ಹಿಂದೂ (ಪುಸ್ತಕ)
ಹಿಂದೂ ಪುಸ್ತಕ ಶರಣಕುಮಾರ ಲಿಂಬಾಳೆ ಅವರು ಮರಾಠಿಯಲ್ಲಿ ಬರೆದ ಪುಸ್ತಕ, ಪ್ರಮೀಳಾ ಮಾಧವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಲೇಖಕರು | ಶರಣಕುಮಾರ ಲಿಂಬಾಳೆ |
---|---|
ಅನುವಾದಕ | ಪ್ರಮೀಳಾ ಮಾಧವ್ |
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಕಾದಂಬರಿ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೪ |
ಪುಟಗಳು | ೧೬೮ |
ಐಎಸ್‍ಬಿಎನ್ | 978-81-8467-417-೦ false |
ಒಂದು ಸಮಕಾಲೀನ ರಾಜಕಾರಣದ ಗೋಸುಂಬೆತನವನ್ನು ವರ್ಣಿಸುವ ಕಾದಂಬರಿ. ದಲಿತರನ್ನು ಮನುಷ್ಯರೇ ಅಲ್ಲವೆನ್ನುವಷ್ಟರ ಮಟ್ಟಿಗೆ ಶೋಷಿಸಿ, ಜೊತೆಗೆ ದ್ವೇಷವನ್ನೂ ಸಾಧಿಸಿ ಮೇಲ್ವರ್ಗದವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅಮಾನವೀಯ ನಡವಳಿಕೆ ಪರಿಚಯಿಸಲ್ಪಟ್ಟಿದೆ. ದ್ವೇಷ-ತಿರಸ್ಕಾರ-ವ್ಯಂಗ್ಯ-ಪ್ರತೀಕಾರ ಕಾದಂಬರಿಯುದ್ದಕ್ಕೂ ವಿಜೃಂಭಿಸಿ ಸವರ್ಣೀಯರ ಹೊಲಸು ಮನಸ್ಸು ಸಂಪೂರ್ಣ ಅನಾವರಣವಾಗಿದೆ. ಮತಗಳ ಧಾರ್ಮಿಕ ಆಚರಣೆಗಳ ಮಧ್ಯೆಯೇ ಬಿರುಕು ಬಿಟ್ಟ ವ್ಯವಸ್ಥೆಯು ಜಾತಿ-ಜಾತಿಗಳ ಶ್ರೇಣೀಕರಣದ ವ್ಯವಸ್ಥೆಯೊಂದಿಗೆ ತಗುಲಿಕೊಂಡಾಗ ಆಗುವ ಅನಾಹುತಗಳು ಒಂದಲ್ಲ, ನೂರಾರು. ನಡುವೆ ಹೊತ್ತಿ ಉರಿಯುವ ಮನೆಯ 'ಗಳ' ಹಿರಿಯುವ ಮಂದಿಗೇನು ಸಮಾಜೋದ್ಧಾರದ ಕನಸೇನೂ ಇರುವುದಿಲ್ಲ ! ಎಂತೆಂತಹ ಚತುರ ಪಾತ್ರಗಳು ಇಲ್ಲಿ ಅನಾವರಣಗೊಂಡಿವೆ ಎಂದು ಓದಿ ನೋಡಿ.
ಬಾಹ್ಯ ಸಂಪರ್ಕ
ಬದಲಾಯಿಸಿhttp://en.wikipedia.org/wiki/Sharankumar_Limbale ಶರಣಕುಮಾರ ಲಿಂಬಾಳೆ