ಹೆಚ್.ಎ. ಪ್ರಭಾಕರ ರಾವ್
ಎಚ್ . ಎ. ಪ್ರಭಾಕರರಾವ್ ಬಿ.ಎಸ್.ಸಿ. (ಅಗ್ರಿ) ಹೊಸಬಾಳೆ
ಪರಿಚಯ
ಬದಲಾಯಿಸಿ_______________________
ಎಚ್ . ಎ. ಪ್ರಭಾಕರ ರಾವ್, ಇವರು ಗ್ರಾಮಾಂತರದಲ್ಲಿದ್ದರೂ ಉತ್ತಮ ಸಮಾಜ ಸೇವಕರಾಗಿ ಹೆಸರು ಪಡೆದಿದ್ದಾರೆ. ಇವರ ತಂದೆ ಶ್ರೀ ಅನಂತಪ್ಪ ಹೆಗಡೆ ; ತಾಯಿ ಶ್ರೀಮತಿ ಕೊಲ್ಲೂರಮ್ಮ.ನವರು. ಇವರ ಪತ್ನಿ ಸಿರ್ಸಿತಾಲ್ಲೂಕಿನ ಶ್ರೀಮತಿ ಜಾಹ್ನವಿಯವರು. ಇವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ - ಆಯುರ್ವೇದದಲ್ಲಿ ಬಿಎಎಂಎಸ್ ಮಾಡಿ ಎಂ.ಡಿ ಮಾಡುತ್ತಿದ್ದಾರೆ.
ವಿದ್ಯಾಭ್ಯಾಸ ಮತು ಉದ್ಯೋಗ:
ಬದಲಾಯಿಸಿ____________________________________
ಇವರು ಶಿವಮೊಗ್ಗಾ ಜಿಲ್ಲೆ ಸೊರಬ ತಾಲ್ಲೂಕಿನ ಹೊಸಬಾಳೆಯಲ್ಲಿ ೧೯೪೪ ರಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಹೊಸಬಾಳೆಯಲ್ಲಿ ಮಾಡಿ , ಪ್ರೌಢಶಾಲಾ ಶಿಕ್ಷಣವನ್ನು ಸೊರಬದಲ್ಲಿ ಮಾಡಿದರು. ನಂತರ ದ ಇಂಟರ್ ಮೀಡಿಯೇಟ್ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿಯೂ , ಬಿಎಸ್ ಸಿ ಅಗ್ರಿಕಲ್ಚರ್ ಪದವಿ ಶಿಕ್ಷಣವನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ೧೯೬೭ರಲ್ಲಿ ಮಾಡಿದರು. ಇವರು ವ್ಯವಸಾಯದಲ್ಲಿ ಪದವಿ ಪಡೆದಿದ್ದರೂ ಯಾವುದೇ ನೌಕರಿಗೆ ಹೋಗದೆ ತಮ್ಮ ಪೂರ್ವಜರು ಮಾಡಿಕೊಂಡು ಬಂದ ಅಡಿಕೆ ಭಾಗಾಯ್ತಿನ ವ್ಯವಸಾಯವನ್ನೇ ಹೊಸಬಾಳೆಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಸಮಾಜ ಸೇವೆ :
ಬದಲಾಯಿಸಿ___________________________________
೧೯೭೦ ರಲ್ಲಿ ಸಾಗರ ತಾಲ್ಲೂಕಿನಲ್ಲಿ ಅಡಿಕೆ ತೋಟಗಳಿಗೆ ಶೀತಬಾಧೆಯಿಂದ ಮರಗಳು ಸಾಯತೊಡಗಿದವು. ಆಗ ,ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದವರು ಇವರ ಸಹಾಯ ಸಲಹೆ ಕೇಳಿದರು; ಅದೇಸಂಘದ ಉಪಾದ್ಯಕ್ಕ್ಷರಾಗಿ ಕೆಲವು ವರ್ಷ ಸೇವೆಸಲ್ಲಿಸಿದರು. . ಇವರು ಸಾಗರ ಪ್ರಾಂತ್ಯದಲ್ಲಿ ತೋಟಗಳಿಗೆ ಭೇಟಿ ನೀಡಿ ಉಚಿತವಾಗಿ ಸೂಕ್ತ ಸಲಹೆ ಸಹಕಾರ ನೀಡಿದರು. ಕೃಷಿ ತಜ್ಞರಾಗಿ ೧೯೭೦ರ ಜಪಾನಿನ ಎಕ್ಷಪೋ ೭೦ ಕ್ಕೆ ಭೇಟಿ ನೀಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ೧೯೮೪ರ ಶೃಂಗೇರಿ ಅಡಿಕೆ ಸಮ್ಮೇಳನದಲ್ಲಿ ಸಾಗರ ಪ್ರಾಂತ್ಯದ ಪ್ರತಿನಿಧಿಯಾಗಿ ಭಾಗವಹಿಸಿದರು.
