ತುಳುನಾಡಿನಲ್ಲಿರುವ ಹೆಬ್ಬಾರ್‌ಗಳು ಭಾರತದ ಕರ್ನಾಟಕದ ತುಳು ಮಾತನಾಡುವ ಬ್ರಾಹ್ಮಣ ಸಮುದಾಯವಾಗಿದೆ. "ಹೆಬ್ಬಾರ್" ಎಂಬ ಹೆಸರು ಕನ್ನಡದಿಂದ ಬಂದಿದೆ. "ಹೆಬ್ಬು" ಎಂದರೆ ಹಿರಿದು ಅಥವಾ ದೊಡ್ಡದು ಹಾಗೂ "ಹಾರುವ" ಎಂದರೆ ಬ್ರಾಹ್ಮಣ ಎಂದರ್ಥ.

ತುಳುವ ಹೆಬ್ಬಾರ್ ಸಮುದಾಯವು ಮೂಲತಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು . ಅವರ ಮಾತೃಭಾಷೆ ತುಳು, ಇದು ಭಾರತದ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಈ ತುಳು-ಮಾತನಾಡುವ ಬ್ರಾಹ್ಮಣ ಸಮುದಾಯದ ಜನರು ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಮತ್ತು ಹಣಕಾಸು ಕ್ಷೇತ್ರದಲ್ಲಿ ಸಾಕಷ್ಟು ಪ್ರಾತಿನಿಧ್ಯ ಮತ್ತು ಗಮನಾರ್ಹ ಕೆಲಸಗಳನ್ನು ಹೊಂದಿದ್ದಾರೆ. ಅವರು ಸ್ಥಾನಿಕ ಬ್ರಾಹ್ಮಣರಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ಈ ಹೆಬ್ಬಾರ್‌ಗಳು ಪಟೇಲರಂತೆ (ಗ್ರಾಮ ಅಧಿಕಾರಿಗಳು, ಮಂತ್ರಿಗಳು, ಹಣಕಾಸು ಸಲಹೆಗಾರರು) ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ಅನೇಕರು ಕೇರಳ ಮತ್ತು ಕರ್ನಾಟಕದ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಅವರಲ್ಲಿ ಕೆಲವರು ಕೃಷಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು 'ವಿಷ ವೈದ್ಯ' (ಹಾವು ಕಡಿತದ ಚಿಕಿತ್ಸೆ)ರೂ ಆಗಿದ್ದಾರೆ. ಕೆಲವು ಕುಟುಂಬಗಳು ಆಯುರ್ವೇದ ಔಷಧಿಯನ್ನು ಅಭ್ಯಾಸ ಮಾಡುತ್ತಿವೆ. ಅವರಲ್ಲಿ ಕೆಲವರು ದೇವಸ್ಥಾನಗಳಲ್ಲಿ ತಲೆಯ ಮೇಲೆ ದೇವರನ್ನು ಹೊತ್ತುಕೊಂಡು ನರ್ತಿಸುತ್ತಾರೆ.

ಕೆಲವು ಹೆಬ್ಬಾರ್ ಕುಟುಂಬಗಳು ರಾಜಮನೆತನಕ್ಕೆ ಸೇರಿದವರಾಗಿದ್ದಾರೆ. ಅವರು ಔಪಚಾರಿಕವಾಗಿ ರಾಜರು ಮತ್ತು ಸ್ಥಳೀಯ ಆಡಳಿತಗಾರರಾಗಿದ್ದರು.