ಹುಣಶ್ಯಾಳ(ಎಸ್.ಡಿ.ಜಿ)
ಹುಣಶ್ಯಾಳ(ಎಸ್.ಡಿ.ಜಿ) ಗ್ರಾಮವು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.
ಹುಣಶ್ಯಾಳ(ಎಸ್.ಡಿ.ಜಿ)
ಹುಣಶ್ಯಾಳ(ಎಸ್.ಡಿ.ಜಿ) | |
---|---|
village | |
Population (೨೦೧೨) | |
• Total | ೧೫೦೦ |
ಮಸೀದಿಗಳು
ಬದಲಾಯಿಸಿಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
ಬದಲಾಯಿಸಿಒಣಬೇಸಾಯವನ್ನು ಹೆಚ್ಚಾಗಿ ಅವಲಂಭಿಸಿರುವ ಗ್ರಾಮದಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಜಲಮೂಲಗಳಿಗಾಗಿ ಪರಿತಪಿಸುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಹಬ್ಬಗಳು
ಬದಲಾಯಿಸಿಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
ಬದಲಾಯಿಸಿಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಇತ್ತೀಚೆಗೆ ಸದರಿ ಶಾಲೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು, ಪ್ರೌಢಶಾಲಾ ಹಂತದವರೆಗೂ ವಿಸ್ತರಿಸಲಾಗಿದೆ. ಗ್ರಾಮದ ಹೊರವಲಯದ ತಿಳಗೂಳಕ್ಕೆ ಹೋಗುವ ಮಾರ್ಗದಲ್ಲಿ ಸರಕಾರಿ ಉರ್ದು ಶಾಲೆಯನ್ನು ಸರಕಾರ 'ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ'ದಡಿಯಲ್ಲಿ ಆರಂಭಿಸಲಾಗಿದೆ.