- ಸಾಗರದಲ್ಲಿ ೧೯೭೦ರಲ್ಲಿ ಸ್ಥಾಪನೆಯಾದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ ಸ್ಥಾಪಕ ಸದಸ್ಯರಾಗಿ ಆ ಸಂಸ್ಥೆಯಲ್ಲಿ ೧೩ ವರ್ಷ ಕೆಲಸ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಸ್ಥಾಪನೆಯಾದ ತೋಟಗಾರ‍್ಸ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಗೆ ಷೇರು ಸಂಗ್ರಹಣೆ ಮಾಡಿ ಅದರ ನಿರ್ದೇಶಕಾರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಗರದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ಲಾಲಬಹದ್ದೂರು ಕಾಲೇಜು ಸಮುಚ್ಚಯ)ದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
- ಸೊರಬ ತಾಲ್ಲೂಕಿನ ಕೃಷಿಕ ಸಮಾಜದ ನಿರ್ದೇಶಕರಾಗಿ ಗ್ರಾಮದ ಶಾಲೆ ಆಸ್ಪತ್ರೆ ದೇವಾಲಯಗಳ ಅಭಿವೃದ್ಧಿ ಸಮಿತಿಗಳಲ್ಲಿ ದ್ದು ಸಮಾಜದ ಕೆಲಸ ಮಾಡಿದ್ದಾರೆ.ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಅಧ್ಯಕ್ಷರ್ರಾಗಿ ದುಡಿದಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ಸೀಮಾ ಪರಿತ್ತಿನ ಮುಖ್ಯ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- ಇವರ ಸಮಾಜ ಸೇವೆಯನ್ನು ಪರಿಗಣಿಸಿ ಶ್ರೀ ಅಖಿಲ ಹವ್ಯಕ ಮಹಾಸಭಾದವರು ೨೪-೧-೨೦೧೦ ರಲ್ಲಿ ಪುತ್ತೂರಿನಲ್ಲಿ ಇವರಿಗೆ ವಿಶೇಷ ಸಂನ್ಮಾನ ಮಾಡಿರುತ್ತಾರೆ.
ವಿಶಿಷ್ಟ ಕಾರ್ಯ :
ಬದಲಾಯಿಸಿಇವರು ಬಹಳ ದೊಡ್ಡ ವಿಭಜಿತ ಕುಟುಂಬವಾದ ತಮ್ಮ ಹೊಸಬಾಳೆ ಕುಟುಂಬದ ಒಂಭತ್ತು ತಲೆಮಾರುಗಳ ವಂಶ ವೃಕ್ಷವನ್ನು ಸಿದ್ಧಪಡಿಸಿ ಅಚ್ಚುಹಾಕಿಸಿ ಉಚಿತವಾಗಿ ಆಯಾ ಕುಟುಂಬಗಳಿಗೆ ದಾಖಲೆಗಾಗಿ ನೀಡಿದ್ದಾರೆ. ಇದೇರೀತಿ ಎಲ್ಲರೂ ತಮ್ಮ ಕುಟುಂಬದ ವಂಶವೃಕ್ಷ ಸಿದ್ಧ ಪಡಿಸಲು ಕರೆ ಕೊಟ್ಟಿದ್ದಾರೆ. ಈಅವಿರತ ಸಮಾಜ ಸೇವೆಯ ಜೊತೆಯಲ್ಲಿ ಉತ್ತಮ ಕೃಷಿಕಾರರೆಂದು ಹೆಸರು ಪಡೆದಿದ್ದಾರೆ.
ಆಧಾರ :
ಬದಲಾಯಿಸಿ_____________________
ಎಚ್ ಎ. ಪ್ರಭಾಕರರಾವ್ ಅವರ ಜೀವನ ಚರಿತ್ರೆ (ಆತ್ಮ ಚರಿತ್ರೆ-ಜೀವನದ ಆರು ದಶಕಗಳ ಮೆಲಕು) ಮತ್ತು ಅವರ ಮುದ್ರಿತ ಬಯೋಡೇಟಾ.