ಹೆನ್ರಿ ಟೇಲರ್
ಹೆನ್ರಿ ಟೇಲರ್ ( 1800-1886). ಇಂಗ್ಲಿಷ್ ನಾಟಕಕಾರ, ಕವಿ, ಲೇಖಕ.
ಬದುಕು ಮತ್ತು ಸಾಧನೆ
ಬದಲಾಯಿಸಿಡರ್ಹ್ಯಾಮಿನ ಬಿಷಪ್ ಮಿಡ್ಲ್‍ಹ್ಯಾಮ್‍ನಲ್ಲಿ ಹುಟ್ಟಿದ. ವಿದ್ಯಾಭ್ಯಾಸವಾದ ಮೇಲೆ ನೌಕಾಸೇನೆಯಲ್ಲಿ ಉಗ್ರಾಣದ ಕೆಲಸ ಮಾಡಿದ. ಅನಂತರ ವಸಾಹತು ಕಚೇರಿಯಲ್ಲಿ 48 ವರ್ಷ ನೌಕರಿ ಮಾಡಿದನಲ್ಲದೆ ರಾಷ್ಟ್ರದ ವಸಾಹತು ನೀತಿಯ ಮೇಲೆ ಸಾಕಷ್ಟು ಪ್ರಭಾವ ಬೀರಿದ. ಕ್ವಾರ್ಟರ್ಲಿ ರಿವ್ಯೂ ಮತ್ತು ಲಂಡನ್ ಮ್ಯಾಗಜೀóನ್‍ಗಳಿಗೆ ಲೇಖನಗಳನ್ನು ಬರೆದ. ನೈಟ್ ಪ್ರಶಸ್ತಿಯನ್ನು ಪಡೆದ (1872).
ಈತ ನಾಲ್ಕು ಗಂಭೀರ ನಾಟಕಗಳನ್ನು ಬರೆದಿದ್ದಾನೆ. ಐಸ್ಯಾಕ್ ಕೋಮೆನಸ್ (1827), ಫಿಲಿಪ್ ವ್ಯಾನ್ ಆರ್ಟ್‍ವೆಲ್ಡ್ (1834), ಎಡ್ವಿನ್ ದಿ ಫೇರ್ (1842), ಸೇಂಟ್ ಕ್ಲೆಮೆಂಟ್ಸ್ ಈವ್ (1862). ದಿ ವರ್ಜಿನ್ ವಿಡೊ (1850. ಇದನ್ನು ಎ ಸಿಸಿಲಿಯನ್ ಸಮರ್ ಎಂದು ಪುನರ್‍ನಾಮಕರಣ ಮಾಡಲಾಯಿತು) ಎಂಬುದು ಹರ್ಷನಾಟಕ. ದಿ ಈವ್ ಆಫ್ ಕಾಂಕ್ವೆಸ್ಟ್ ಅಂಡ್ ಅದರ್ ಪೊಯೆಂಸ್ (1847) ಎಂಬುದು ಭಾವಗೀತಾತ್ಮಕ ಕವನ ಸಂಕಲನ, ದಿ ಸ್ಟೇಟ್ಸ್‍ಮನ್ (1836), ನೋಟ್ಸ್ ಫ್ರಾಂ ಲೈಫ್ (1847), ನೋಟ್ಸ್ ಫ್ರಾಂ ಬುಕ್ಸ್ (1849) ಇವು ಗದ್ಯಕೃತಿಗಳು. ಆಟೊಬಯೋಗ್ರಫಿ (1885) ಎಂಬುದು ಆತ್ಮಕಥೆ. ಫಿಲಿಪ್ ವ್ಯಾನ್ ಆರ್ಟ್‍ವೆಲ್ಡ್ ಈತನಿಗೆ ಬಹಳ ಯಶಸ್ಸು ತಂದ ಕೃತಿ.