ಪಾಡಾವಳಿ, ಹಾಡೆ ಅಥವಾ ಹಾಡೆಬಳ್ಳಿ ಎಂದು ಕರೆಯಲ್ಪಡುವ ಇದೊಂದು ಬಳ್ಳಿ. ಇದಕ್ಕೆ ತುಳುವಿನಲ್ಲಿ ಪಾದ್ರಂಡೆ ಪಾದೆಲಪ್ಪು ಎಂದು ಕರೆಯುತ್ತಾರೆ[೧].

ಹಾಡೆಬಳ್ಳಿ
ಹಾಡೆಬಳ್ಳಿಯ ಕಾಯಿ

ಪರಿಚಯ ಬದಲಾಯಿಸಿ

  1. ಹಾಡೆ ಬಳ್ಳಿ ಮರವೆಗೆ ಸಂದುತ್ತಿರುವ ಇಂಥ ಒಂದು ಬಳ್ಳಿ. ಕಳೆ ಎಂಬಂತೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಾಡೆ ಬಳ್ಳಿ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ.
  2. ಇದರ ವೈಜ್ಞಾನಿಕ ಹೆಸರು ’ಸೈಕ್ಲಿಯಾ ಪೆಲ್ಟೇಟಾ’[೨].
    1. ಸಂಸ್ಕೃತದಲ್ಲಿ ಪಾಠಾ,
    2. ಹಿಂದಿಯಲ್ಲಿ ಪಾಡ,
    3. ಮಲಯಾಳಂನಲ್ಲಿ ಕಟ್ಟುವಲ್ಲಿ,
    4. ಕನ್ನಡದಲ್ಲಿ ಹಾಡೆ ಬಳ್ಳಿ
    5. ತುಳುವಿನಲ್ಲಿ ಪಾದಲ ಸಪ್ಪು, ಪಾದಲಪ್ಪು

ಉಪಯೋಗ ಬದಲಾಯಿಸಿ

  1. ಹಾಡೆ ಬೇರು ಮುಖ್ಯ ಉಪಯೋಗವನ್ನು ಹೊಂದಿದೆ. ಈ ಬೇರನ್ನು ಅರೆದು ಲೇಪಿಸುವುದರಿಂದ ಹುಣ್ಣು ಗುಣವಾಗುತ್ತದೆ.

ಬೇರಿನಿಂದ ತಯಾರಿಸಿದ ಎಣ್ಣೆ ಕಾಲು ಬೆರಳುಗಳೆಡೆ ಹುಳ ತಿನ್ನುವುದನ್ನು ಇಲ್ಲವಾಗಿಸುತ್ತದೆ. ಅಜೀರ್ಣ, ಅಗ್ನಿ ಮಾಂದ್ಯಗಳಲ್ಲಿ ಇದನ್ನು ಉಪಯೋಗಿಸುತ್ತಾರೆ.

  1. ಹಾಡೆ ಎಲೆಯನ್ನು ನೀರಿನಲ್ಲಿ ನೆನೆಸಿ ಹಿಂಡಿ ತಯಾರಿಸಿದ ಅಂಟಾದ ಲೋಳೆ ಕಣ್ಣಿಗೆ ತಂಪು.
  2. ಬೇರಿನಿಂದ ತೆಗೆದು ರಸವನ್ನು ತಲೆ ನೋವು ನಿವಾರಣೆಗೆ ಬಳಸುವರು.

ಬೆಳವಣಿಗೆ ಬದಲಾಯಿಸಿ

  1. ಉದ್ದವಾಗಿ ಬೆಳೆಯುವ ಬಳ್ಳಿ ಇದು. ಎಲೆಗಳು ಹೃದಯಾಕಾರಗಳಲ್ಲಿದ್ದು, ಕಾಂಡದಲ್ಲಿ ಒಂದರ ಅನಂತರ ಒಂದರಂತೆ ವಿರುದ್ಧ ದಿಕ್ಕಿನಲ್ಲಿ ಇರುವುವು. *ಇದರ ಹೂಗಳು ಏಕಲಿಂಗಿಯಾಗಿದ್ದು, ನಸು ಹಳದಿ ಬಣ್ಣವನ್ನು ಹೊಂದಿರುತ್ತವೆ.
  • ಹಣ್ಣುಗಳು ದುಂಡಗೆ ಹಾಗೂ ಬೆಳ್ಳನಾಗಿದ್ದು ದ್ರಾಕ್ಷಿ ಗೊಂಚಲಿನಂತೆ ಗೋಚರಿಸುತ್ತದೆ.

ಜಾಗೃತಿ ಬದಲಾಯಿಸಿ

  1. ನಮ್ಮ ಪರಿಸರದಲ್ಲಿ ಕಾಣುವ ಪ್ರತಿ ಸಸ್ಯವೂ ಒಂದಲ್ಲೊಂದು ರೀತಿಯಲ್ಲಿ ಉಪಕಾರಿಯಾದ ವನಸ್ಪತಿಯೋ ಮೂಲಿಕೆಯೋ ಆಗಿರುತ್ತದೆ. ಇತ್ತೀಚೆಗೆ ಇಂತಹ ಕೆಲವು ಔಷಧೀಯ ಬಳ್ಳಿಗಳು, ಸಸ್ಯಗಳು ವಿನಾಶದಂಚಿನಲ್ಲಿವೆ. ಮುಂದಿನ ಜನಾಂಗಕ್ಕೆ ಅವುಗಳ ಪರಿಚಯವೇ ಇಲ್ಲದಂತಾಗುವ ಸಾಧ್ಯತೆ ಇದೆ.
  2. ಕಾಲಚಕ್ರ ಉರಳುತ್ತಿದಂತೆ ಇಂಥ ಕೆಲವು ಅಪರೂಪದ ಔಷಧೀಯ ಸಸ್ಯಗಳ ಪರಿಚಯ, ಉಪಯೋಗದ ತಿಳಿವು ದೂರವಾಗುತ್ತಿದೆ. ಇಂತಹ ಯಾವುದೇ ಅಡ್ಡ ಪರಿಣಾಮವಿಲ್ಲದ ಔಷಧೀಯ ಸಸ್ಯಗಳ ಉಪಯೋಗವನ್ನು ಅರಿತು ಅಗತ್ಯವಿದ್ದಾಗ ಬಳಸಿದರೆ ಹಾನಿಯಂತೂ ಇಲ್ಲ. ಮುಂದೊಂದು ದಿನ ಕಾಡು, ಪರಿಸರ ನಾಶವಾಗುತ್ತಿದ್ದಂತೆ ಇಂತಹ ಸಸ್ಯಗಳ ಕೃಷಿಯೇ ಒಂದು ಉದ್ಯಮವಾದರೂ ಆಶ್ಚರ್ಯವಿಲ್ಲ.

ಉಲ್ಲೇಖ ಬದಲಾಯಿಸಿ

  1. ಭಟ್, ಸತ್ಯನಾರಾಯಣ. ಮಾಳ ಸುತ್ತಿನ ಮೂಲಿಕೆ ವೈದ್ಯ (ಪ್ರಥಮ ed.). ಬೆಂಗಳೂರು: ಪ್ರಗತಿ ಗ್ರಾಫಿಕ್ಸ್. p. ೮೩.
  2. "PATHA - Cyclea peltata , Cissampelos parieta". Encyclopedia of Ayurvedic Medicinal Plants. Retrieved 12 March 2016.