ಹೇಡಿತನ

ಒಂದು ಗುಣಲಕ್ಷಣ

ಹೇಡಿತನ ಒಂದು ಗುಣಲಕ್ಷಣ ಮತ್ತು ಇದರಲ್ಲಿ ಅಗತ್ಯವಾದ ಸಮಯದಲ್ಲಿ ಸರಿಯಾದದ್ದನ್ನು, ಒಳ್ಳೆಯಾದದ್ದನ್ನು ಮತ್ತು ಇತರರಿಗೆ ಅಥವಾ ತಮಗೇ ಸಹಾಯವಾಗುವಂಥದ್ದನ್ನು ಮಾಡುವುದು ಅಥವಾ ಹೇಳುವುದರ ಬದಲಾಗಿ, ಭಯ ಮತ್ತು ಅತಿಯಾದ ಸ್ವಕಾಳಜಿ ಪ್ರಾಮುಖ್ಯತೆ ಪಡೆಯುತ್ತದೆ. ಇದು ಧೈರ್ಯದ ವಿರುದ್ಧ ಪದ. ಹೇಡಿತನವು ಸವಾಲಿಗೆ ಎದುರಾಗಿ ನಡತೆಯ ವೈಫಲ್ಯವನ್ನು ಸೂಚಿಸುತ್ತದೆ.

ಹೇಡಿ ಸಿಂಹ

ಅನೇಕ ಮಿಲಿಟರಿ ನ್ಯಾಯಸಂಹಿತೆಗಳು ಕಾದಾಟದಲ್ಲಿ ಹೇಡಿತನವನ್ನು ಮರಣದ ಶಿಕ್ಷೆಗೆ ಯೋಗ್ಯವಾದ ಅಪರಾಧವೆಂದು ಪ್ರತಿಬಂಧಿಸುತ್ತವೆ.

ಅನೇಕ ಅಸ್ತಿತ್ವದಲ್ಲಿರುವ ಮತ್ತು ಹಿಂದೆ ಅಸ್ತಿತ್ವದಲ್ಲಿದ್ದ ಸಂಸ್ಕೃತಿಗಳು ಬೇಡುವ ಕಾರ್ಯ ಅಥವಾ ಗುಣಲಕ್ಷಣಕ್ಕೆ ವಿರುದ್ಧವಾಗಿ, ಹೇಡಿತನವು ಅನೇಕ ಸಂಸ್ಕೃತಿಗಳು ಮತ್ತು ಅದರ ಪ್ರತಿನಿಧಿಗಳಿಂದ ದೂಷಿಸಲ್ಪಡುವ ಮತ್ತು ದಂಡಿಸಲ್ಪಡುವ ಒಂದು ನಡತೆಯ ನ್ಯೂನತೆಯೆಂದು ನಿರ್ಧರಿಸಲ್ಪಡುತ್ತದೆ.

ಹೇಡಿತನದ ಕೃತ್ಯಗಳು ದೀರ್ಘಕಾಲದಿಂದ ಮಿಲಿಟರಿ ಕಾನೂನಿನಿಂದ ದಂಡನಾರ್ಹವಾಗಿವೆ. ಶತ್ರುವಿಗೆ ಎದುರಾಗಿ ಪರಿತ್ಯಾಗ ಮತ್ತು ಆದೇಶಗಳ ವಿರುದ್ಧವಾಗಿ ಶತ್ರುವಿಗೆ ಶರಣಾಗುವುದನ್ನು ಒಳಗೊಂಡಂತೆ, ಮಿಲಿಟರಿ ಕಾನೂನು ವಿಶಾಲ ವ್ಯಾಪ್ತಿಯ ಹೇಡಿತನದ ಅಪರಾಧಗಳನ್ನು ವ್ಯಾಖ್ಯಾನಿಸುತ್ತದೆ. ಅಂತಹ ಕೃತ್ಯಗಳಿಗೆ ಶಿಕ್ಷೆ ಸಾಮಾನ್ಯವಾಗಿ ಉಗ್ರವಾಗಿರುತ್ತದೆ, ದೈಹಿಕ ಶಿಕ್ಷೆಯಿಂದ ಹಿಡಿದು ಮರಣದಂಡನೆವರೆಗೆ ಇರುತ್ತದೆ.

"https://kn.wikipedia.org/w/index.php?title=ಹೇಡಿತನ&oldid=1007206" ಇಂದ ಪಡೆಯಲ್ಪಟ್ಟಿದೆ