ಹ್ವೀಟ್‍ಸ್ಟೋನ್ ಬ್ರಿಜ್
ಹ್ವೀಟ್‍ಸ್ಟೋನ್ ಬ್ರಿಜ್ ಎಂದರೆ ಅಜ್ಞಾತ ರೋಧವನ್ನು (ರೆಸಿಸ್ಟೆನ್ಸ್) ಜ್ಞಾತ ಶಿಷ್ಟ ರೋಧದೊಂದಿಗೆ ಹೋಲಿಸಿ ಮೊದಲಿನದರ ವಿದ್ಯುದ್ರೋಧವನ್ನು ಅಳೆಯುವ ಸಾಧನ.[೧] ಹ್ವೀಟ್‌ಸ್ಟೋನ್ ನೆಟ್‌ವರ್ಕ್, ರೆಸಿಸ್ಟೆನ್ಸ್ ಬ್ರಿಜ್ ಎಂಬ ಹೆಸರುಗಳೂ ಇವೆ. ಇಂಗ್ಲಿಷ್ ಭೌತವಿಜ್ಞಾನಿ ಹಾಗೂ ಉಪಜ್ಞೆಕಾರ ಚಾರ್ಲ್ಸ್ ಹ್ವೀಟ್‌ಸ್ಟೋನ್ (1802-1914) ಎಂಬಾತ ಇಂಗ್ಲಿಷ್ ಗಣಿತವಿದ ಸ್ಯಾಮ್ಯುಯಲ್ ಹಂಟರ್ ಕ್ರಿಸ್ಟಿ ಎಂಬವನ ಚಿಂತನೆಯಿಂದ ಪ್ರಭಾವಿತನಾಗಿ ನಿರ್ಮಿಸಿದ ಸಾಧನವಿದು. ವಿದ್ಯುದ್ರೋಧಗಳ ಹೋಲಿಕೆಯ ವಿಧಾನವನ್ನು ಇಲ್ಲಿ ಅನುಸರಿಸುವುದಿದೆ. ಈ ವಿಧಾನ ವಿದ್ಯುತ್ಪ್ರವಾಹದ ಅತಂತ್ರಸ್ಥಿತಿಯನ್ನು ಅವಲಂಬಿಸಿರುವುದರಿಂದ ಈ ಬ್ರಿಡ್ಜನ್ನು ಬಳಸಿ ಮಾಡುವ ಮಾಪನೆ ನಿಜಮೌಲ್ಯದ್ದಾಗಿರುತ್ತದೆ.
ಹ್ವೀಟ್‍ಸ್ಟೋನ್ ಬ್ರಿಜ್‌ನ ತತ್ತ್ವದ ಆಧಾರದ ಮೇಲೆ ರಚನೆಯಾಗಿರುವ ಮತ್ತೊಂದು ಸಾಧನ ವ್ಯುತ್ಕ್ರಮಪ್ರವಾಹ ಬ್ರಿಜ್. ಪ್ರೇರಕತ್ವವನ್ನು (ಇಂಡಕ್ಟನ್ಸ್) ಮತ್ತು ಧಾರಿತ್ವವನ್ನು (ಕಪ್ಯಾಸಿಟನ್ಸ್) ಇದರಿಂದ ಅಳೆಯುತ್ತಾರೆ.
ಉಲ್ಲೇಖಗಳು
ಬದಲಾಯಿಸಿಹೊರಗಿನ ಕೊಂಡಿಗಳು
ಬದಲಾಯಿಸಿ- DC Metering Circuits chapter from Lessons In Electric Circuits Vol 1 DC free ebook and Lessons In Electric Circuits series.
- Test Set I-49
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: