ಹವಾ ಮಲ್ಲಿನಾಥ ಸ್ವಾಮೀಜಿ


ಡಾ.ಹವಾ ಮಲ್ಲಿನಾಥ ಸ್ವಾಮೀಜಿ ಅವರು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿರಗುಡಿ ಗ್ರಾಮದ ಮಠದ ಪೀಠಾಧಿಪತಿಯಾಗಿದ್ದಾರೆ. ಇವರು ದೇಶಾದ್ಯಂತ ಸುಮಾರು ೪000 ಕ್ಕೂ ಹೆಚ್ಚು ಶಾಖಾ ಮಠಗಳನ್ನು ಸ್ಥಾಪಿಸಿದ್ದಾರೆ. ಇವರು ಜೈ ಭಾರತ ಮಾತಾ ಸೇವಾ ಸಮಿತಿ ಎಂಬ ಸಂಘವನ್ನು ಸ್ಥಾಪಿಸಿದ್ದಾರೆ. ಈ ಸಂಘದ ರಾಷ್ಟ್ರೀಯ ಅಧ್ಯಕ್ಷರು ಇವರೆ ಆಗಿದ್ದಾರೆ.