ಅಂಕುಶ ಆನೆಗಳ ನಿರ್ವಹಣೆ ಮತ್ತು ಪಳಗಿಸುವಿಕೆಯಲ್ಲಿ ಬಳಸಲಾಗುವ ಒಂದು ಉಪಕರಣ. ಅದು ೬೦-೯೦ ಸೆ.ಮಿ. ಉದ್ದದ ಹಿಡಿಗೆ ಜೋಡಣೆಯಾದ ಒಂದು ಕೊಕ್ಕೆಯನ್ನು (ಸಾಮಾನ್ಯವಾಗಿ ಕಂಚು ಅಥವಾ ಉಕ್ಕಿನದು) ಹೊಂದಿರುತ್ತದೆ ಮತ್ತು ಮೊನಚಾದ ಕೊನೆಯಲ್ಲಿ ಅಂತ್ಯಗೊಳ್ಳುತ್ತದೆ.

ದಕ್ಷಿಣ ಭಾರತದ ೧೭ನೇ ಶತಮಾನದ ಅಂಕುಶ
ಗಣೇಶನ ಮೇಲಿನ ಬಲಗೈಯಲ್ಲಿ ಅಂಕುಶ

ಸಾಂಚಿಯ ಒಂದು ಉಬ್ಬುಕೆತ್ತನೆ ಮತ್ತು ಅಜಂತಾ ಗುಹೆಗಳಲ್ಲಿನ ಒಂದು ಹಸಿಚಿತ್ರ ಅಂಕುಶವನ್ನು ಒಳಗೊಂಡಿವೆ.

ಎರಡು ಪರಿಪೂರ್ಣ ಸಂರಕ್ಷಿತ ಅಂಕುಶಗಳನ್ನು ತಕ್ಷಶಿಲೆಯ ಒಂದು ಉತ್ಖನನ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು ಕ್ರಿ.ಪೂ. ೩ನೇ ಶತಮಾನದಿಂದ ಕ್ರಿ.ಶ. ೧ನೇ ಶತಮಾನದ ಕಾಲಮಾನದ್ದೆಂದು ನಿರ್ಧರಿಸಲಾಗಿದೆ.

ಅಂಕುಶ ಭಾರತದಲ್ಲಿ ಮೊಟ್ಟಮೊದಲು ಕ್ರಿ.ಪೂ. ೬-೫ನೇ ಶತಮಾನದಲ್ಲಿ ಕಾಣಿಸಿಕೊಂಡಿತು ಮತ್ತು ಅಂದಿನಿಂದ ಬಳಸಲ್ಪಟ್ಟಿವೆ.

ಅಂಕುಶದ ಹಿಡಿಯು, ಅದರ ಮಾಲಿಕನ ಸಂಪತ್ತು ಮತ್ತು ಸಿರಿಯನ್ನು ಆಧರಿಸಿ, ಕಟ್ಟಿಗೆಯಿಂದ ಆನೆದಂತದ ವರೆಗೆ ಯಾವುದೇ ವಸ್ತುವಿನಿಂದ ತಯಾರಿಸಲ್ಪಡಬಹುದು.

ಅಂಕುಶ ಭಾರತದಾದ್ಯಂತ ಶಸ್ತ್ರಶಾಲೆಗಳು ಮತ್ತು ದೇವಾಲಯಗಳಲ್ಲಿ ಕಂಡುಬರುತ್ತದೆ, ಮತ್ತು ಇಲ್ಲಿ ಆನೆಗಳು ಧಾರ್ಮಿಕ ಮೆರವಣಿಗೆಗಳಲ್ಲಿನ ನಡಿಗೆ ಮತ್ತು ವಿವಿಧ ನಾಗರಿಕ ಸಾಮರ್ಥ್ಯಗಳಲ್ಲಿ ಪ್ರದರ್ಶನ ನೀಡುತ್ತವೆ. ಅಂಕುಶಗಳು ಹಲವುವೇಳೆ ಅವುಗಳನ್ನು ಬಳಸಲಾಗುವ ಸಮಾರಂಭಗಳಿಗೆ ಸೂಕ್ತವಾಗಿರಲು ರತ್ನಗಳು ಮತ್ತು ಕೆತ್ತನೆಗಳಿಂದ ಸಾಕಷ್ಟು ಅಲಂಕೃತವಾಗಿರುತ್ತವೆ.

ಹಿಂದೂ ಧರ್ಮದಲ್ಲಿ, ಅಂಕುಶವು ಅಷ್ಟಮಂಗಳ ಎಂದು ಪರಿಚಿತವಾಗಿರುವ ಎಂಟು ಮಂಗಳಕರ ವಸ್ತುಗಳ ಪೈಕಿ ಒಂದು. ಅಂಕುಶ ಗಣೇಶನನ್ನು ಒಳಗೊಂಡಂತೆ ಅನೇಕ ಹಿಂದೂ ದೇವತೆಗಳ ಗುಣಲಕ್ಷಣವಾಗಿದೆ.

"https://kn.wikipedia.org/w/index.php?title=ಅಂಕುಶ&oldid=807041" ಇಂದ ಪಡೆಯಲ್ಪಟ್ಟಿದೆ