ಹಳೆ ವಿಮಾನ ನಿಲ್ದಾಣ ರಸ್ತೆ

ಹಳೆ ವಿಮಾನ ನಿಲ್ದಾಣ ರಸ್ತೆ ಬೆಂಗಳೂರಿನ ಪ್ರಸಿದ್ಧ ರಸ್ತೆಗಳಲ್ಲೊಂದು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗುವ ಮೊದಲು ಇದನ್ನು ವಿಮಾನ ನಿಲ್ದಾಣ ರಸ್ತೆ ಎಂದು ಕರೆಯಲಾಗುತ್ತಿತ್ತು. ಇದು ಟ್ರಿನಿಟಿ ಚರ್ಚ್ ರಸ್ತೆ ಮತ್ತು ವಿಕ್ಟೋರಿಯಾ ರಸ್ತೆಗಳು ಸೇರುವ ಸ್ಥಳದಿಂದ ಪ್ರಾರಂಭವಾಗಿ, ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಬಂದು ಸೇರುತ್ತದೆ. ನಂತರ ಇದು ಅಧಿಕೃತವಾಗಿ ವರ್ತೂರು ರಸ್ತೆಯಾಗಿ ಬದಲಾಗುತ್ತದೆ. ಆದರೆ ಮಾರತಹಳ್ಳಿಯವರೆಗೂ ಕೂಡ ಹಳೆ ವಿಮಾನ ನಿಲ್ದಾಣ ರಸ್ತೆ ಎಂದೇ ಕರೆಯುವುದುಂಟು. ಹಳೆ ವಿಮಾನ ನಿಲ್ದಾಣ ರಸ್ತೆ ತನ್ನ ಸಂಚಾರ ಸಮಸ್ಯೆಗೆ ಬೆಂಗಳೂರಿನಲ್ಲಿ 10 "ಕಪ್ಪು ಚುಕ್ಕೆ" ಎಂದು ಪರಿಗಣಿಸಲಾಗಿದೆ.

ಪ್ರಮುಖ ಸ್ಥಳಗಳು

ಬದಲಾಯಿಸಿ