ಹೆಸರುಕಾಳು-ಕಳಲೆ ಗಸಿ
ಹೆಸರುಕಾಳು-ಕಳಲೆ ಗಸಿ ಇದು ಆಟಿ ತಿಂಗಳಿನಲ್ಲಿ ಮಾಡುವ ಒಂದು ರೀತಿಯ ಪದಾರ್ಥ.[೧]
ಕಳಲೆ ಎಂದರೇನು?
ಬದಲಾಯಿಸಿಕಳಲೆ ಅಂದರೆ ಎಳೆಯ ಬಿದಿರು. ಅಥವಾ ಬಿದಿರಿನ ಚಿಗುರು. ಕರಾವಳಿ ಭಾಗದಲ್ಲಿ ಇದನ್ನು ಕಣಿಲೆ ಎಂದು ಕರೆಯುತ್ತಾರೆ. ಹಳ್ಳಿಗಳ ಕಡೆ ಮಳೆಗಾಲದಲ್ಲಿ ಸಿಗುವ ಬಿದಿರನ್ನು ತಪ್ಪದೆ ನಿತ್ಯದ ಅಡುಗೆಯಲ್ಲಿ ಬಳಸುತ್ತಾರೆ.
ಬೇಕಾಗುವ ಸಾಮಾಗ್ರಿಗಳು
ಬದಲಾಯಿಸಿ- ಮೊಳಕೆ ಹೆಸರುಕಾಳು - 1/2 ಕಪ್ಕ
- ಕಣಿಲೆ ತುಂಡುಗಳು - 1/2 ಕಪ್,
- ತೆಂಗಿನ ತುರಿ- 1ಕಪ್,
- ಒಣ ಮೆಣಸು 2-3,
- ಕೊತ್ತಂಬರಿ- 1 ಚಮಚ,
- ಜೀರಿಗೆ - 1/2 ಚಮಚ,
- ಅಂಬಟೆ ಕಾಯಿ 1,
- ಸಾಸಿವೆ 1/2 ಚಮಚ,
- ಎಣ್ಣೆ 1/2 ಚಮಚ,
- ಕರಿಬೇವು 1 ಎಸಳು,
- ಉಪ್ಪು -ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
ಬದಲಾಯಿಸಿಮೊಳಕೆ ಹೆಸರು ಕಾಳು ಮತ್ತು ಶುಚಿಗೊಳಿಸಿದ ಕಣಿಲೆ ಚೂರುಗಳನ್ನು ಬೇರೆ ಬೇರೆಯಾಗಿ ಬೇಯಿಸಿ, ಕೊತ್ತಂಬರಿ, ಜೀರಿಗೆ ಮತ್ತು ಕೆಂಪು ಮೆಣಸು ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನ ತುರಿ ಸೇರಿಸಿ ರುಬ್ಬಿ. ನಂತರ ಅಂಬಟೆಕಾಯಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಬೇಯಿಸಿದ ಹೆಸರುಕಾಳು ಮತ್ತು ಕಣಿಲೆ ಚೂರು ಸೇರಿಸಿ ಕುದಿಸಿ. ನಂತರ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.
ವಿಶೇಷ ಸೂಚನೆ
ಬದಲಾಯಿಸಿಕಣಲೆಯನ್ನು ಉಪಯೋಗಿಸುವ ಮೊದಲು 3 ದಿನ ನೀರಿನಲ್ಲಿ ನೆನೆಸಬೇಕು. ಪ್ರತಿ ದಿನ ನೀರು ಬದಲಾಯಿಸಬೇಕು ನಂತರವೇ ಅಡಿಗೆಗೆ ಉಪಯೋಗಿಸಬೇಕು
ಉಲ್ಲೇಖಗಳು
ಬದಲಾಯಿಸಿ- ↑ "ಆಟಿ ತಿಂಗಳ ತಿನಿಸು". Vijay Karnataka. Retrieved 16 July 2024.