ಪಾರ್ಶ್ವನಾಥ ಸ್ವಾಮಿ ಜಿನಮಂದಿರ ಸರಗುಪ್ಪಾ
ಸ್ಥಳ
ಬದಲಾಯಿಸಿಶಿರ್ಶಿ ತಾಲೂಕು ಕೇಂದ್ರದಿಂದ 27ಕಿಲೋಮೀಟರ್ ದೂರದಲ್ಲಿ ಸರಗುಪ್ಪಾ ಗ್ರಾಮದಲ್ಲಿ ಈ ಪಾಶ್ರ್ವನಾಥ ಸ್ವಾಮಿ ಬಸದಿ ಇದೆ. ಶಿರ್ಶಿಯಿಂದ ಇಲ್ಲಿಗೆ ಮತ್ತಿಘಟ್ಟ ಮಾರ್ಗ , ಅಥವಾ ಯಾಣದ ಮುಖಾಂತರವೂ ಬರಬಹುದು . ಸಾಮಾನ್ಯ ಮಟ್ಟದ ರಸ್ತೆ ಇದೆ . ಆಧುನಿಕ ಸೌಕರ್ಯಗಳು ಬಹಳ ಕಡಿಮೆ ಇರುವುದರಿಂದ ಇಲ್ಲಿಗೆ ಬರುವುದು ಬಹಳ ಪ್ರಯಾಸದ ಕೆಲಸ . ಆದುದರಿಂದ ಶ್ರಾವಕರೂ ಇಲ್ಲಿಗೆ ವರ್ಷಕ್ಕೊಮ್ಮೆಯಾದರೂ ಬರುವುದಿಲ್ಲವಂತೆ . ಇಲ್ಲಿ ಕೇವಲ 12 ಜೈನರ ಮನೆಗಳಿವೆ . ಈ ಜಿನಮಂದಿರವು ಸೋಂದಾದ ಭಟ್ಟಾಕಳಂಕ ಮಠಕ್ಕೆ ಸೇರಿದುದಾಗಿದೆ . ಹಿಂದೆ ಅಲ್ಲಿಂದಲೇ ಇದರ ಆಡಳಿತ ನಡೆಯುತ್ತಿತ್ತು . ಈಗ ನೂತನ ಅಭಿನವ ಭಟ್ಟಾರಕರ ಮಾರ್ಗದರ್ಶನದಲ್ಲಿ ಈ ಬಸದಿಯು ಪುನರುಜೀವಿತಗೊಳ್ಳಬಹುದೆಂಬ ಆಶಾಭಾವನೆಯನ್ನು ಇಲ್ಲಿಯವರು ಹೊಂದಿದ್ದಾರೆ.
ಇತಿಹಾಸ
ಬದಲಾಯಿಸಿಕಳೆದ ಹತ್ತು ವಷಗಳಿಂದ ಇಲ್ಲಿ ಪೂಜೆ ನಡೆಯುತ್ತಿಲ್ಲ. ಯಾಕೆಂದರೆ ಬಸದಿಯು ಭೂಮಿಯ ಗೇಣಿದಾರರು ಹಿಂದೆ ಕೊಡುತ್ತಿದ್ದ ಸುಮಾರು 12 ಚೀಲದಷ್ಟು ಭತ ಹಾಗೂ ಅಷ್ಟೇ ಎಣೆ ಕೊಡುವುದನ್ನು ನಿಲ್ಲಿಸಿದ್ದಾರೆ. ಬೇರೆ ಉತತಿ ಬಸದಿಗೆ ಇಲ್ಲದಿರುವುದರಿಂದ ಇದನ್ನು ನಡೆಸುವುದು ಕಷ್ಟವಾಗಿದೆ. ಇಲ್ಲಿಯ ಇಂದ್ರರಾದ ಶ್ರೀ ಲಕ್ಷ್ಮೀಪತಿ ಇಂದ್ರರು , ತನ್ನ ಜೋತಿಷ್ಯ ಜಾತಕ ಪಶೆ , ವಾಸ್ತುವಿನ ಕುರಿತು ನೀಡುತ್ತಿರುವ ಮಾರ್ಗದರ್ಶನಕಾಗಿ ಸಿಗುವ ಸಂಭಾವನೆಯಿಂದ ಸುಮಾರು 25 ವರ್ಷಗಳ ಕಾಲ ಇಲ್ಲಿನ ಅಬಿಷೇಕ ಪೂಜೆ ಹಾಗೂ ಇಲ್ಲಿ ನಡೆಯುತ್ತಿದ್ದ ಬಂಡೀ ಹಬ್ಬ , ಕೆಂಡದ ಸೇವೆಯನ್ನು ನಡೆಸುತ್ತಿದ್ದರು. ಆದರೆ ಅವೆಲ್ಲವುಗಳಿಗೆ ಉತ್ಪನ್ನ ಸಾಕಾಗದಿರುವುದರಿಂದ ಈಗ ಇಲ್ಲಿ ಯಾವುದೂ ನಡೆಯುತ್ತಿಲ್ಲ . ಈಗ ಬಸದಿಯ ಜಾಗವೂ ಅನ್ಯಧರ್ಮೀಯರ ವಶವಾಗಿದೆ.[೧]
ಆಚರಣೆ
ಬದಲಾಯಿಸಿಹಿಂದೆ ಇಲ್ಲಿ ವಿಶೇಷವಾದ ಕೆಂಡದ ಹಬ್ಬವು ನಡೆಯುತ್ತಿತ್ತು . ಬಸದಿಯ ಕ್ಷೇತ್ರಪಾಲನಿಗೆ ವಿಶೇಷವಾದ ಕಾರಣಿಕ ಶಕ್ತಿಯೂ ಇತ್ತು . ಆದ್ದರಿಂದ ಇಲ್ಲಿ ಪ್ರಸಾದ ಕೇಳುವ ಪದ್ಧತಿಯು ಇತ್ತು . ಆದರೆ ಈಗ ಅದೂ ನಿಂತಿದೆ . ಇದರಿಂದಾಗಿ ಇಲ್ಲಿಯ ಕೆಲವು ಶ್ರದ್ಧಾವಂತರು ಒರೆ . ಸೇರಿ ಇನ್ನೊಂದು ಚಿಕ್ಕ ಬಸದಿಯನ್ನು ನಿರ್ಮಿಸಿ ಅಲ್ಲಿ ಭಗವಾನ್ ಪಾಶ್ರ್ವನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ . ಆದರೆ ಈ ಪ್ರಾಚೀನ ಬಸದಿಯನ್ನು ಆರಾಧಿಸುವವರು ಇಲ್ಲ . ಬಸದಿಯ ಬಳಿಯಲ್ಲಿ ಪಾರಿಜಾತ ಹೂವಿನ ಗಿಡವಿಲ್ಲ . ಆದರೆ ಸಂಪಿಗೆ ಹಾಗೂ ನಾಗಸಂಪಿಗೆಯ ಗಿಡಗಳು ಇದ್ದುವು . ಆ ಜಾಗವೂ ಒಕ್ಕಲಿಗರ ಪಾಲಾಗಿದೆ . ಇಲ್ಲಿ ಕೆಂಪು ಮುರಕಲ್ಲನ್ನು ಕಡಿದು ಇಟ್ಟಿಗೆಗಳನ್ನು ತೆಗೆಯುತ್ತಿರುವುದರಿಂದ ದಾರಿಯ ಕಷ್ಟವಾಗಿದೆ. ಸ್ವಲ್ಪ ದೂರದಲ್ಲಿ ಒಂದು ಕೆರೆ ಇದೆ.
ವಿನ್ಯಾಸ
ಬದಲಾಯಿಸಿಈ ಪ್ರಾಚೀನ ಬಸದಿಯಲ್ಲಿ ಇರಬೇಕಾದ ಎಲ್ಲಾ ಮಂಟಪಗಳಿದ್ದು ಗರ್ಭಗೃಹದಲ್ಲಿ ಶ್ರೀ ಪಾಶ್ರ್ವನಾಥ ಸ್ವಾಮಿಯ ಬಿಳಿಶಿಲೆಯ ಖಡ್ಡಾಸನ ಭಂಗಿಯ ಸುಂದರ ಮೂರ್ತಿ ವಿರಾಜಮಾನವಾಗಿದೆ . ಆದರೆ ಬೇಸರವೆಂದರೆ ಶ್ರೀ ಸ್ವಾಮಿಗೆ ನಿತ್ಯ ಅಬಿಷೇಕ ಪೂಜೆಗಳು ನಡೆಯುತ್ತಿಲ್ಲ . ಹಿಂದೆ ಕೆಂಪು ಜಂಬಿಟ್ಟಿಗೆಯ ಪ್ರಾಕಾರಗೋಡೆಯೂ ಇದ್ದು ಬಸದಿಗೆ ರಕ್ಷಣೆ ಒದಗಿಸುತ್ತಿದ್ದರೆ ಈಗ ಅದರ ಬಹುಭಾಗ ಬಿದ್ದು ಹೋಗಿದೆ . ಪರಿಸರವು ಆಕರ್ಷಣೆಯನ್ನು ಕಳೆದುಕೊಂಡಿದೆ.
ಉಲ್ಲೇಖಗಳು
ಬದಲಾಯಿಸಿ- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೫೩.