ನಿರ್ದೇಶಕರ ಕೆಲಸವನ್ನು ಟೀಕಿಸುತ್ತ "ಅತ್ಯಂತ ಸಾಮಾನ್ಯ ಪ್ರಸ್ತುತಿ" ಎಂದು ತೀರ್ಪು ನೀಡಿತು. [೩]

ಧ್ವನಿಮುದ್ರಿಕೆ ಬದಲಾಯಿಸಿ

ಅಶ್ವಿನಿ ಮೀಡಿಯಾ ಸಂಸ್ಥೆಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಘೌಸ್ ಪೀರ್, ಗೀ ಗೀ ಮತ್ತು ಶ್ಯಾಮ್ ಶಿವಮೊಗ್ಗ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆಯು 1 ನವೆಂಬರ್ 2013 ರಂದು ಕನ್ನಡ ರಾಜ್ಯೋತ್ಸವ ದಿನದಂದು ನಡೆಯಿತು. [೪] [೫] ಒಟ್ಟು 5 ಹಾಡುಗಳನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ. [೬]

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಜಿಗಿದು ಜಿಗಿದು"ಗೀ ಗೀಅನುರಾಧಾ ಭಟ್ 04:28
2."ಪ್ರಿಯಮಣಿ"ಗೀ ಗೀಅರ್ಜುನ್ ಜನ್ಯ03:59
3."ಸಮ್ ಥಿಂಗ್ ಸ್ಪೇಷಲ್"ಘೌಸೆ ಪೀರ್ಸಂತೋಷ್ ವೆಂಕಿ, ರಕ್ಷಾ04:05
4."ಕಣ್ಣು ಕಣ್ಣಲ್ಲೆ"ಶ್ಯಾಮ್ ಶಿಮೊಗಾದೀಪಕ್, ಅನುರಾಧಾ ಭಟ್ 04:10
5."ಆಲಾ ಆಲಾರೆ"ಶ್ಯಾಮ್ ಶಿಮೊಗಾಹೇಮಂತ್ ಕುಮಾರ್ , Suma Shastry04:15

ಉಲ್ಲೇಖಗಳು ಬದಲಾಯಿಸಿ

  1. 'Angaraka' Next Week
  2. Angaraka Movie Review
  3. "Angaraka Review". Archived from the original on 23 September 2014. Retrieved 2 December 2014.
  4. Angaraka audio launch on Rajyotsava Day
  5. "Angaraka audio release". Archived from the original on 2022-01-30. Retrieved 2022-01-30.
  6. Angaraka songs

ಬಾಹ್ಯ ಕೊಂಡಿಗಳು ಬದಲಾಯಿಸಿ