ಭಾರತೀಯ ದೇವಾಲಯ ಮತ್ತು ಸಾಂಸ್ಕೃತಿಕ ಕೇಂದ್ರ , ಗ್ರೇಟರ್ ಲಫಯೆಟ್ಟೆ, ಇಂಡಿಯಾನ, ಅಮೆರಿಕ

(BTCCGL, ಇಂಡಿಯಾನ, ಅಮೆರಿಕ ಇಂದ ಪುನರ್ನಿರ್ದೇಶಿತ)

'ಅಮೆರಿಕದ ಇಂಡಿಯಾನಾ ರಾಜ್ಯದ ವೆಸ್ಟ್ ಲಾಫಯೆಟ್' ನಗರದಲ್ಲಿನ ಒಂದು ಇಗರ್ಜಿ ಪರಿವರ್ತನೆಗೊಂಡು 'ಗ್ರೇಟರ್ ಲಾಫಯೆಟ್ ಭಾರತೀಯ ದೇವಾಲಯ ಹಾಗೂ ಸಾಂಸ್ಕೃತಿಕ ಕೇಂದ್ರ'ವೆಂಬ ಹೊಸ ಹೆಸರನ್ನು ಪಡೆದಿದೆ. (BTCCGL) ವೆಸ್ಟ್ ಲಾಫಯೆಟ್, ಅತ್ಯಂತ ಹೆಚ್ಚು ಶಿಕ್ಷಿತರು ಇರುವ ನಗರ. ಈ ಭಾಗದ ಅಮೆರಿಕದಲ್ಲಿ ಇನ್ನೂ ಯಾವ ಹಿಂದೂ ದೇವಾಲಯಗಳೂ ಇರಲಿಲ್ಲ. ಇಲ್ಲಿನ ಭಾರತವಾಸಿಗಳು ತಮ್ಮ ತಮ್ಮ ಮನೆಗಳಲ್ಲಿ ಇಲ್ಲವೇ 'ಬಾಡಿಗೆ ಹಾಲ್' ಗಳಲ್ಲಿ ದೇವರನ್ನು ಅರ್ಚಿಸುತ್ತಿದ್ದರು. ಈಗ ಭಕ್ತಾದಿಗಳೆಲ್ಲಾ ಒಗ್ಗಟ್ಟಾಗಿ ಸೇರಿಕೊಂಡು ಸುಮಾರು ೪ ಲಕ್ಷ ೧೫ ಸಾವಿರ ಡಾಲರ್ ನಿಧಿ ಸಂಗ್ರಹಿಸಿ, 'ಸ್ಥಳೀಯ ನಾರ್ದರ್ನ್ ಕ್ರಿಶ್ಚಿಯನ್ ಲೈಫ಼್ ಚರ್ಚ್,' ಎಂಬ ಹೆಸರಿನ ಇಗರ್ಜಿಯನ್ನು ಖರೀದಿಸಿ, ಮಂದಿರವನ್ನಾಗಿ ಪರಿವರ್ತಿಸಿರುತ್ತಾರೆ. (Bharatiya Temple and Cultural Center of Greater Lafayette, BTCCGL)

ಹೆಚ್ಚು ಶಿಕ್ಷಿತ ವರ್ಗದ ಭಾರತೀಯರು

ಬದಲಾಯಿಸಿ

'ವೆಸ್ಟ್ ಲಾಫಯೆಟ್ ನ ಸ್ಥಳೀಯ ಸಂಸ್ಥೆಯ ರುವಾರಿ', 'ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ಕೇಂದ್ರ'ದ ಅಧ್ಯಕ್ಷ, 'ರಾಜನ್ ಜೇಡ್', ಎನ್ನುವರು, ಈ ವಿಷಯದಲ್ಲಿ ಹೆಚ್ಚು ಆಸಕ್ತಿವಹಿಸಿದ್ದಾರೆ. ಹಿಂದೂ ಧಾರ್ಮಿಕ ಸಂಪ್ರದಾಯಗಳು ಜೀವನದ ಹಲವು ಘಟ್ಟಗಳಲ್ಲಿ ಅತಿ ಅನಿವಾರ್ಯ. ಅವನ್ನು ಸಕ್ಷಮವಾಗಿ ನಿಭಾಯಿಸಲು BTCCGL ಟೊಂಕಕಟ್ಟಿ ದುಡಿಯುವ ಕಾರ್ಯವನ್ನು ಮಾಡಬೇಕಾಗಿದೆ. 'ವೆಸ್ಟ್ ಲಾಫಯೆಟ್ ನಗರ', ಸನ್ ೧೮೮೮ ರಲ್ಲಿ ಸ್ಥಾಪನೆಗೊಂಡಿತು. ಅಮೆರಿಕದಲ್ಲಿ ಒಟ್ಟು ೨.೨೯ ಮಿಲಿಯನ್ ಹಿಂದೂ ಸಂಪ್ರದಾಯಸ್ಥರು ಇದ್ದಾರೆ. ಪೂಜೆ ಪುನಸ್ಕಾರಗಳನ್ನು BTCCGL ಮುಖ್ಯಸ್ಥರಾದ, 'ಉಮೇಶ್ ಪಟೇಲ್' ಮತ್ತು 'ಜಗದೀಶ್ ಪಟೇಲ್' ನಿಭಾಯಿಸುತ್ತಿದ್ದಾರೆ.