ಹಾನಿ
ಹಾನಿ ಎಂದರೆ ಹಲವುವೇಳೆ ಒಂದು ಭೌತಿಕ ವಸ್ತುವಿನಲ್ಲಾಗುವ ಯಾವುದೇ ಬದಲಾವಣೆ, ಮತ್ತು ಇದು ಅದರ ಮೊದಲಿನ ಸ್ಥಿತಿಗಿಂತ ಕೀಳಾಗುವಂತೆ ಮಾಡುತ್ತದೆ. ಸ್ಥೂಲವಾಗಿ ಇದನ್ನು "ಪ್ರಸಕ್ತ ಅಥವಾ ಭವಿಷ್ಯದ ಕಾರ್ಯನಿರ್ವಹಣೆಯನ್ನು ಬಾಧಿಸುವ ವ್ಯವಸ್ಥೆಯೊಳಗೆ ಪರಿಚಯಿಸಲ್ಪಟ್ಟ ಬದಲಾವಣೆಗಳು" ಎಂದು ವ್ಯಾಖ್ಯಾನಿಸಬಹುದು.[೧] ಹಾನಿಯು ಖಡಾಖಂಡಿತವಾಗಿ ವ್ಯವಸ್ಥೆಯ ಕಾರ್ಯಕ್ಷಮತೆಯ ಸಂಪೂರ್ಣ ನಷ್ಟವನ್ನು ಸೂಚಿಸುವುದಿಲ್ಲ, ಬದಲಾಗಿ ಆ ವ್ಯವಸ್ಥೆಯು ಅದರ ಅತ್ಯಂತ ಅನುಕೂಲಕರ ರೀತಿಯಲ್ಲಿ ಕಾರ್ಯನಿರ್ವಹಿಸುತಿಲ್ಲ ಎಂಬುದನ್ನು ಸೂಚಿಸುತ್ತದೆ. ಭೌತಿಕ ವಸ್ತುಗಳ ಹಾನಿಯೆಂದರೆ "ಅವು ಮುರಿಯುವುದಕ್ಕೆ ಕಾರಣವಾಗುವ ಕ್ರಮವಾಗಿ ಹೆಚ್ಚಾಗುವ ಭೌತಿಕ ಪ್ರಕ್ರಿಯೆ",[೨] ಮತ್ತು ಗೋಚರವಾಗದಿದ್ದರೂ, ರಚನೆಯನ್ನು ದುರ್ಬಲವಾಗಿಸುವ ಯಾಂತ್ರಿಕ ಒತ್ತಡವನ್ನು ಒಳಗೊಳ್ಳುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Farrar, C.R., Sohn, H., Park, G., "Converting Large Sensor Array Data into Structural Health Information", in Andrew Smyth, Raimondo Betti, The 4th International Workshop on Structural Control (2005), p. 67.
- ↑ Jean Lemaitre, A Course on Damage Mechanics (2013).