M84

ವಿಕಿಪೀಡಿಯ:ದ್ವಂದ್ವ ನಿವಾರಣೆ

ಲೆಂಟಿಕ್ಯುಲರ್ ಗೆಲಾಕ್ಸಿಗಳು: ಈ ಗೆಲಾಕ್ಸಿಗಳ ಸಮೂಹ ಸುಮಾರು ೩೦೦೦೦೦ ಜ್ಯೋತಿರ್ವರ್ಷ ದೂರದಲ್ಲಿದೆ - ಅಂದರೆ ೩೦೦೦೦೦ ವರ್ಷಗಳ ಹಿಂದಿನ ಕಾಲದಿಂದಲೂ ನಾವು ಇದನ್ನು ನೋಡುತ್ತಿದ್ದೇವೆ. ಕನ್ಯಾ ರಾಶಿಯಲ್ಲಿ ಗೆಲಾಕ್ಸಿಗಳ ಸಮೂಹವೇ ಇದೆ. ಅವುಗಳಲ್ಲಿ ಕೆಲವು ದೀರ್ಘವೃತ್ತ ವರ್ಗದವು. ಕೆಲವು ಸುರುಳಿ ವರ್ಗದವು. ಕೆಲವು ಲೆಂಟಿಕ್ಯುಲರ್ ಎಂಬ ಮೂರನೆಯ ವರ್ಗಕ್ಕೆ ಸೇರುತ್ತವೆ. ಅಂದರೆ ಇವು ಸುರುಳಿ ಗೆಲಾಕ್ಸಿಗಳೋ ಅಥವಾ ದೀರ್ಘವೃತ್ತ ವರ್ಗದವೋ ಎಂಬ ಸಮಸ್ಯೆ ಉಂಟಾಗುತ್ತದೆ ಎಂದರ್ಥ. ಹೆಚ್ಚಿನ ಅನಿಲ ಮತ್ತು ದೂಳು ವ್ಯಯವಾಗಿ ಹಳೆಯ ನಕ್ಷತ್ರಗಳೇ ಹೆಚ್ಚಾಗಿ ಕಾಣುತ್ತವೆ. ಹೊಸ ನಕ್ಷತ್ರಗಳ ರಚನೆ ಸ್ಥಗಿತಗೊಂಡಿದೆ ಎಂದೇ ಹೇಳಬಹುದು. ಉದಾಹರಣೆಗೆ ೮೪ ನೋಡಲು ದೀರ್ಘ ವೃತ್ತಾಕಾರದಂತೆಯೇ ಕಾಣುತ್ತದೆ. ಅದರ ಆಸುಪಾಸಿನಲ್ಲಿ ಸುರುಳಿ ಗೆಲಾಕ್ಸಿಗಳು ಇವೆ. ಈ ಗುಂಪಿನ ಚಿತ್ರ ತೆಗೆಯುವುದು ಹವ್ಯಾಸೀ ವೀಕ್ಷಕರಿಗೊಂದು ಮೋಜು ಎನ್ನಬಹುದು. ಹಬಲ್ ದೂರದರ್ಶಕ ಅಥವಾ ಭೂದೂರದರ್ಶಕಗಳ ವಿಶೇಷ ಚಿತ್ರಗಳಿಂದ ಸುರುಳಿ ಇರಬಹುದು ಮತ್ತು ಕೇಂದ್ರ ಭಾಗದಲ್ಲಿ ನಕ್ಷತ್ರಗಳ ಗೋಳ ಗುಚ್ಛಗಳು ಇವೆ ಎಂಬ ಅಂಶ ತಿಳಿಯುತ್ತದೆ. ಅಲ್ಲದೆ ನಾವು ಊಹಿಸಿದ್ದಕ್ಕಿಂತ ಹೆಚ್ಚು ವಿಸ್ತಾರವಾಗಿದೆ ಎಂದೂ ತಿಳಿಯುತ್ತದೆ. ಚಂದ್ರ ದೂರದರ್ಶಕ ತನ್ನ ಎಕ್ಸ್ ರೇ ಕಣ್ಣುಗಳಿಂದ ಎಂ 86 ಗೆಲಾಕ್ಸಿಯ ಸುತ್ತಲಿನ ಅನಿಲದ ವಿಸ್ತಾರವನ್ನು ತೋರಿಸಿಕೊಟ್ಟಿತು. ಈ ಗೆಲಾಕ್ಸಿಗಳ ಸಮೂಹ ಸುಮಾರು ೩೦೦೦೦೦ ಜ್ಯೋತಿರ್ವರ್ಷ ದೂರದಲ್ಲಿದೆ - ಅಂದರೆ ೩೦೦೦೦೦ ವರ್ಷಗಳ ಹಿಂದಿನ ನೋಟವನ್ನು ನಾವು ನೋಡುತ್ತಿದ್ದೇವೆ. ಇವುಗಳಿಗಿಂತ ಸ್ವಲ್ಪ ದೂರದಲ್ಲಿ (ಆಕಾಶದಲ್ಲಿ ಕಂಡಂತೆ) ಕಾಣುವ ಇನ್ನೊಂದು ಲೆಂಟಿಕ್ಯುಲರ್ ಗೆಲಾಕ್ಸಿ ಎಂ ೮೫. ಇದು ಕೃಷ್ಣ ವೇಣಿ (ಕೋಮಾ ಬೆರೆನ್ಸೀಸ್) ಎಂಬ ಪುಂಜದ ಎಲ್ಲೆಯೊಳಗಿದೆ. ಎಂ ೮೫ರ ಪಕ್ಕದಲ್ಲಿ ಎನ್ ಜಿ ಸಿ ೪೩೯೪ ಎಂಬ ಸಂಖ್ಯೆಯ ಅಡ್ಡಪಟ್ಟಿಯ ಸುರುಳಿ ಗೆಲಾಕ್ಸಿ ಕಾಣುತ್ತದೆ. ಇದು ದೂರದರ್ಶಕಗಳಿಂದ ನಕ್ಷತ್ರದ ಹಾಗೆಯೇ ಕಾಣುತ್ತದೆಯಾದರೂ ಹೆಚ್ಚು ಎಕ್ಸ್ ಪೋಷರ್ ಕೊಟ್ಟು ತೆಗೆದ ಚಿತ್ರಗಳಲ್ಲಿ ಗೆಲಾಕ್ಸಿಯ ಆಕಾರ ಸ್ಪಷ್ಟವಾಗಿ ಕಾಣುತ್ತದೆ. ಇವೆರಡೂ ಸೆಕೆಂಡಿಗೆ ಸುಮಾರು ೭೦೦ ಕಿ.ಮೀ ವೇಗದಿಂದ ನಮ್ಮಿಂದ ದೂರ ಧಾವಿಸುತ್ತಿರುವುದರಿಂದ ಬಹುಶಃ ಜೋಡಿ ಇರಬಹುದು ಎನ್ನಿಸುತ್ತದೆ. ಅಂದರೆ ಗುರುತ್ವಾಕರ್ಷಣೆಗೆ ಒಳಪಟ್ಟಿರಬಹುದು. ಈ ಮೂರೂ ಗೆಲಾಕ್ಸಿಗಳನ್ನು ಮೆಸಿಯೆರ್ ಕಂಡು ಹಿಡಿಯಲಿಲ್ಲ. ಆದರೆ ಧೂಮಕೇತು ಎಂಬ ಭ್ರಮೆ ಉಂಟು ಮಾಡುತ್ತವೆಯಾದ್ದರಿಂದ ಆ ಪಟ್ಟಿಯಲ್ಲಿ ಸೇರಿದವು.

M84 ಹಬ್ಬಲ್ ಕಂಡಂತೆ
"https://kn.wikipedia.org/w/index.php?title=M84&oldid=1170162" ಇಂದ ಪಡೆಯಲ್ಪಟ್ಟಿದೆ