ಹೆಸರು ಬೇಳೆ ಪಾಯಸ

ತುಳುನಾಡಿನ ಯಾವುದೆ ಹಬ್ಬಹರಿದಿನಗಳಾಗಲಿ ಹೆಸರು ಬೇಳೆಯಿಂದ ತಯಾರಿಸುವ ಪಾಯಸವು ಅತ್ಯಂತ ಪ್ರಸಿದ್ಧವಾದ ಸಿಹಿ ಖಾದ್ಯವಾಗಿದೆ. ಈ ಪಾಯಸವನ್ನು ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಹಾಗೂ ಮನೆಯ ವಿಶೇಷ ಕಾರ್ಯಕ್ರಮಗಳಲ್ಲಿ ತಯಾರಿಸುತ್ತಾರೆ. ಸಿಹಿಯನ್ನು ಸವಿಯಬೇಕೆಂದು ಆಸೆಯಾದಾಗ, ಈ ಪಾಯಸವನ್ನು ಸುಲಭವಾಗಿ ತಯಾರಿಸಬಹುದು. ಈ ಪಾಯಸವನ್ನು ಬೆಲ್ಲ ಅಥವಾ ಸಕ್ಕರೆಯಿಂದ ಮಾಡಬಹುದು. ಉತ್ತಮ ರುಚಿ ಹಾಗೂ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ ಸಿಹಿಯನ್ನು ಎಲ್ಲಾ ವಯಸ್ಸಿನವರು ಇಷ್ಟಪಡುವರು.

ಹೆಸರು ಬೇಳೆ ಪಾಯಸ ಮಾಡಲು ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ

1 ಲೋಟ ಹೆಸರು ಬೇಳೆ 3/4 ಲೋಟ ಪುಡಿ ಮಾಡಿದ ಬೆಲ್ಲ 1/4 ಲೋಟ ಒಣಗಿದ ತೆಂಗಿನಕಾಯಿ 2 - ಹಸಿರು ಏಲಕ್ಕಿ 2 ಚಮಚ ಗಸಗಸೆ 12 - ಗೋಡಂಬಿ 12 - ಬಾದಾಮಿ 1 ಚಮಚ ತುಪ್ಪ

ಹೆಸರು ಬೇಳೆ ಪಾಯಸ ಮಾಡುವ ವಿಧಾನ

ಬದಲಾಯಿಸಿ

ಒಣ ತೆಂಗಿನ ತುರಿ, ಗಸಗಸೆ, ಏಲಕ್ಕಿ, ಬಾದಾಮಿ ಮತ್ತು ಗೋಡಂಬಿಯನ್ನು ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ.ಬಿಸಿಯಾದ ತುಪ್ಪದಲ್ಲಿ ಹೆಸರು ಬೇಳೆ ಹಾಕಿ, 4-5 ನಿಮಿಷಗಳ ಕಾಲ ಹುರಿಯಿರಿ. ಹೆಸರು ಬೇಳೆ ಚೆನ್ನಾಗಿ ಹುರಿದು, ಸುವಾಸನೆ ಬರಲು ಬಿಡಿ.ಪಾತ್ರೆಗೆ ಹುರಿದ ಹೆಸರು ಬೇಳೆ, ಸ್ವಲ್ಪ ನೀರು ಮತ್ತು ಹಾಲನ್ನು ಸೇರಿಸಿ. ಬೇಳೆ ಚೆನ್ನಾಗಿ ಬೇಯುವಂತೆ ಕುದಿಸಲು ಬಿಡಿ.ಬೇಯಿಸಿದ ಹೆಸರು ಬೇಳೆಯನ್ನು ದಪ್ಪ ತಳದ ಪಾತ್ರೆಗೆ ಹಾಕಿ. ನಂತರ, ರುಬ್ಬಿದ ತೆಂಗಿನ ತುರಿ ಮಿಶ್ರಣವನ್ನು ಸೇರಿಸಿ. ಮಿಶ್ರಣವು ಚೆನ್ನಾಗಿ ಹೊರಸಿಗುವಂತೆ ಸಣ್ಣ ಉರಿಯಲ್ಲಿ ಕುದಿಸಲು ಬಿಡಿ. ಪುಡಿ ಮಾಡಿರುವ ಬೆಲ್ಲದ ಚೂರುಗಳನ್ನು ಸೆರಿಸಿ, ಕರಗುವ ತನಕ ನಿರಂತರವಾಗಿ ಕೋರಿ ಮತ್ತೆ, ಹಾಲನ್ನು ಸೇರಿಸಿ, ದಪ್ಪವಾದ ಸ್ಥಿತಿಗೆ ಬರುವಂತೆ 4-5 ನಿಮಿಷಗಳ ಕಾಲ ಕುದಿಸಲು ಬಿಡಿ. ಪಾಯಸ ದಪ್ಪವಾದ ಸ್ಥಿತಿಗೆ ಬಂದ ಬಳಿಕ ಉರಿಯನ್ನು ಆರಿಸಿ.[]

ನೀವು ಇಚ್ಛಿಸುವಂತೆ, ಬಿಸಿ ಬಿಸಿಯಾಗಿ ಅಥವಾ ಫ್ರಿಜ್ನಲ್ಲಿ ಇಟ್ಟು ತಣ್ಣಗಾಗಿಸಿಕೊಂಡು ಸಹ ಈ ಪಾಯಸವನ್ನು ಸವಿಯಬಹುದು.

ನಮ್ಮ ಆರೋಗ್ಯಕ್ಕೆ ಹೆಸರು ಬೇಳೆಯ ಕೊಡುಗೆ

ಬದಲಾಯಿಸಿ

ಹೆಸರುಬೇಳೆಯಲ್ಲಿ ಹಲವಾರು ಬಗೆಯ ಖನಿಜಾಂಶಗಳೊಂದಿಗೆ ಪೋಷಕಾಂಶಗಳಷ್ಟು ಹೆಚ್ಚಾಗಿಯೂ ಇರುತ್ತದೆ. ವಿಶೇಷವಾಗಿ, ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಖನಿಜಾಂಶಗಳು ಈ ಕಾಳಿನಲ್ಲಿ ವಿಶಿಷ್ಟವಾಗಿ ಪ್ರಾಮುಖ್ಯತೆ ಪಡೆಯುತ್ತವೆ. ಇದುವರೆಗೆ, ಈ ಹಳದಿ ಬಣ್ಣದ ಕಾಳಿನಲ್ಲಿ ನಮ್ಮ ಆರೋಗ್ಯವನ್ನು ಬೆಳೆಸುವ ಉತ್ತಮ ಪ್ರಮಾಣದ ಪ್ರೋಟೀನ್, ನಾರಿನಾಂಶ ಮತ್ತು ವೈವಿಧ್ಯಮಯ ವಿಟಮಿನ್ಸ್ ಸಹ ಲಭ್ಯವಾಗುತ್ತವೆ. []

ಉಲ್ಲೇಖಗಳು

ಬದಲಾಯಿಸಿ
  1. "ಹೆಸರು ಬೇಳೆ ಪಾಯಸ". Vijay Karnataka.
  2. "ಹೆಸರುಬೇಳೆ ಪಾಯಸ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಒಳ್ಳೆಯದು..." Vijay Karnataka.