ಹಿಪ್ ಹಾಪ್ ತಮಿಳ
ಹಿಪ್ ಹಾಪ್ ತಮಿಳ | |
---|---|
Born | ಅಧಿತ್ಯ ರಾಮಚಂದ್ರನ್ ವೆಂಕಟಪತಿ ೨೦ ಫೆಬ್ರವರಿ ೧೯೯೦ |
Nationality | ಭಾರತೀಯರು |
Other names | ಆಧಿ |
ಹೆಸರು
ಬದಲಾಯಿಸಿಆಧಿ ಅವರ ಪೂರ್ಣ ಹೆಸರು ಅಧಿತ್ಯ ರಾಮಚಂದ್ರನ್ ವೆಂಕಟಪತಿ
ಜನನ
ಬದಲಾಯಿಸಿಇವರು ಜನ್ನಿಸಿದ್ದು ೨೦ ಫೆಬ್ರವರಿ ೧೯೯೦
ಬಾಲ್ಯ
ಬದಲಾಯಿಸಿಆಧಿ ಸಿನಿಮಾ ಅಥವಾ ಸಂಗೀತದ ಬಗ್ಗೆ ಆರಿತ ಕುಟುಂಬದಲ್ಲಿ ಜನಿಸಿದವರಲ್ಲಾ. ತನ್ನ ತಂದೆ ಭಾರತಿಯಾರ್ ವಿಶ್ವವಿದ್ಯಾನಿಲಯದಲ್ಲಿ ಕೆಲಸಮಾಡುತ್ತಿದರು. ಆಧಿ ಅವರಾ ತಂದೆ ಆರಂಭದಲ್ಲಿ ಆಧಿ ಸಂಗೀತವನ್ನು ತನ್ನ ವೃತ್ತಿಯನ್ನಾಗಿ ಆರಿಸಿ ಕೊಳ್ಳುವುದು ಇಷ್ಟವಿರಲಿಲ್ಲ. ಆದರಿಂದ ಅವನ ಕಲ್ಪನೆಯನ್ನು ವಿರೋಧಿಸಿದರು. ಆಧಿ ಸಂಗೀತದಲ್ಲಿ ಯಾವುದೇ ಶಿಕ್ಷಣ ಪಡೆದಿರಲಿಲ್ಲಾ. ಆಧಿ ಅವರು ಸ್ವತಃ ತನ್ನ ಆಸಕ್ತಿಯನ್ನು ಬೆಳೆಸಿಕೊಡರು.ಆಧಿಗೆ ಸಂಗೀತದ ಆಸಕ್ತಿ ಪ್ರರಂಭಿಸಿದು ಹತ್ತನೆಯ ತರಗತಿಯಲ್ಲಿ ಅವರು ಚಿಕ್ಕ ಚಿಕ್ಕ ರಾಪ್ ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡುತ್ತಿದರು. ಇವರ ರಾಪ್ ಕೇಳಿದ ಜನರು ಪ್ರೋತ್ಸಾಹ ನೀಡಿದರು. ಆಧಿಯ ಸ್ನೇಹಿತರು ಪ್ರೋತ್ಸಾಹಿಸಿದರು. ತಮಿಳಿನಲ್ಲಿ ರಾಪಿಂಗ್ ಆರಂಭಿಸಲು ತುಂಬಾ ಜನ ಆಸಕ್ತಿ ನೀಡಿದರು. ಆದರೆ ಆಧಿಯ ತಂದೆಗೆ ತನ್ನ ಮಗ ಉನ್ನತ ಶಿಕ್ಷಣ ಮುಗಿಸಬೇಕು ಎಂಬ ಆಸೆ ಇತ್ತು. ಇದರಿಂದಾಗಿ ಆಧಿ ಸಂಗೀತ ವೃತ್ತಿಯನ್ನು ಆಯ್ಕೆ ಮಾಡಲು ನಿರಾಕರಿಸಿದರು. ಆದರೆ ಆಧಿಯ ಕನಸ್ಸು ಸಂಗೀತ ವೃತ್ತಿಯಲ್ಲಿ ಉತ್ತಮ ಸ್ಥಾನ ಪಡೆಯಬೇಕೆಂಬುದು. ಆದರೆ ಆಧಿಗೆ ಅವರ ಅಪ್ಪ ಬಯವಿತ್ತು. ಯುಟ್ಯುಬ್ನ ವೀಡಿಯೋ ಶೇರಿಂಗ್ ಸೈಟ್ನಲ್ಲಿ ತನ್ನ ನಿಜವಾದ ಹೆಸರಿನಿಂದ ಖಾತೆಯನ್ನು ತೆರೆಯಲಿಲ್ಲ. ಆಧಿ ತನ್ನ ತಂದೆತಾಯಿಂದ ತಪ್ಪಿಸಲು ವೀಡಿಯೋ ಶೇರಿಂಗ್ ಸೈಟ್ನಲ್ಲಿ ಹಿಪ್ ಹಾಪ್ ಎಂದು ತನ್ನ ಖಾತೆಯನ್ನು ತೆರೆದರು. ಆಧಿಯ ತಂದೆ ತನ್ನ ಮಗನ ಕನಸ್ಸು ಹಾಗು ಅವನು ತನ್ನ ಕನಸ್ಸುಗಳನ್ನು ನೆರವೇರಿಸಳು ಮಾಡಿದ ಪ್ರಯತ್ನಗಳನ್ನು ಕಂಡು ಆಧಿಯನ್ನು ಅವರ ತಂದೆ ಪ್ರೋತ್ಸಾಹಿಸಿದರು. ಇದರಿಂದ ಆಧಿಗೆ ನಂಬಿಕೆ ಹೆಚ್ಚಾಗಿ ತನ್ನ ಸಂಗೀತ ವೃತದ ಕನಸು ನೆರವೇರಿಸಲು ಚೆನೈಗೆ ಬಂದು ಸೇರಿದರು.
ಸಂಗೀತಗಾರನಾಗಿ ಬೆಳೆದಿದ್ದು
ಬದಲಾಯಿಸಿಹಿಪ್ ಹಾಪ್ ತಮಿಳ ಎಂದರೆ ನಮಗೆ ಅಧಿತ್ಯ ರಾಮಚಂದ್ರನ್ ಅವರ ಹೆಸರು ಮನಸಿನಲ್ಲಿ ಮೂಡಿ ಬರುತದೆ. ಆದರೆ 'ಆಧಿ' ಮತ್ತು 'ಜೀವ.ಆರ್ 'ಇವರಿಬ್ಬರನ್ನು ಹಿಪ್ ಹಾಪ್ ತಮಿಳ ಎನ್ನುವರು. ಇವರಿಬ್ಬರು "ಕ್ಲಬ್ ಲೆ ಮಬ್ಬುಲೆ" ಎಂಬ ಹಾಡು ರೇಡಿಯೋದಲ್ಲಿ ೨೦೧೧ ರಲ್ಲಿ ಪ್ರದರ್ಶನವಾಯಿತು. ನಂತರ ಯುಟ್ಯುಬ್ನಲ್ಲಿ ಈ ಹಾಡು ಬಿಡುಗಡೆಯಾದ ಕೂಡಲೆ ಒಂದು ವಾರದೊಳಗೆ ಮಿಲಿಯನ್ಗಿಂತ ಹೆಚ್ಛು ವೀಕ್ಷಣೆಯನ್ನು ಪಡೆಯಿತು. ಈ ಹಾಡನ್ನು ಅಂತರಾಷ್ಟ್ರೀಯ ರೆಮಿ ಮಾರ್ಟಿನ್ ತುಂಬಾ ಇಷ್ಟಪಟ್ಟು ಮೆಚ್ಛಿದರು. ನಂತರ ಹಿಪ್ ಹಾಪ್ ತಮಿಳ ಎಂಬ ಬ್ರಾಂಡ್ ಅಂತಿಮನವಾಗಿ ಬಿಡುಗಡೆ ಆಗಿತು.