ಹಿಮಾಲಯನ್ ಹೈಸ್
ಟಿವಿಎಸ್ ಮೋಟಾರ್ ಕಂಪನಿಯು ಹಿಮಾಲಯನ್ ಹೈಸ್ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವು ಮಹಿಳಾ ಸವಾರರಿಗೆ ಸ್ಕೂಟಿ ಜೆಸ್ಟ್ 110 ನಲ್ಲಿ ದೀರ್ಘ ಪ್ರಯಾಣವನ್ನು ಕೈಗೊಳ್ಳುವ ಅವಕಾಶ ಮಾಡಿಕೊಟ್ಟಿತು. 2015 ರಲ್ಲಿ ಭಾರತದ ಅತ್ಯಂತ ಕಿರಿಯ ಮಹಿಳಾ ಸಾಹಸಿ ಸವಾರಿ ಅನಮ್ ಹಾಶಿಮ್ [೧] ಟಿವಿಎಸ್ ಸ್ಕೂಟಿ 110 ಯಲ್ಲಿ ಹಿಮಾಲಯ ಪರ್ವತ ಪಾಸ್ ಖರ್ದುಂಗ್ ಲಾ ಪ್ರವಾಸವನ್ನು ಪೂರ್ಣಗೊಳಿಸಿದಾಗ ಈ ಕಾರ್ಯಕ್ರಮವು ಖ್ಯಾತಿಯನ್ನು ಗಳಿಸಿತು. [೨] ಈ ಮಾರ್ಗವನ್ನು ವಿಶ್ವದ ಅತೀ ಎತ್ತರದ ಮೋಟಾರು ಮಾರ್ಗವೆಂದು ಪರಿಗಣಿಸಲಾಗಿದೆ. ಆನಮ್ ಅವರ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಸಲಾಗಿದೆ.
[೩] ಹಿಮಾಲಯನ್ ಹೈಸ್ ಎರಡನೇ ಆವೃತ್ತಿಯಲ್ಲಿ ೧೦ ಮಹಿಳೆಯರ ಕಿರುಪಟ್ಟಿಯನ್ನು ಮಾಡಿದ್ದರು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದಾದ್ಯಂತದ 2000 ಮಹಿಳೆಯರು ಭಾಗವಹಿಸಿದ್ದರು. ಪ್ರತಿ ಮಹಿಳೆಗೆ ಅವರ ಆಯ್ಕೆಯ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ನೀಡಲಾಯಿತು, ಆದರೆ ಆನಮ್ ಹಾಶಿಮ್ ಹಿಮಾಲಯನ್ ಹೈಸ್ ವಿಶೇಷ ಆವೃತ್ತಿಯಲ್ಲಿ ಸವಾರಿ ಮಾಡುವ ಮೂಲಕ ತಂಡವನ್ನು ಮುನ್ನಡೆಸಿದರು. ಹಿಮಾಲಯನ್ ಹೈಸ್ ಸೀಸನ್ 2 ಆಗಸ್ಟ್ 11,2016 ರಂದು ಪ್ರಾರಂಭವಾಗಿ, ಆಗಸ್ಟ್ 21,2016 ರಂದು ಮುಕ್ತಾಯಗೊಂಡಿತು. [೪] ಆನಮ್ ಹಾಶಿಮ್ ನಾಯಕತ್ವದ ಮೊದಲ ಮಹಿಳಾ ಸವಾರರ ತಂಡವು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಸ್ಥಾನವನ್ನು ಗಳಿಸಿತು.
ಉಲ್ಲೇಖಗಳು
ಬದಲಾಯಿಸಿ- ↑ "This 21-Year-Old Is India's Youngest Female Stunt Rider & She's Scaled The Khardung La Pass Twice". ScoopWhoop. 2016-11-16.
- ↑ "TVS Himalayan Highs Season 2 Enters India Book of Records". Business Standard. 2016-08-30.
- ↑ "TVS Himalayan Highs Season 2 concludes, enters Indian Book of Records". Financial Express. 2016-08-30.
- ↑ "TVS Himalayan Highs Season 2 enters India Book of Records". The Economic Times. 2016-08-30.