೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು

2014ರ ನೊಬೆಲ್ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 10,2014ರಂದು ಪ್ರಶಸ್ತಿ ಪ್ರಧಾನ ಮಾಡಲಾಗಿದೆ.ವಿವಿಧ ಕ್ಷೇತ್ರಗಳ ಪ್ರಶಸ್ತಿ ವಿಜೇತರ ವಿವರ ಹೀಗಿದೆ.

ವೈದ್ಯಕೀಯ ಕ್ಷೇತ್ರ

ಬದಲಾಯಿಸಿ

2014ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಬ್ರಿಟನ್ ಮೂಲದ ಅಮೇರಿಕ ವಿಜ್ಞಾನಿ ಜಾನ್ ಒ ಕೀಫ್ ಮತ್ತು ನಾರ್ವೆ ದಂಪತಿ ಎಡ್ವರ್ಡ್ ಮೊಸೆರ್ ಹಾಗೂ ಮೇ ಬ್ರಿಟ್ ಮೊಸೆರ್ ಅವರನ್ನು ಆಯ್ಕೆ ಮಾಡಲಾಗಿದೆ. ಮಿದುಳಿನ ಕರಾರುವಕ್ಕಾದ ಆಂತರಿಕ ಸಂಚಾರ ಮಾರ್ಗದರ್ಶನ ವ್ಯವಸ್ಥೆ (ಜಿಪಿಎಸ್)ನಿಗೂಡ ಕಾರ್ಯವೈಕರಿ ಕುರಿತ ಸಂಶೋಧನೆಗಾಗಿ ಪ್ರಶಸ್ತಿ ನೀಡಲಾಗಿದೆ.

 
ಎಡ್ವರ್ಡ್ ಮೊಸೆರ್

ನಮ್ಮ ಸುತ್ತಮುತ್ತಲಿನ ಸಂಕೀರ್ಣ ಪರಿಸದಲ್ಲಿ ಮಿದುಳು ಹೇಗೆ ಕರಾರುವಕ್ಕಾಗಿ ಪಥವನ್ನು ಗುರುತಿಸುತ್ತದೆ ಎಂಬ ಸಮಸ್ಯೆಯನ್ನು ಮೂವರು ಬಿಡಿಸಿಟ್ಟಿದ್ದಾರೆ. ಶತಮಾನಗಳಿಂದ ಮಿದುಳಿನ ಮಾರ್ಗಸೂಚಿ ವ್ಯವಸ್ಥೆಯ ವಿಚಾರ ವಿಜಾನಿಗಳಿಗೆ ಮತ್ತು ತತ್ವಜಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿತ್ತು.ಅದಕ್ಕೀಗ ಈ ಸಂಶೋಧನೆಯಿಂದ ಸಮರ್ಪಕ ಉತ್ತರ ದೊರೆತಿದೆ. ಇಲಿಗಳ ಮಿದುಳಿನ ನರಮಂಡಲದ ಮೇಲೆ ಸಂಶೋಧನೆ ಕೈಗೊಂಡಿದ್ದ ಕೀಫ್ ಮೆದುಳಿನ ಸ್ಥಾನಿಕ ವ್ಯವಸ್ಥೆ ಭಾಗವಾದ ಅಂಗವನ್ನು 1971ರಲ್ಲಿಯೇ ಪತ್ತೆ ಹಚ್ಚಿದ್ದರು. ಅದಾದ ಮೂರು ದಶಕಗಳ ನಂತರ ಮೊಸೆರ್ ದಂಪತಿ 2005ರಲ್ಲಿ ಮಿದುಳಿನ ಜಿಪಿಎಸ್ ವ್ಯವಸ್ಥೆಯ ನಿರ್ವಹಿಸುವ ಮತ್ತೊಂದು ಪ್ರದೇಶವನ್ನು ಪತ್ತೆ ಹಚ್ಚಿದ್ದರು. ಮಿದುಳಿನಲ್ಲಿ ಎರಡು ವಿಭಿನ್ನ ನರಕೋಶಗಳಿಂದ ಒಂದು ಸ್ಥಾನಿಕ ವ್ಯವಸ್ಥೆ ನಿರ್ಮಾಣವಾಗುವುದನ್ನು ಕಂಡು ಹಿಡಿದಿದ್ದರು. ಮರೆಗುಳಿ ಕಾಯಿಲೆ ಸೇರಿದಂತೆ ಅನೇಕ ನರ ಸಂಬಧ ಕಾಯಿಲೆಗಳ ಚಿಕಿತ್ಸೆ ಮತ್ತು ಔ‌‍‍‍‍ಷಧ ಸಂಶೋಧನೆಗೆ ಇದು ನೆರವಾಗಲಿದೆ. ಪ್ರಶಸ್ತಿ ಒಂದು ಮಿಲಿಯನ್ ಡಾಲರ್ (ಅಂದಾಜು 6ಕೋಟಿ) ನಗದು ಪುರಸ್ಕಾರವನ್ನು ಒಳಗೊಂಡಿದ್ದು, ಪ್ರಶಸ್ತಿ ಮೊತ್ತವನ್ನು ಮೊರೆಸ್ ದಂಪತಿ ಹಾಗೂ ಕೀಫ್ ಸಮನಾಗಿ ಹಂಚ್ಚಿಕೊಂಡಿದ್ದಾರೆ,

