ಇತರ ಸರೀಸೃಪಗಳಂತೆ, ಹಾವುಗಳು ಪೊರೆಯಿಂದ ಆವೃತವಾದ ಚರ್ಮವನ್ನು ಹೊಂದಿರುತ್ತವೆ.[] ವಿವಿಧ ಆಕಾರಗಳು ಮತ್ತು ಗಾತ್ರಗಳ ಪೊರೆಗಳು ಅಥವಾ ಸ್ಕೂಟಗಳು ಹಾವುಗಳನ್ನು ಇಡಿಯಾಗಿ ಆವರಿಸಿರುತ್ತವೆ. ಒಟ್ಟಾರೆಯಾಗಿ ಇದನ್ನು ಸ್ನೇಕ್‍ಸ್ಕಿನ್ ಎಂದು ಕರೆಯಲಾಗುತ್ತದೆ. ಪೊರೆಯು ಹಾವಿನ ದೇಹವನ್ನು ರಕ್ಷಿಸುತ್ತದೆ, ಚಲನೆಯಲ್ಲಿ ಅದಕ್ಕೆ ನೆರವಾಗುತ್ತದೆ, ತೇವವು ಒಳಗಡೆ ಉಳಿಯಲು ಅವಕಾಶ ನೀಡುತ್ತದೆ, ಮರೆಮಾಚುವಿಕೆಗೆ ನೆರವಾಗಲು ಒರಟುತನದಂತಹ ಮೇಲ್ಮೈ ಲಕ್ಷಣಗಳನ್ನು ಬದಲಾಯಿಸುತ್ತದೆ, ಮತ್ತು ಕೆಲವು ಸಂದರ್ಭಗಳಲ್ಲಿ ಬೇಟೆಯನ್ನು ಹಿಡಿಯಲು ಕೂಡ ನೆರವಾಗುತ್ತದೆ. (ಮರೆಮಾಚುವಿಕೆ ಹಾಗೂ ಪರಭಕ್ಷಕ ವಿರೋಧಿ ಪ್ರದರ್ಶನದಲ್ಲಿ ನೆರವಾಗುವ) ಸರಳ ಅಥವಾ ಸಂಕೀರ್ಣ ಬಣ್ಣಗಾರಿಕೆ ವಿನ್ಯಾಸಗಳು ಕೆಳಗಿರುವ ಚರ್ಮದ ಲಕ್ಷಣವಾಗಿವೆ, ಆದರೆ ಪೊರೆಯುಳ್ಳ ಚರ್ಮದ ಮಡಿಕೆಯಂತಹ ಸ್ವರೂಪವು ಪೊರೆಗಳ ನಡುವೆ ಹೊಳಪಿನ ಚರ್ಮವು ಅಡಗಿರುವುದಕ್ಕೆ ಮತ್ತು ನಂತರ ಪರಭಕ್ಷಕರನ್ನು ಬೆಚ್ಚಿಬೀಳಿಸಲು ಬಹಿರಂಗಗೊಳ್ಳುವುದಕ್ಕೆ ಅವಕಾಶ ನೀಡುತ್ತದೆ.

The slender light-green pointed head of a vine snake is shown facing the right side. It has ridged snout with a small tubercle at the end and golden eyes with a horizontal black slot-shaped pupil. Scales on top of the head are clearly visible due to the sunlight coming from left above.
ಬಳ್ಳಿ ಹಾವಿನ ತಲೆಯ ಮೇಲೆ ಸಂಕೀರ್ಣವಾದ ಆಕಾರದ ಪೊರೆ

ಉಲ್ಲೇಖಗಳು

ಬದಲಾಯಿಸಿ
  1. Boulenger, George A. 1890 The Fauna of British India. p. 1


ಉಲ್ಲೇಖ ದೋಷ: <ref> tag with name "Greene_pg22" defined in <references> is not used in prior text.