ಹಲಾಲ್ ಎಂಬುದು ಒಂದು ಅರಬ್ಬಿ ಶಬ್ದವಾಗಿದ್ದು ಇದರರ್ಥ ಅಂಗೀಕಾರಾರ್ಹವಾದುದು ಎಂದಾಗಿದೆ.

ಕುರಾನ್‍ನಲ್ಲಿ, ಹಲಾಲ್ ಶಬ್ದವು ಹರಾಮ್ (ನಿಷಿದ್ಧ) ಶಬ್ದಕ್ಕೆ ವಿರುದ್ಧಾರ್ಥಕವಾಗಿದೆ.

ಹಲಾಲ್ ಪದವನ್ನು ವಿಶೇಷವಾಗಿ ಇಸ್ಲಾಮಿ ಆಹಾರ ನಿಯಮಗಳೊಂದಿಗೆ ಸಂಬಂಧಿಸಲಾಗುತ್ತದೆ, ಮತ್ತು ವಿಶೇಷವಾಗಿ ಆ ಅಗತ್ಯಗಳಿಗೆ ಅನುಗುಣವಾಗಿ ಸಂಸ್ಕರಿಸಿದ ಹಾಗೂ ತಯಾರಿಸಿದ ಮಾಂಸದೊಂದಿಗೆ.

ಹಲವು ಆಹಾರ ಕಂಪನಿಗಳು ಹಲಾಲ್ ಸಂಸ್ಕರಿಸಿದ ಆಹಾರಗಳು ಮತ್ತು ಉತ್ಪನ್ನಗಳನ್ನು ನೀಡುತ್ತವೆ. ಇವುಗಳಲ್ಲಿ ಹಲಾಲ್ ಫ಼ೋಯಿ ಗ್ರಾ, ಸ್ಪ್ರಿಂಗ್ ರೋಲ್‌ಗಳು, ಕೋಳಿಮಾಂಸದ ತುಂಡುಗಳು, ರಾವಿಯೋಲಿ, ಲಸಾನ್ಯಾ, ಪೀಟ್ಸಾ ಮತ್ತು ಶಿಶು ಆಹಾರ ಸೇರಿವೆ.[೧] ಹಲಾಲ್ ಸಿದ್ಧ ಆಹಾರಗಳು ಬ್ರಿಟನ್ ಮತ್ತು ಅಮೇರಿಕದಲ್ಲಿನ ಮುಸ್ಲಿಮರಿಗೆ ಬೆಳೆಯುತ್ತಿರುವ ಗ್ರಾಹಕ ಮಾರುಕಟ್ಟೆಯಾಗಿವೆ ಮತ್ತು ಇವನ್ನು ಹೆಚ್ಚೆಚ್ಚು ಸಂಖ್ಯೆಯ ಚಿಲ್ಲರೆ ವ್ಯಾಪಾರಿಗಳು ನೀಡುತ್ತಿದ್ದಾರೆ.[೨] ಸಸ್ಯಾಹಾರಿ ಆಹಾರದಲ್ಲಿ ಮದ್ಯಸಾರವಿರದಿದ್ದರೆ ಅದು ಹಲಾಲ್ ಎಂದೆನಿಸಿಕೊಳ್ಳುತ್ತದೆ.

ಉಲ್ಲೇಖಗಳುಸಂಪಾದಿಸಿ

  1. "USDA Foreign Agricultural Service – Halal Food Market" (PDF). Retrieved Aug 30, 2016.
  2. "Halal la carte". The Economist. ISSN 0013-0613. Retrieved 2016-08-31.
"https://kn.wikipedia.org/w/index.php?title=ಹಲಾಲ್&oldid=981406" ಇಂದ ಪಡೆಯಲ್ಪಟ್ಟಿದೆ