ಹಿರೇಕಡಲೂರು ಹಾಸನ ಜಿಲ್ಲೆಯ ದುದ್ದ ಹೋಬಳಿಯ ಒಂದು ಗ್ರಾಮ. ಹಿರೇಕಡಲೂರು ಗ್ರಾಮದ ಹಿಂದಿನ ಹೆಸರು ಅರುಂಧತಿಪುರ ಎಂದು. ಹೊಯ್ಸಳರ ಸಹಜ ವಾಸ್ತು ಶಿಲ್ಪದಂತೆ ನಕ್ಷತ್ರಾಕಾರದಲ್ಲಿ ದೇವಾಲಯ ಇದೆ. ದೇವಾಲಯಕ್ಕೆ ಸಂಬಂಧಿಸಿದ ಒಟ್ಟು ೪ ಶಾಸನಗಳು ಲಭ್ಯವಿದೆ. ಶಾಸನಗಳ ಪ್ರಕಾರ ಕ್ರಿ.ಶ.೧೨ನೆಯ ಶತಮಾನದ ಹೊಯ್ಸಳರ ದೊರೆ ೨ನೆಯ ವೀರ ಸಿಂಹನ ಕಾಲದಲ್ಲಿ ಈ ದೇವಾಲಯ ಕಟ್ಟಲಾಗಿದೆ. ಇಲ್ಲಿಯ ಒಳ ಕೆತ್ತನೆಗಳು ಹಾಗು ಅದ್ಬುತ ಚನ್ನಕೇಶವನ ವಿಗ್ರಹ ಭಗ್ನವಾಗಿದೆ ಹಾಗು ದೇವಾಲಯ ಕಾಡಿನಿಂದ ಅವೃತವಾಗಿದೆ. ಚನ್ನಕೇಶವ ದೇವಾಲಯದ ಮೂಲ ಇಲ್ಲಿರುವ ವಿಗ್ರಹವಾದ ಚನ್ನಕೇಶವ ವಿಗ್ರಹ 6 ಅಡಿ ಎತ್ತರ ಹಾಗು 2 ಅಡಿ ಪಾಣಿ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಇದು ಸೂಕ್ಷ್ಮ ಕೆತ್ತನೆಯಿಂದ ಎಲ್ಲಾರ ಕಣ್ಣನ್ನು ಸೆಳೆಯುತ್ತದೆ ಇಲ್ಲಿ ರಂಗನಾಥ ಸ್ವಾಮಿಯ ವಿಗ್ರವು ಇತ್ತೆಂಬ ಉಲ್ಲೇಖವಿದ್ದು ಅದು ಈಗ ಕಾಣಸಿಗುದಿಲ್ಲ.