ಯಾರಿವರು?

ಬದಲಾಯಿಸಿ

ಕೀಫ್ ಅವರು ಈಗ ಯೂನಿವರ್ಸಿಟಿ ಕಾಲೇಜ್ ಲಂಡನ್ ನಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.ಮತ್ತು ಮೊಸೆರ್ ದಂಪತಿ ನಾರ್ವೆಯ ತಂತ್ರಜ್ಞಾನ ವಿವಿಯಲ್ಲಿ ನರವಿಜಾನಕ್ಕೆ ಸಂಬಂಧಿಸಿದ ಕೇಂದ್ರವೊಂದನ್ನು ಸ್ಥಾಪಿಸಿ ಅಧಯನದಲ್ಲಿ ತೊಡಗಿಕೊಂಡಿದ್ದಾರೆ.

ಭೌತಶಾಸ್ತ್ರ

ಬದಲಾಯಿಸಿ

ಪರಿಸರ ಸ್ನೇಹಿ ಬ್ಲ್ಯೂ ಎಲ್ ಇಡಿ ಬಲ್ಬ್ ಗಳನ್ನು ಶೋಧಿಸಿದ ಜಪಾನಿನ ಇಸಾಮು ಅಕಾಸಾಕಿ ಮತ್ತು ಹಿರೋಶಿ ಅಮಾನೊ ಮತ್ತು ಅಮೇರಿಕದ ವಿಜ್ಞಾನಿ ಶುಜಿ ನಕಾಮುರಾ ಭೌತಶಾಸ್ತ್ರದ ನೊಬೆಲ್ ಗೌರವಕ್ಕೆ ಪಾತ್ರರಾಗಿದ್ದಾರೆ.

ನೀಲಿ ಬೆಳಕು ಸೂಸುವ ಡಯೋಡುಗಳ ಸಂಶೋಧನೆ. ಸಾಮಾನ್ಯ ಹಳದಿ ಬೆಳಕೀಯುವ ಬಲ್ಬ್ ಗಳು ಒಂದು ವ್ಯಾಟ್ ವಿದ್ಯುತ್ ಬಳಸಿಕೊಂಡು 16 ಲುಮೆನ್ ಪ್ರಕಾಶ ನೀಡುತ್ತವೆ. ಫ್ಲೊರೊಸೆಂಟ್ ದೀಪಗಳು 70 ಲುಮೆನ್ ಪ್ರಕಾಶ ಕೊಡುತ್ತದೆ.ಆದರೆ ಈ ಮೂವರು ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ಡಯೋಡುಗಳು ಅಳವಡಿಕೆಯಾಗಿತುವ ಎಲ್ ಇಡಿ ಬಲ್ಬ್ ಗಳು ಒಂದು ವ್ಯಾಟ್ ವಿದ್ಯುತ್ ಉರಿಸಿ ಭರ್ತಿ 300 ಲುಮೆನ್ ಬೆಳಕು ಕೊಡುತ್ತದೆ. ಪ್ಲೊರೊಸೆಂಟ್ ಬಲ್ಬ್ ಗಳು 10 ಸಾವಿರ ಗಂಟೆ ಉರಿದು ಕೆಟ್ಟು ಹೋಗುತ್ತವೆ. ಇನ್ ಕ್ಯಾಂಡಿಸೆಂಟ್ ಬಲ್ಬ್ ಗಳ ಬಾಳಿಕೆಯಂತೂ ಬರೀ ಒಂದು ಸಾವಿರ ಗಂಟೆಗಳು ಮಾತ್ರ. ಆದರೆ ಎಲ್ ಇಡಿ ಬಲ್ಬ್ ಗಳು ಬರೋಬ್ಬರಿ ಒಂದು ಲಕ್ಷ ಗಂಟೆಗಳ ಕಾಲ ಉರಿಯಲು ಶಕ್ತವಾಗಿರುತ್ತವೆ. 1990ರ ದಶಕದಲ್ಲಿ ಈ ಮೂವರು ಸೆಮಿಕಂಡಕ್ಟರ್ ಗಳ ಮೂಲಕ ನೀಲಿ ಲೈಟ್ ಉತ್ಪಾದಿಸಿ ಬೆಳಕಿನ ತಂತ್ರಜಾನಕ್ಕೆ ಹೊಸ ಭಾಶ್ಯ ಬರೆದರು. ಈ ನೀಲಿ ಲೈಟ್ ಗಳ ಮೂಲಕ ಬಿಳಿ ಬೆಳಕನ್ನು ಹೊರಸೂಸುವ ಎಲ್ ಇಡಿ ಲ್ಯಾಂಪ್ ಗಳನ್ನು ಉತ್ಪಾದಿಸಲಾಗುತ್ತದೆ.

