2014ರ ಸಾಲಿನ ರಾಜ್ಯ ಪ್ರಶಸ್ತಿ

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ರಾಜ್ಯ ಪ್ರಶಸ್ತಿ

ಬದಲಾಯಿಸಿ

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 2014ರ ಸಾಲಿನ ರಾಜ್ಯ ಪ್ರಶಸ್ತಿ. ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸಿದ ಸ್ವಯಂ­ಸೇವಾ ಸಂಸ್ಥೆಗಳು ಮತ್ತು ಶಿಕ್ಷಕರಿಗೆ ಡಿ 3ರಂದು ಬೆಂಗಳೂ­ರಿನಲ್ಲಿ ಮುಖ್ಯಮಂತ್ರಿಯವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

  • ಈ ಪ್ರಶಸ್ತಿಗಳು ವಿಶಿಷ್ಟ ಸಾಧನೆಗೈದ ಎರಡು ಸಂಸ್ಥೆಗಳಿಗೆ ತಲಾ ರೂ. 50 ಸಾವಿರ, ಎಂಟು ಸಂಸ್ಥೆಗಳಿಗೆ ತಲಾ ರೂ. 25 ಸಾವಿರ, ವಿಶೇಷ ಶಿಕ್ಷಕರಿಗೆ ರೂ. 10 ಸಾವಿರ, ವೈಯಕ್ತಿಕ ಪ್ರಶಸ್ತಿ ರೂ. 15 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಪ್ರಶಸ್ತಿ ವಿವರ
ವಿಶೇಷ ಶಿಕ್ಷಕರು
ಬಿ.ವಿ.ಪಾಂಡು (ಬುದ್ಧಿಮಾಂದ್ಯ ಮಕ್ಕಳ ಶಾಲೆ, ಮೈಸೂರು), ಎಚ್‌.ಗೋವಿಂದಪ್ಪ (ಕಿವುಡ ಮಕ್ಕಳ ಸರ್ಕಾರಿ ಶಾಲೆ ಬಳ್ಳಾರಿ), ಗೀತಾ ಕೆ, (ಸಮರ್ಥನಂ ಅಂಧ ಮಕ್ಕಳ ಶಾಲೆ ಶಿಕ್ಷಕಿ ಬೆಂಗಳೂರು), ತಿಮ್ಮಯ್ಯ (ರಮಣ ಮಹರ್ಷಿ ಅಂಧರ ಶಾಲೆ ಬೆಂಗಳೂರು).
ವಿಶೇಷ ಸಾಧನೆ
ಸಮರ್ಥನಂ ಅಂಗವಿಕಲರ ಸಂಸ್ಥೆ, ಬೆಂಗ­ಳೂರು, ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆ ಗದಗ

ಸಂಸ್ಥೆಗಳು: ಸೊಸೈಟಿ ಫಾರ್‌ ಪೀಪಲ್ಸ್‌ ಇಂಟಿಗ್ರೇಟೆಡ್‌ ಡೆವಲಪ್‌ಮೆಂಟ್‌ (ಚಿಕ್ಕಮಗಳೂರು), ಮಾಣಿಕ್‌ಪ್ರಭು ಶಿಕ್ಷಣ ಸಮಿತಿ (ಬೀದರ್), ಕೆ.ಪಿ.ಎ.ಎಂ.ಆರ್‌.ಸಿ ಮತ್ತು ಮನೋ­ನಂದನ ಸೆಂಟರ್‌ ಫಾರ್‌ ಮೆಂಟಲಿ ಚಾಲೆಂಜ್ಡ್‌ (ಬೆಂಗಳೂರು), ಸಾನಿಧ್ಯ ವಸತಿ ಶಾಲೆ (ಮಂಗಳೂರು), ಮೈತ್ರಿ ಚಾರಿಟಬಲ್‌ ಟ್ರಸ್ಟ್್‌ (ಮೈಸೂರು), ಸಮೂಹ ಸಾಮರ್ಥ್ಯ ಸಂಸ್ಥೆ (ಕೊಪ್ಪಳ), ಸಹಕಾರ ಶಿಕ್ಷಣ ಸಂಸ್ಥೆ, ಬೆಳಗಾವಿ.

ವೈಯಕ್ತಿಕ ಪ್ರಶಸ್ತಿ
ಜಯಮ್ಮ (ಬೆಂಗಳೂರು) ರುದ್ರಸ್ವಾಮಿ (ರಾಯಚೂರು), ರಾಘವೇಂದ್ರ ರತ್ನಾಕರ ಅಣ್ವೇಕರ್‌ (ಬೆಳಗಾವಿ), ಸುಧಾರತ್ನ ಕೆ.ಎಸ್‌. (ಮಂಗಳೂರು), ಮಾದೇಶ ನಾಗರಾಳ (ಬಾಗಲಕೋಟೆ), ಅಂಜನಾದೇವಿ (ದಕ್ಷಿಣ­ಕನ್ನಡ), ಡಾ.ಕೋಡೂರು ವೆಂಕಟೇಶ್‌ (ಬೆಂಗ­ಳೂರು), ಮೆಹಬೂಬ್‌ ಸಾಬ್‌ (ಬಾಲಗಕೋಟೆ), ಮಹ­ದೇವ (ಮೈಸೂರು), ನಿರಂಜನ್‌ (ಬೆಂಗಳೂರು), ಮಾಹೆ­ಜಬೀನ್‌ ಎಸ್‌. ಮದರ್‌ಕರ್‌ (ವಿಜಯಪುರ), ಮರಿಯಪ್ಪ (ಕೊಪ್ಪಳ), ಜಿ. ನರಸಿಂಹಮೂರ್ತಿ (ಚಿತ್ರದುರ್ಗ), ಶೈಲಜ ಸೂಗಪ್ಪ (ಕೊಪ್ಪಳ) ಬಸವರಾಜು ಈ ಗುಜಮಾಗಡಿ (ಗದಗ).

ಸುದ್ದಿ ಮಾಧ್ಯಮ : ಪ್ರಜಾವಾಣಿ : 03/12/2014