ಹಾತು ಶಿಖರ
ಹಾತು ಶಿಖರವು ಭಾರತದ ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂತ 3400 ಮೀ ಎತ್ತರದಲ್ಲಿದೆ. ಶಿಖರವು ಕೋನಿಫರ್, ಓಕ್‍ಗಳು ಮತ್ತು ಮೇಪಲ್‌ಗಳ ದಟ್ಟವಾದ ಕಾಡಿನಿಂದ ಆವೃತವಾಗಿದೆ.
ಆಕರ್ಷಣೆಗಳು
ಬದಲಾಯಿಸಿಶಿಖರದ ಮೇಲ್ಭಾಗದಲ್ಲಿ ಹಾತು ದೇವಸ್ಥಾನ ಎಂಬ ಸಣ್ಣ ಮರದ ದೇವಾಲಯವಿದೆ. ಸ್ಥಳೀಯ ನಂಬಿಕೆಯ ಪ್ರಕಾರ ಪ್ರಸಿದ್ಧ ಹಾತು ಮಾತಾ ದೇವಾಲಯವು ತಾಯಿ ಕಾಳಿಯ ದೇವಾಲಯವಾಗಿದೆ. ಇಲ್ಲಿ ಪೂಜೆಸಲ್ಲಿಸಲು ಜನರು ಜ್ಯೇಷ್ಠದ ಮೊದಲ ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೇವಾಲಯದ ಹತ್ತಿರದಲ್ಲಿ ಪ್ರಾಚೀನ ಒಲೆಯಂತಹ ಬಂಡೆಗಳ ರಚನೆ ಇದೆ. ಇದನ್ನು ಪಾಂಡವ ಸೋದರರು ಅಜ್ಞಾತ ವಾಸದ ಅವಧಿಯಲ್ಲಿ ತಮ್ಮ ಆಹಾರವನ್ನು ಬೇಯಿಸಿಕೊಳ್ಳಲು ಬಳಸಿದರು ಎಂದು ಸ್ಥಳೀಯರು ನಂಬುತ್ತಾರೆ.[೧]
ಟೂರಿಸ್ಟ್ ಹೌಸ್
ಬದಲಾಯಿಸಿಒಂದು ಸಣ್ಣ ರಚನೆಯನ್ನು ರಚಿಸಲಾಗಿದೆ. ಇದನ್ನು ನಾಗರಿಕ ಅಧಿಕಾರಿಗಳು ವಿರಳವಾಗಿ ಬಳಸುತ್ತಾರೆ.
ಚಿತ್ರವತ್ತಾದ ನೋಟಗಳು
ಬದಲಾಯಿಸಿಹಾತು ಶಿಖರಕ್ಕೆ ಕರೆದೊಯ್ಯುವ ಕಡಿದಾದ ರಸ್ತೆಯಲ್ಲಿ ಶಿವಾಲಿಕ್ ಬೆಟ್ಟಗಳ ಚಿತ್ರವತ್ತಾದ ಸೌಂದರ್ಯವನ್ನು ಆನಂದಿಸಬಹುದು.
ಸಸ್ಯಸಂಪತ್ತು
ಬದಲಾಯಿಸಿಶಿಖರ ಮತ್ತು ಸುತ್ತಮುತ್ತಲಿನ ಪ್ರದೇಶವು ಕೋನಿಫರ್, ಓಕ್, ಮೇಪಲ್, ಪಾಪ್ಯುಲಸ್, ಎಸ್ಕ್ಯೂಲಸ್, ಕೋರಿಲಸ್, ಹಾಲಿ ಜಾತಿಗಳನ್ನು ಒಳಗೊಂಡಿರುವ ದೊಡ್ಡ ಸಮಶೀತೋಷ್ಣ ಅರಣ್ಯದ ಪ್ರಾಬಲ್ಯ ಹೊಂದಿದೆ.