ಹಿಂದೂ ಕಾಲೋನಿ ದಾದರ್, ಮುಂಬಯಿ

ದಾದರ್ ನಲ್ಲಿರುವ 'ಹಿಂದೂ ಕಾಲೋನಿ', ಮುಂಬಯಿನ ಅತಿ ಹಳೆಯ ವಸಾಹತುಗಳಲ್ಲೊಂದು.[] ಪೂರ್ವದಲ್ಲಿ ಸೆಂಟ್ರೆಲ್ ರೈಲ್ವೆನಿಲ್ದಾಣದ ದಾದರ್, ಮತ್ತು ಮಾಟುಂಗಾ ರೈಲ್ವೆ ಸ್ಟೇಷನ್ ಗಳಿವೆ. ಪೂರ್ವದಲ್ಲಿ ಇಲ್ಲಿ ಮಹಾರಾಷ್ತ್ರದ ಬ್ರಾಹ್ಮಣರು ಹೆಚ್ಚಾಗಿ ವಾಸಿಸುತ್ತಿದ್ದರು. ೧೯೩೪ ರಲ್ಲಿ ನಿರ್ಮಿಸಿದ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ರ ಮನೆ, 'ರಾಜಗೃಹ' ಇದೇ ಕಾಲೋನಿಯಲ್ಲಿದೆ. 'ಮುಂಬಯಿಯ ಎಟಿಸ್ ಸ್ಕಾಡ್ ನ ಮುಖ್ಯಸ್ಥ', 'ಹೇಮಂತ್ ಕರ್ಕರೆ', ಈ ಕಾಲೋನಿಯಲ್ಲಿ ವಾಸ್ತ್ಯವ್ಯಹೂಡಿದ್ದರು. ೨೦೦೮ ರ ಆತಂಕಿಗಳ ಮುಂಬಯಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟರು. ಕರ್ಕರೆಯವರ ಪತ್ನಿ ಹಿಂದೂ ಕಾಲೋನಿಯಲ್ಲೇ ವಾಸವಾಗಿರುತ್ತಾರೆ.

ಬಾಲಚಂದ್ರರೋಡ್ ಉದ್ದಕ್ಕೂ

ಬದಲಾಯಿಸಿ

ಹಿಂದೂ ಕಾಲೋನಿ, ಮಾಟುಂಗದ 'ಆಸ್ತಿಕ ಸಮಾಜ' ದೇವಸ್ಥಾನದಿಂದ, ದಾದರ್ ನ 'ನಾಯರ್ ಸಮಾಜ' ಕಟ್ಟಡದ ವರೆಗೆ ವಿಸ್ತರಿಸಿದೆ. ದಾದರ್ (ಪೂ) ರೈಲ್ವೆ ನಿಲ್ದಾಣದಿಂದ ಮಾಟುಂಗಾ ರೈಲ್ವೆ ನಿಲ್ದಾಣದ ವರೆಗೆ ಹೋಗುವ ರಸ್ತೆ, ಹಿಂದೂ ಕಾಲೋನಿಯ ಪ್ರಮುಖ ರಸ್ತೆಗಳಲ್ಲೊಂದು.

ಪ್ರಮುಖ ಕಟ್ಟಡಗಳು, ಸಂಸ್ಥೆಗಳು

ಬದಲಾಯಿಸಿ
  1. ರಾಜಾ ಶಿವಾಜಿ ವಿದ್ಯಾಲಯ,
  2. ರಾಜಗೃಹ,
  3. ರುಯಾಕಾಲೇಜ್,
  4. ಪೊದ್ದಾರ್ ಕಾಲೇಜ್,
  5. ನಾಯರ್ ಸಮಾಜ್,
  6. ಸ್ವಾಮಿನಾರಾಯಣ್ ದೇವಸ್ಥಾನ,
  7. ದಾದರ್ ಜಮಖಾನ,
  8. ಮಾಟುಂಗಾ ಜಮಖಾನ,
  9. ನಪ್ಪೂ ಹಾಲ್,
  10. ಸ್ವಾಮಿ ದಯಾನಂದ ವಿದ್ಯಾಲಯ,
  11. ಆಂಧ್ರ ಸಮಾಜ್,
  12. ನಪ್ಪೂ ಉದ್ಯಾನ್, ಮುಂತಾದವುಗಳು
  13. ಪಾರ್ಸಿ ಡೈರಿ,
  14. ಪೋಲಿಸ್ ಕಾಲೋನಿ,

ಉಲ್ಲೇಖಗಳು

ಬದಲಾಯಿಸಿ
  1. 'ಹಿಂದು ಕಾಲೋನಿ, ಫ್ಲಿಕರ್ ಚಿತ್ರಗಳು'