ಹ.ವೆಂ.ನಾಗರಾಜರಾವ್ ಇವರು ೧೯೨೬ ಮೇ ೫ರಂದು ತುಮಕೂರಿನಲ್ಲಿ ಜನಿಸಿದರು. ತುಮಕೂರಿನ ಶಾಲಾದಿನಗಳಲ್ಲಿ ಇವರು ಪತ್ರಕರ್ತ ಹೆಚ್.ಆರ್.ನಾಗೇಶರಾವ್ ಅವರ ಸಹಪಾಠಿ.


ಪತ್ರಿಕೋದ್ಯಮ

ಬದಲಾಯಿಸಿ

ಹ.ವೆಂ.ನಾಗರಾಜರಾವ್ ಇವರು ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಪ್ರಜಾಮತ ವಾರಪತ್ರಿಕೆಯಲ್ಲಿ ಸಂಪಾದಕರಾಗಿ, ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.


ಸಾಹಿತ್ಯ

ಬದಲಾಯಿಸಿ

ಕವನ ಸಂಕಲನ

ಬದಲಾಯಿಸಿ
  • ಐದು ದೀಪದ ಕಂಬ
  • ಮಹಾತ್ಮಾ ಗಾಂಧಿ ರಸ್ತೆ ಮತ್ತು ಇತರ ಕವನಗಳು

ಕಥಾಸಂಕಲನ

ಬದಲಾಯಿಸಿ
  • ಕತ್ತಲೆ ಬೆಳಕು

ಪ್ರಬಂಧ

ಬದಲಾಯಿಸಿ
  • ಸೃಜನಶೀಲ

ಪ್ರವಾಸ ಸಾಹಿತ್ಯ

ಬದಲಾಯಿಸಿ
  • ನವರಷ್ಯದ ನೋಟ

ಪುರಸ್ಕಾರ

ಬದಲಾಯಿಸಿ
  • ಮುಳುಬಾಗಿಲ ಶ್ರೀಪಾದಮಠದ ಶ್ರೀ ಶ್ರೀ ಶ್ರೀ ವಿಜಯನಿಧಿ ತೀರ್ಥ ಶ್ರೀಪಾದಂಗಳವರು ‘ಪತ್ರಿಕಾ ಸಾಹಿತ್ಯ ರತ್ನ’ ಎನ್ನುವ ಬಿರುದನ್ನು ದಯಪಾಲಿಸಿದ್ದಾರೆ.
  • ಕರ್ನಾಟಕ ಜನಸೇವಾ ಪರಿಷತ್ ಇವರಿಗೆ ‘ಸಂಪಾದಕ ಕೇಸರಿ’ ಎನ್ನುವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
  • ೧೯೭೮ರಲ್ಲಿ ಕರ್ನಾಟಕದ ಲೇಖಕರು, ಕಲಾವಿದರು ರಾಜ್ಯಪಾಲರ ಸಮ್ಮುಖದಲ್ಲಿ ಸನ್ಮಾನ ಪತ್ರಿಕೆ ನೀಡಿ ಗೌರವಿಸಿದ್ದಾರೆ.