ಹುಬ್ಬಳ್ಳಿ ಕನ್ನಡ
ಹುಬ್ಬಳ್ಳಿ ಕನ್ನಡ ಅಥವಾ ಉತ್ತರ ಕರ್ನಾಟಕದ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಹೊಂದಿದೆ. ಇದು ಸಹ ಕನ್ನಡವೇ ಆದರೂ ಉಪಯೋಗಿಸುವ ರೀತಿ, ಶಬ್ದಗಳ ಸಂಗ್ರಹ, ಉಚ್ಛಾರಣೆ, ಪದಗಳ ಪ್ರಯೋಗ ಹೀಗೆ ಎಲ್ಲವೂ ವಿಭಿನ್ನ. ಈ ಮಾತು ಎಲ್ಲಾ ಪ್ರದೇಶಗಳ ಕನ್ನಡಕ್ಕೂ ಅನ್ವಯಿಸುತ್ತದೆ. ಪ್ರದೇಶದಿಂದ-ಪ್ರದೇಶಕ್ಕೆ, ಪ್ರಾಂತ್ಯದಿಂದ-ಪ್ರಾಂತ್ಯಕ್ಕೆ ಕನ್ನಡ ಭಾಷೆ ನಾನಾ ರೀತಿ ಬದಲಾವಣೆ ಹೊಂದಿದೆ. ಆದರೆ ಅಂತರಾಳದಲ್ಲಿ ಕನ್ನಡ ಕನ್ನಡವೇ. ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಸಾಮಾನ್ಯ ಪದಗಳನ್ನು ಗಮನಿಸಿ. ಅನ್ಯ ಪ್ರದೇಶಗಳ ಕನ್ನಡಿಗರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಗ್ರಾಂಥಿಕ ರೂಪ | ಗ್ರಾಮ್ಯ ರೂಪ |
---|---|
ಬನ್ನಿ | ಬರ್ರಿ |
ಇದ್ದಾರೆ | ಅದಾರ/ಹಾರ |
ಹೇಗೆ | ಹೆಂಗ |
ಕೂಡು | ಕುಂಡ್ರು |
ಮನೆ | ಮನಿ |
ತಿಂಡಿ | ನಾಷ್ಟಾ/ನ್ಯಾರಿ |
ಅಮ್ಮ | ಅವ್ವ |
ಒಳ್ಳೆಯದು | ಛೊಲೊ/ಛೆಲೊ |