ಹುಬ್ಬುಗಂಟು ಒಂದು ಮುಖಭಾವವಾಗಿದೆ ಮತ್ತು ಇದರಲ್ಲಿ ಹುಬ್ಬುಗಳನ್ನು ಒಟ್ಟಾಗಿ ತಂದು ಹಣೆಯನ್ನು ಸುಕ್ಕುಗಟ್ಟಿಸಲಾಗುತ್ತದೆ. ಸಾಮಾನ್ಯವಾಗಿ ಇದು ಅಸಮಾಧಾನ, ದುಃಖ ಅಥವಾ ಚಿಂತೆ, ಅಥವಾ ಕಡಿಮೆವೇಳೆ ಗೊಂದಲ ಅಥವಾ ಏಕಾಗ್ರತೆಯನ್ನು ಸೂಚಿಸುತ್ತದೆ. ಹುಬ್ಬುಗಂಟಿನ ನೋಟ ಸಂಸ್ಕೃತಿಯ ಅನುಸಾರವಾಗಿ ಬದಲಾಗುತ್ತದೆ.

ವಿವರಣೆ

ಬದಲಾಯಿಸಿ

ಚಾರ್ಲ್ಸ್ ಡಾರ್ವಿನ್ ಹುಬ್ಬುಗಂಟಿಕ್ಕುವ ಪ್ರಧಾನ ಕ್ರಿಯೆಯನ್ನು ಹುಬ್ಬನ್ನು ಸುಕ್ಕುಬೀಳಿಸುವುದು ಎಂದು ವರ್ಣಿಸಿದನು. ಇದರಿಂದ ಮೇಲಿನ ತುಟಿಯು ಏರಿಕೆಯಾಗಿ ಬಾಯಿಯ ಮೂಲೆಗಳು ಕೆಳಗೆ ತಿರುಗುತ್ತವೆ.[] ಹುಬ್ಬುಗಂಟಿನ ನೋಟವು ಸಂಸ್ಕೃತಿಯಿಂದ ಸಂಸ್ಕೃತಿಗೆ ಬದಲಾಗುತ್ತದಾದರೂ, ಹುಬ್ಬುಗಂಟು ಒಂದು ಋಣಾತ್ಮಕ ಮುಖಭಾವವಾಗಿ ಗುರುತಿಸಲ್ಪಡುವಲ್ಲಿ ಸ್ವಲ್ಪ ಪ್ರಮಾಣದ ಸಾರ್ವತ್ರಿಕತ್ವವಿದೆ ಎಂದು ಕಾಣುತ್ತದೆ. ವಾಸ್ತವವಾಗಿ, ಕೋಪ ಅಥವಾ ಜುಗುಪ್ಸೆಯ ಘಟಕವಾಗಿ ಹುಬ್ಬುಗಂಟನ್ನು ಸಂಸ್ಕೃತಿಗಳಾದ್ಯಂತ ಗುರುತಿಸಲ್ಪಡುವ ಒಂದು ಸಾರ್ವತ್ರಿಕ ಮುಖಭಾವವಾಗಿ ವ್ಯಾಪಕವಾಗಿ ಗುರುತಿಸಲಾಗಿದೆ. ಈ ಸಾರ್ವತ್ರಿಕತ್ವವು ನಕಾರಾತ್ಮಕ ಭಾವನಾತ್ಮಕ ಸ್ಥಿತಿಗಳ ಸಾಮಾಜಿಕ ಸಂವಹನವನ್ನು ಅನುಮತಿಸುವ ಹುಬ್ಬುಗಂಟಿನ ಹಂಚಿಕೊಂಡ ಹೊಂದಿಸಬಲ್ಲ ಗುಣವನ್ನು ಸೂಚಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Darwin, Charles R. (1872). The Expression of the Emotions in Man and Animals. London: John Murray. pp. 148–152.