ಯಾರಿವರು?

ಬದಲಾಯಿಸಿ

85 ವರ್ಷದ ಇಸಾಮು ಅಕಾಸಾಕಿ ಅವರು ಮೆಜಿಯೊ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. 54 ವರ್ಷದ ಹಿರೋಶಿ ಅಮಾನೊ ಅವರು ನಗೋಯಾ ವಿವಿಯ ಪ್ರಾಧ್ಯಾಪಕರು. ಇನ್ನು 60 ವರ್ಷದ ಶುಜಿ ನಕಾಮುರಾ ಕ್ಯಾಲಿಫೋರ್ನಿಯ ವಿವಿಯ ಪ್ರಾಧ್ಯಾಪಕರು.

ರಸಾಯನಶಾಸ್ತ್ರ

ಬದಲಾಯಿಸಿ

ಅಮೇರಿಕ ವಿಜ್ಞಾನಿಗಳಾದ ಎರಿಕ್ ಬೆಟ್ಜಿಗ್ ಮತ್ತು ವಿಲಿಯಂ ಮೋರ್ನರ್ ಹಾಗೂ ಜರ್ಮನಿಯ ಸ್ಟಿಫನ್ ಹೆಲ್ ಅವರಿಗೆ ರಸಾಯನಶಾಸ್ತ್ರ ನೊಬೆಲ್ ಲಭಿಸಿದೆ.

ಹೈ ರೆಸಲ್ಯೂಶನ್ ಮೈಕ್ರೋಸ್ಕೋಪ್ ಅಥವಾ ನ್ಯಾನೋಸ್ಕೋಪಿಗಳ ಮೂಲಕ ಜೀವಕೋಶದ ಸೂಕ್ಸ್ಮಾಣುಗಳನ್ನು ಮತ್ತಷ್ಟು ನಿಖರವಾಗಿ ವೀಕ್ಷಿಸಲು ನೆರವಾಗುವ ಸುಧಾರಿತ ತಂತ್ರಜಾನ ಅಭಿವೃದ್ಧಿಪಡಿಸಿದ್ದಕ್ಕೆ ಇವರಿಗೆ ಈ ಗೌರವ ಪ್ರಾಪ್ತಿಯಾಗಿದೆ. ಸಾಂಪ್ರದಾಯಿಕ ಮೈಕ್ರೋಸ್ಕೋಪ್ಗಳಿಗೆ ಹೋಲಿಸಿದರೆ ಈ ಸುಧಾರಿತ ಮೈಕ್ರೋಸ್ಕೋಪ್ಗಳು ಹೆಚ್ಚು ರೆಸಲ್ಯೂಶನ್ ಹೊಂದಿವೆ.

ಯಾರಿವರು?