೨೦೦೫ರಲ್ಲಿ ಸಾಮಾಜಿಕ ನೆಟ್ವರ್ಕಿಂಗ್ ವೆಬ್ಸೈಟ್ ಆರ್ಕುಟ್ ಮೂಲಕ ಆಧಿ ಮತ್ತು ಜೀವ ಭೇಟಿ ಮಾಡಿಕೊಂಡರು. ಅವರಿಬ್ಬರಿಗೂ ಸಂಗೀತದ ಬಗ್ಗೆ ಬಹಳ ಆಸಕ್ತಿ ಇತ್ತು. ಇವರಿಬ್ಬರು ಭಾರತದಲ್ಲಿ ಒಂದು ಹೊಸ ತಮಿಳು ಹಿಪ್ ಹಾಪ್ ಸಂಗೀತ ಗುಂಪನ್ನು ರಚಿಸಲು ನಿರ್ಧರಿಸಿದರು. ಮೊದಲ ತಮಿಲು ಹಿಪ್ ಹಾಪ್ ಮಿಕ್ಸ್ ಟೇಪ್ ಆದ "ವಿಶ್ವರೂಬಂ ಆರಂಬಂ" ಆಲ್ಬಮ್ ಆಧಿಅವರು ಬಿಡುಗಡೆ ಮಾಡಿದರು. ಇದು ತಮಿಳು ಸಂಸ್ಕ್ರುತಿಯಲ್ಲಿ ಒಂದು ಹೊಸ ಪ್ರಮುಖ ಪಾತ್ರ ವಯಿಸಿತು. ಹಿಪ್ ಹಾಪ್ ತಮಿಳ "ಎಳುವೊಂ ವಾ" ಎಂಬ ಗೀತೆ ತಮಿಳುನಾಡಿಗಾಗಿ ತಯಾರಿಸಿದರು. ಈ ಹಾಡು ತುಂಬ ಯಶಸ್ಸು ವಯಿಸಿತು. ಆಧಿಯ ಉತ್ತಮವಾದ ಕೆಲಸಕ್ಕೆ ಜನರ ಆದರ್ಶ ಸಿಕ್ಕಿತು. ಆಧಿ ತನ್ನ ಕಾಲೇಜಿನ ಮೊದಲ ವರ್ಷದಲ್ಲಿ 'ಕ್ಲಬ್ ಲೆ ಮಬ್ಬುಲೆ'ಎಂಬ ಹಾಡು ತಯಾರಿಸಿದರುಈ ಗೀತೆಗೆ ಅನೇಕ ಜನರ ಆದರ್ಶ ಪಡೆದರು. ಈ ಹಾಡು ಹೇಗೆ ಬರೆದಿರಿ ಎಂದು ಆಧಿಗೆ ಕೇಳಿದಾಗ "ನಾನು ನನ್ನ ತಾಯಿ ಮತ್ತು ಇತರ ಸಂಪ್ರದಾಯಕ ಹೆಣ್ಣುಗಳನ್ನು ನೋಡಿ ಬೆಳೆದೆ. ಆದರೆ ನಾನು ಹುಡುಗಿಯರನ್ನು ಬಾರ್ ನಲ್ಲಿ ಕಂಡಾಗ ತಕ್ಷನ ಈ ಹಾಡಿನ ಸಾಲುಗಳನ್ನು ರಚಿಸಿದೆ" ಎಂದು ಹೇಳಿದರು. ಚೆನೈನಲ್ಲಿ ವಾಸಮಾಡುತ್ತಿದ ಆಧಿ ಮಾ.ಕಾ.ಪಾ ಆನಂದ್ ರವರ ಪರಿಚಯವಾದರು. ಮಾ.ಕಾ.ಪಾ ಆನಂದ್ ನವರು ರೇಡಿಯೊ ಮಿರ್ಚಿ ಎಂಬ ಕಾರ್ಯಕ್ರಮದಲ್ಲಿ ಆಧಿ ಅವರ ಹಾಡು "ಕ್ಲಬ್ ಲೆ ಮಬ್ಬುಲೆ" ಹಾಡನ್ನು ಹಾಡಲು ಅವಕಾಶ ವಹಿಸಿದರು. ಯುಟ್ಯುಬ್ನಲ್ಲಿ ಬಿಡುಗಡೆಯಾದಾಗ ಒಂದು ವಾರದೊಳಗೆ ಎರಡು ದಶಲಕ್ಷ ವೀಕ್ಷಣೆಗಳನ್ನು ಈ ರೆಕಾರ್ಡಿಂಗ್ ಪಡೆಯಿತು. ಅಂತರಾಷ್ಟ್ರೀಯ ಬ್ರಾಂಡ್ ರೆಮಿ ಮಾರ್ಟಿನ್ ಈ ಹಾಡನ್ನು ಕೇಳಿ ತುಂಬಾ ಜನರು ಆಧಿಗೆ ಮೆಚ್ಚಿದರು. ಈ ಹಾಡಿನಿಂದ "ಹಿಪ್ ಹಾಪ್ ತಮಿಳ" ಎಂಬ ಹೊಸ ಬ್ರಾಂಡ್ ಸೃಷ್ಠಿಸಲಾಯಿತು. ಫೇಸ್ಬುಕನಲ್ಲಿ ಅವರ ಪುಟ ಹಿಪ್ ಹಾಪ್ ತಮಿಳ ಎಂದು ೧೫ ಫೆಬ್ರವರಿ ೨೦೧೦ರಲ್ಲಿ ಆಧಿ ಸ್ಥಾಪನೆ ಮಾಡಿದರು. ಹಿಪ್ ಹಾಪ್ ತಮಿಳಗೆ (ಆಧಿಗೆ) ಎಲ್ಲ ತಮಿಳು ಹಾಡುಗಾರರ ಕೀರ್ತಿಯನ್ನು ಪಡೆದು ಕೊಂಡನು. ಡಿಸೆಂಬರ್ ೨೦೧೦ರಲ್ಲಿ 'ಒನ್ ಚೆನ್ನೈ ಒನ್ ಮ್ಯೂಸಿಕ್'" ಎಂಬ ಸಂಗೀತ ರೇಡಿಯೋದಲ್ಲಿ ಪ್ರಚಾರಮಾಡಿದರು. ನವೆಂಬರ್ ೨೦೧೧ರಲ್ಲಿ ಆಧಿ ಮತ್ತು ಭಾರದ್ವಾಜ್ ಬಾಲಾಜಿ ಇವರಿಬರು ಅಂತರ್ ಶಾಲಾ ಉತ್ಸವ ದಿನಗಳಲ್ಲಿ ಅವರ ಸಂಗೀತಗಳನ್ನು ಪ್ರದರ್ಶನ ಮಾಡಿದರು. ಹಿಪ್ ಹಾಪ್ ತಮಿಳ ಅವರ ಪ್ರಥಮ ಅಲ್ಬಮ್ ಚೆನೈನಲ್ಲಿರುವ ಸತ್ಯಂ ಸಿನಿಮಾಸ್ನಲ್ಲಿ ೧೭ ಆಗಸ್ಟ್ ೨೦೧೨ ರಂದು ಬಿಡುಗಡೆ ಮಾಡಿದರು. ಇದು ಭಾರತದ ಮೊದಲ ತಮಿಳು ಹಿಪ್ ಹಾಪ್ ಆಲ್ಬಂ ಎಂದು ಹೆಸರುಗೊಂಡಿತು .ಈ ಆಲ್ಬಂ ವ್ಯಾಪಾರದ ಯಸಶಸ್ಸು ಪಡೆಯಿತು. ಅದೆ ರೀತಿ "ಕ್ಲಬ್ ಲೆ ಮಬ್ಬುಲೆ" ಆಲ್ಬಂ ಕೂಡ ವ್ಯಾಪಾರದ ಯಸಶಸ್ಸು ಪಡೆಯಿತು. ಸೆಪ್ಟೆಂಬರ್ ೨೦೧೨ರಲ್ಲಿ ಹಿಪ್ ಹಾಪ್ ತಮಿಳ ದಾಮೋದರನ್ ಕಾಲೇಜ್, ಲಯೋಲ ಕಾಲೇಜ್ನಲ್ಲಿ ಹಾಡನ್ನು ಪ್ರದರ್ಶನ ಮಾಡಿದರು. ವಿದ್ಯಾರ್ಥಿಗಳು ಕೂಡ ಉತ್ಸಾಹ ಪೂರ್ವಕ ಸ್ವಾಗತವನ್ನು ನೀಡಿದರು. ಭಾರತದಲ್ಲಿ ಮೊದಲ ತಮಿಳ ಹಿಪ್ ಹಾಪ್ ಆಲ್ಬಂ ಬಿಡುಗಡೆ ಮಾಡಿದ ಹೆಸರು ಹಿಪ್ ಹಾಪ್ ತಮಿಳಗೆ ಸೇರುವುದು. ೧೪ ಫೆಬ್ರವರಿಯಲ್ಲಿ ಆಧಿ ಅವರಿಗೆ "ಇಂಟರ್ನೆಟ್ ಸೆನ್ಸೇಶನ್ ಆಫ್ ಧಿ ಇಯರ್ " ಪ್ರಸಸ್ತಿ ಪಡೆದರು. ಅದೇ ತಿಂಗಳಲ್ಲಿ ಅವರು ವಿವಿಧ ಕಾಲೇಜುಗಳಲ್ಲಿ ಹಾಡನ್ನು ಪ್ರದರ್ಶನ ಮಾಡಿದರು. ಇದರಿಂದಾಗಿ ಆಧಿ ಅವರಿಗೆ "ಇಂಡಿಪೆನ್ಡೆನ್ಟ್ ಆರ್ಟಿಸ್ಟ್ ಆಫ್ ಧಿ ಇಯರ್" ಎಂಬ ಪ್ರಸಸ್ತಿ ಪಡೆದರು. ನವೆಂಬರ್ ೨೦೧೩ರಲ್ಲಿ ಆಧಿ ಅಂತರ್ರಾಷ್ಟ್ರೀಯ ಅಮೆರಿಕ ಕಲಾವಿದರಾದ ರೆಮಿ ಮಾರ್ಟಿನ್ ಜೊತೆ ಸೇರಿ ಒಂದು ಆಲ್ಬಂ ಮಾಡಿದರು. ಈ ಆಲ್ಬಂ ಹೆಸರು " ಇಂಟರ್ನ್ಯಾಷನಲ್ ತಮಿಳ". ಈ ಆಲ್ಬಂ ಇಂಗ್ಲೀಷ್, ಹಿಂದಿ, ತಮಿಳು ಮುಂತಾದ ಭಾಷೇಗಳಲ್ಲಿ ಬಿಡುಗಡೆ ಮಾಡಲಾಯಿತು. ೧೫ ಆಗಸ್ಟ್ ೨೦೧೪ ರಂದು " ವಾಡಿ ಪುಳೆ ವಾಡಿ "[೧] ಎಂಬ ಆಲ್ಬಂ ಅಧಿ ಬಿಡುಗಡೆ ಮಾಡಿದರು. ಆಧಿ ಅದೆ ತಿಂಗಳಲ್ಲಿ ಮದ್ರಾಸ್ ಮ್ಯೂಜ್ಸಿಕ್ ಅಕಾಡೆಮಿಯಲ್ಲಿ ಎರಡನೆ ಬಾರಿಗೆ ಕಾರ್ಯಕ್ರಮ ನಡೆಸಿದರು. ಜುಲೈ ರಂದು ಆಧಿ ಇಸೈ ಸಂಗದಲ್ಲಿ ನೆಂಜೆ ಎಳಿ[೨] ಎಂಬ ಹಾಡು ದಕ್ಷಿಣ ಭಾರತೀಯ ಸಂತ್ರ ಸ್ತರ ನಿಧಿಗಾಗೆ ಈ ಗೀತೆಯನ್ನು ಹಾಡಿದರು. ನಂತರ ಹಿಪ್ ಹಾಪ್ ತಮಿಳ ಆಧಿ ಅವರು ಸಿನಿಮಾ ಸಂಗೀತಗಳನ್ನು ಹಾಡಲು ಆರಂಭಿಸಿದರು. ಅವರು ಹಾಡಿದ ಮೊದಲ ಚಲನಚಿತ್ರ ಗೀತೆ " ತಪ್ಪೆಲಾಮ್ ತಪ್ಪೆ ಇಲ್ಲೈ ". ಇದು " ನಾನ್' ಎಂಬ ತಮಿಳು ಚಲನಚಿತಕ್ಕೆ ಸೇರಿದ್ದು. ನಂತರ ಅನಿರುದ್ದ್ ರವಿಚಂದ್ರನ್ ಸಂಗೀತ ನಿರ್ದೆಷಕಯೊಡನೆ ಜೊತೆಗುಡಿ ಎದಿರ್ ನೀಚಲ್[೩] ಎಂಬ ಚಲನಚಿತ್ರದ ಗೀತೆ "ಯೋ ಯೋ ಹನಿ ಸಿಂಗ್" ಹಾಡಿದರು. ನಂತರ ಅನಿರುದ್ದ್ ಜೊತೆ ಸೇರಿ "ವಣಕಂ ಚೆನೈ" ಚಲನ ಚಿತ್ರಕ್ಕೆ "ಚೆನೈ ಸಿಟ್ಟಿ ಗ್ಯಾಂಗ್ ಸ್ಟ" ಗೀತೆ ಜೊತೆಗುಡಿ ಹಾಡಿದರು. ಮೂರನೆ ಸಲ ಅನಿರುದ್ದ್ ಜೊತೆ ಸೇರಿ "ಕತ್ತಿ" ಎಂಬ ಚಲನ ಚಿತ್ರಕ್ಕೆ "ಪಕಂ ವಂದಿ" ಎಂಬ ಗೀತೆ ಹಾಡಿದರು. ೨೦೧೫ರಲ್ಲಿ ಹಿಪ್ ಹಾಪ್ ತಮಿಳ ಆಧಿ ಸಿಮಮಾ ಸಂಗೀತಗಳನ್ನು ತಯಾರಿಸಲು ಆರಂಭಿಸಿದರು. ಆಂಬಳೆ[೪] ಎಂಬ ಚಲನಚೆತ್ರಕ್ಕೆ ಸಂಗೀತ ನಿರ್ದೆಷಕನಾಗಿ ಕೆಲಸಮಾಡಿದರು. ಇದು ಅವರ ಮೊದಲ ಚಲನಚಿತ್ರವಾಗಿದೆ. ಅದೆ ವರ್ಷದಲ್ಲಿ "ಥನಿ ಒರುವನ್ " ಮತ್ತು "ಅರನ್ಮನೈ ೨" ಚಲನಚಿತ್ರಗಳಿಗೆ ಸಂಗೀತ ನಿರ್ದೆಷಕನಾಗಿ ಕೆಲಸಮಾಡಿದರು. ಹೀಗ ೨೦೧೬ರಲ್ಲಿ " ಇಂಡ್ರಿ ನೇಟ್ರಿ ನಾಲೈ" ಮತ್ತು "ತಮಿಳನ್ ಎಂಡ್ರಿ ಸೊಲ್" ಎಂಬ ತಮಿಳ ಚಲನಚಿತ್ರಗಳಿಗೆ ಸಂಗೀತ ನಿರ್ದೆಷಕನಾಗಿ ಕೆಲಸಮಾಡುತಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ https://itunes.apple.com/in/album/vaadi-pulla-vaadi-single/id908568828
- ↑ http://www.thehindu.com/todays-paper/tp-national/tp-tamilnadu/nenje-ezhu-concert-by-ar-rahman-today/article8142462.ece
- ↑ https://web.archive.org/web/20131029185004/http://www.musicperk.com/ethir-neechal/
- ↑ http://www.sify.com/movies/aambala-audio-launched-pongal-release-news-tamil-om2mB8aicieej.html