ಹಾಲು ಮತ್ತು ಅಲ್ಸರ್

ಕೆಲ ದಶಕಗಳ ಹಿಂದೆ ವೈದ್ಯರುಗಳು ಆಯ್ಸಿಡಿಟಿ ಮತ್ತು ಅಲ್ಸರ್ ಇರುವ ರೋಗಿಗಳಿಗೆ ಪದೇ ಪದೇ ಹಾಲನ್ನು ಸೇವಿಸಲು ಹೇಳುತ್ತಿದ್ದರು. ಈಗಲೂ ಸಹ ಅನೇಕ ರೋಗಿಗಳು ಹಗಲೂ ರಾತ್ರಿ ಆಗಾಗ್ಗೆ ಸ್ವಲ್ಪ ಸ್ವಲ್ಪ ತಣ್ಣನೆ ಹಾಲು ಕುಡಿವ ಅಭ್ಯಾಸವನ್ನು ಮುಂದುಕೊಂಡು ಬಂದಿದ್ದಾರೆ.ಆದರೆ ಈಗ ವೈದ್ಯರುಗಳು ಹೆಚ್ಚು ಹಾಲು ಸೇವನೆಯಿಂದ ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಹೆಚ್ಚುತ್ತದೆ.ದೇಹದ ತೂಕವೂ ಏರುತ್ತದೆ.ಜೊತೆಗೆ ಹಾಲಿನಲ್ಲಿನ ಪ್ರೋಟೀನ್ ಪ್ರಚೋದನೆಯಿಂದಾಗಿ ಹೊಟ್ಟೆಯಲ್ಲಿ ಹೆಚ್ಚು ಆಮ್ಲ ಉತ್ಪತ್ತಿಯಾಗುತ್ತದೆ ಮತ್ತು ಹೊಟ್ಟೆಯ ಹುಣ್ಣು ಮಾಗುವುದು ನಿಧಾನವಾಗುತ್ತದೆ.ಹೀಗಾಗಿ ಆಯ್ಸಿಡಿಟಿ ಮತ್ತು ಅಲ್ಸರ್ ರೋಗಿಗಳು ಹೆಚ್ಚು ಹಾಲನ್ನು ಕುಡಿಯುವುದರಿಂದ ಲಭಿಸುವ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ಎಚ್ಛರಿಕೆ ಮಾತನ್ನು ತಿಳಿಸುತ್ತಾರೆ.