ಬದಲಾಯಿಸಿ

54 ವರ್ಷದ ಬೆಟ್ಜಿಗ್ ಅವರು ಅಮೇರಿಕದ ವರ್ಜಿನಿಯಾದಲ್ಲಿರುವ ಹೋವರ್ಡ್ ಹ್ಯೂಸ್ ವೈದ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದಾರೆ. 51ರ ಹರೆಯದ ಹೆಲ್ ಅವರು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಜೀವ ಭೌತರಸಾಯನಶಾಸ್ತ್ರ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಮೋರ್ನರ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟ್ಯಾನ್ ಫರ್ಡ್ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ವಿಶ್ವದ ಅತ್ಯುನ್ನತ ಶಾಂತಿ ಗೌರವ ಎಂದೇ ಪ್ರಸಿದ್ದಿಯಾಗಿರುವ ನೊಬೆಲ್ ಶಾಂತಿ ಪ್ರಶಸ್ತಿ ಸರಿಯಾಗಿ 35 ವರ್ಷಗಳ ಬಳಿಕ ಭಾರತಿಯರೊಬ್ಬರಿಗೆ ಜಂಟಿಯಾಗಿ ಲಭಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಪರ ಅವಿರತ ಹೋರಾಟ ನಡೆಸುತ್ತಿರುವ ಭಾರತದ ಕೈಲಾಸ್ ಸತ್ಯಾರ್ಥಿ 2014ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಪರ ದನಿ ಎತ್ತಿ ತಾಲಿಬಾನಿಂದ ಶಿಕ್ಷೆಗೂ ಒಳಗಾಗಿದ್ದ ಪಾಕ್ ನ 17 ವರುರ್ಷದ ಬಾಲಕಿ ಮಲಾಲ ಯೂಸಫ್ ಝಾಯಿ ಜತೆ ಸತ್ಯಾರ್ಥಿ ಅವರು ಈ ಗೌರವವನ್ನು ಹಂಚ್ಚಿಕೊಂಡಿದ್ದಾರೆ.

ಮಕ್ಕಳ ಹಾಗೂ ಯುವ ಜನರ ಶೋಷಣೆಯ ವಿರುದ್ದ ಹಾಗೂ ಮಕ್ಕಳ ಶಿಕ್ಷಣ ಹಕ್ಕುಗಳ ಪರ ಹೋರಾಡುವಲ್ಲಿ ವೈಯಕ್ತಿಕ ದಿಟ್ಟತನ ತೋರಿದ್ದು. ಗಾಂಧೀವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ ಬಚಪನ್ ಬಚಾವೋ ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಶೋಷಿತರ ಧ್ವನಿಯಾಗಿ ನಿಂತಿದ್ದಾರೆ. ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳ ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತರಾಷ್ಟ್ರಿಯ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿಕೊಂಡಿದ್ದಾರೆ. ಮಲಾಲಾ ಸಹ ಉಗ್ರರ ಬೆದರಿಕೆಗೆ ಮಣಿಯದೇ ಕಿರಿಯ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕುಗಳ ಹೋರಟಗಾರ್ತಿಯಾಗಿ ರೂಪುಗೊಂಡು, ಅವರ ಚಳವಳಿಯಿಂದ ಹಲವು ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಹಕ್ಕು ದೊರೆಯುವಂತಾಗಿದೆ.

ಯಾರಿವರು?

ಬದಲಾಯಿಸಿ

ಅತಿ ಕಿರಿಯ ವ್ಯಕ್ತಿ ತಾಲಿಬಾನ್ ಉಗ್ರರ ದಾಳಿಗೆ ಸಿಲುಕಿ ಕೂದಳಲತೆಯಲ್ಲಿ ಪಾರಾಗಿ ಬಂದ ಮಲಾಲ ನೊಬೆಲ್ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದುವರೆಗೂ ಈ ದಾಖಲೆ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ೧೯೧೫ರಲ್ಲಿ ತಂದೆಯ ಜೊತೆಗೆ ನೊಬೆಲ್ ಪಡೆದ ವಿಜ್ಞಾನಿ ಲಾರೆನ್ಸ್ ಬ್ರ್ಯಾಗ್(೨೫) ಅವರ ಹೆಸರಿನಲ್ಲಿತ್ತು. ಪಾಕಿಸ್ತಾನದ ತಾಲಿಬಾನ್ ಉಗ್ರ ಸಂಘಟನೆಯು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಶೇಧಿಸಿತ್ತು