ಹ್ಯಾಶ್ ಬ್ರೌನ್ ಒಂದು ಜನಪ್ರಿಯ ಅಮೇರಿಕನ್ ತಿಂಡಿ ಖಾದ್ಯವಾಗಿದೆ. ಇದು ಬಾಣಲೆಯಲ್ಲಿ ಕರಿದ, ಚೂರುಮಾಡಿದ, ಚೌಕವಾಗಿ ಕತ್ತರಿಸಿದ, ತೆಳು ಬಿಲ್ಲೆಗಳಾಗಿ ಕತ್ತರಿಸಿದ ಅಥವಾ ತುರಿದ ಆಲೂಗಡ್ಡೆಗಳನ್ನು ಹೊಂದಿರುತ್ತದೆ; ಕೆಲವು ಪಾಕವಿಧಾನಗಳು ಚೌಕವಾಗಿ ಕತ್ತರಿಸಿದ ಅಥವಾ ಕೊಚ್ಚಿದ ಈರುಳ್ಳಿಗಳನ್ನು ಸೇರಿಸುತ್ತವೆ.[೧] ಹ್ಯಾಶ್ ಬ್ರೌನ್ ಮೊದಲ ಬಾರಿಗೆ ನ್ಯೂ ಯಾರ್ಕ್ ನಗರದಲ್ಲಿನ ತಿಂಡಿಯ ಖಾದ್ಯಪಟ್ಟಿಗಳಲ್ಲಿ ೧೮೯೦ರ ದಶಕದಲ್ಲಿ ಕಾಣಿಸಿಕೊಳ್ಳುವುದು ಆರಂಭವಾಯಿತು. ಹ್ಯಾಶ್ ಬ್ರೌನ್ ಉತ್ತರ ಅಮೇರಿಕದಲ್ಲಿನ ಹೋಟೆಲುಗಳಲ್ಲಿ ಮುಖ್ಯ ತಿಂಡಿ ಆಹಾರವಾಗಿದೆ. ಅಲ್ಲಿ ಇದನ್ನು ಹಲವುವೇಳೆ ಒಂದು ದೊಡ್ಡ ಸಮಾನವಾದ ಕುಕ್‍ಟಾಪ್ ಅಥವಾ ಗ್ರಿಲ್ ಮೇಲೆ ಕರಿಯಲಾಗುತ್ತದೆ.[೨]

ಹ್ಯಾಶ್ ಬ್ರೌನ್ ರಾಶಿಯಾಗಿ ತಯಾರಿಸಲ್ಪಟ್ಟ ಒಂದು ಜನಪ್ರಿಯ ಉತ್ಪನ್ನವಾಗಿದ್ದು ಇದನ್ನು ತಣ್ಣಗಾಗಿಸಿದ, ಘನೀಕರಿಸಿದ[೩][೪] ಮತ್ತು ನಿರ್ಜಲೀಕರಿಸಿದ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Spieler, M.; Giblin, S. (2012). Yummy Potatoes: 65 Downright Delicious Recipes. Chronicle Books LLC. p. 24. ISBN 978-1-4521-2528-2. Retrieved January 5, 2017.
  2. Slater, Nigel (November 4, 2006). "Nigel Slater: Making a hash of it". The Guardian.
  3. Butts, L. (2000). Okay, So Now You're a Vegetarian: Advice and 100 Recipes from One Vegetarian to Another. Broadway Books. p. 64. ISBN 978-0-7679-0527-5. Retrieved January 5, 2017.
  4. Snider, N.; Boisvert, C. (1985). Frozen Food Encyclopedia for Foodservice: Formerly Frozen Food Institutional Encyclopedia. National Frozen Food Association. p. 114. Retrieved January 5, 2017. Frozen hash browns are scored on color, defects, texture; grading also is based on flavor and odor.