೧೯೮೭ರ ಪಂಜಾಬ್ ನರಮೇಧ

ಉಗ್ರರು ಎರಡು ಬಸ್ಗಳ ಮೇಲೆ ದಾಳಿ ಮಾಡಿದರು ಮತ್ತು 34 ಬಸ್ ಪ್ರಯಾಣಿಕರನ್ನು ಕೊಂದರು. ಕಾರನ್ನು ಮತ್ತು ಜೀಪ್ ಬಳಸಿ ಉಗ

೧೯೮೭ರ ಪಂಜಾಬ್ ನರಮೇಧವು ಪಂಜಾಬಿನ ಗಡಿಯ ಬಳಿ ಹರಿಯಾಣ ರಾಜ್ಯದಲ್ಲಿ ಸಿಖ್ ಉಗ್ರಗಾಮಿಗಳಿಂದ ನಡೆದ ನರಮೇಧ. ಇದರಲ್ಲಿ ಸಿಖ್ ಉಗ್ರಗಾಮಿಗಳು ೩೪ ಜನ ಹಿಂದೂಗಳನ್ನು ಕೊಂದರು. ಬಸ್ ಒಂದನ್ನು ಸೇತುವೆಯೆ ಮೇಲೆ ಒಂದು ಕಾರ್ ಮತ್ತು ಜೀಪ್ ಅಡ್ಡಹಾಕಿ ತಡೆದು ನಿಲ್ಲಿಸಿದ ಉಗ್ರರು ಅದರಲ್ಲಿ ಮೂವತ್ತು ಹಿಂದೂ ಪ್ರಯಾಣಿಕರನ್ನು ಪ್ರತ್ಯೇಕಿಸಿ ಹೊರಗೆಳೆದು ಗುಂಡಿನ ಧಾಳಿನಡೆಸಿ ಹತ್ಯೆಗೈದರು. ಅನಂತರ ಮತ್ತೊಂದು ಬಸ್ಸಿನತ್ತ ಗುಂಡುಹಾರಿಸಿ ನಾಲ್ಕು ಜನರನ್ನು ಕೊಲೆಮಾಡಿದರು.[೧]

ಹರಿಯಾಣ ರಾಜ್ಯದ ಹಿಸ್ಸಾರ್ ಜಿಲ್ಲೆಯ ಫತೇಹಾಬಾದ್ ಸಮೀಪ ಜುಲೈ ೬ ರಂದು ಚಂದೀಗಡದಿಂದ ಋಷಿಕೇಶಕ್ಕೆ ಹೊರಟಿದ್ದ ಹರಿಯಾಣ ಸಾರಿಗೆ ಬಸ್ಸಿನಲ್ಲಿ ಈ ಘಟನೆ ನಡೆಯಿತು. 'ಖಲಿಸ್ತಾನ್ ಕಮಾಂಡೋ ಫೋರ್ಸ್' ಸಂಘಟನೆಯು ಇದರ ಹೊಣೆ ಹೊತ್ತುಕೊಂಡಿತು.[೨] ಆ ಕಾಲಘಟ್ಟದಲ್ಲಿ ಪಂಜಾಬ್ ಪ್ರದೇಶಗಳಲ್ಲಿ ನಡೆದ ಹಿಂದೂಗಳ ಮೇಲಿನ ಸಿಖ್ ಉಗ್ರರ ಹಿಂಸಾಚಾರಗಳಲ್ಲಿ ಇದು ಒಂದಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. 34 HINDUS KILLED IN NEW BUS RAIDS; SIKHS SUSPECTED, New York Times, July 8, 1987
  2. A cold blooded operation, India Today news, July 31, 1987