ಹರ್ನಾಯಿ ಭಾರತದ ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ಗ್ರಾಮ.

ಸುವರ್ಣದುರ್ಗದ ಪ್ರವೇಶದ್ವಾರ

ಸುವರ್ಣದುರ್ಗ್ ಬದಲಾಯಿಸಿ

ಸುವರ್ಣದುರ್ಗ್ ಕೊಂಕಣದ ಹರ್ನಾಯಿ ಬಳಿಯಲ್ಲಿರುವ ಅರೇಬಿಯನ್ ಸಮುದ್ರದ ಒಂದು ಸಣ್ಣ ದ್ವೀಪದಲ್ಲಿರುವ ಕೋಟೆ.

ಸುವರ್ಣದುರ್ಗ್ ಕೋಟೆಯನ್ನು ೧೬ ನೇ ಶತಮಾನದಲ್ಲಿ ಚಕ್ರವರ್ತಿ ಆದಿಲ್‍ಷಾ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ೧೬೬೦ ರಲ್ಲಿ, ಶಿವಾಜಿ ಮಹಾರಾಜನು ಎರಡನೆಯ ಆದಿಲ್‍ಷಾನನ್ನು ಸೋಲಿಸಿ ಈ ಕೋಟೆಯನ್ನು ಮರಾಠಾ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ಈ ಕೋಟೆಯು ಸಮುದ್ರದ ಶಿವಾಜಿ ಎಂದೇ ಹೆಸರಾಗಿದ್ದ ಮಹಾನ್ ಸೈನಿಕ ಕಾನ್ಹೋಜಿ ಆಂಗ್ರೆಯ ಪ್ರಧಾನ ಕಚೇರಿಯಾಗಿತ್ತು. ೧೭೫೫ ರಲ್ಲಿ, ಈ ಕೋಟೆಯು ಪೇಶ್ವೆಗಳ ಆಳ್ವಿಕೆಗೆ ಒಳಪಟ್ಟಿತು ಮತ್ತು ನಂತರ ೧೮೧೮ ರಲ್ಲಿ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ಈ ಕೋಟೆಯು ಸ್ವಾತಂತ್ರ್ಯ ಬರುವವರೆಗೂ ಬ್ರಿಟಿಷರ ಅಧೀನದಲ್ಲಿತ್ತು. ಹರ್ನಾಯಿಯಲ್ಲಿರುವ ಸುವರ್ಣದುರ್ಗ್ ಕೋಟೆಯು ದಾಪೋಲಿಯಲ್ಲಿರುವ ಅತ್ಯಂತ ಹಳೆಯ ಕೋಟೆಯಾಗಿದೆ.

ಗೋವಾ ಕೋಟೆ ಬದಲಾಯಿಸಿ

ದಾಪೋಲಿ ತಾಲೂಕಿನ ಹರ್ನಾಯಿ ಬಂದರು[೧] ಕನಕದುರ್ಗ, ಫತೇ ಗಢ್ ಮತ್ತು ಗೋವಾ ಕೋಟೆಗಳೆಂಬ ೩ ಕೋಟೆಗಳ ಗುಂಪನ್ನು ಹೊಂದಿದೆ. ಈ ಕೋಟೆಗಳನ್ನು ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ, ಆದರೆ ಮುಖ್ಯವಾದ ಸುವರ್ಣದುರ್ಗ್ ಕೋಟೆಗೆ ಯುದ್ಧಾನುಕೂಲವಾಗಿ ಆಧಾರ ನೀಡಲು ಮತ್ತು ಅದನ್ನು ರಕ್ಷಿಸಲು ಈ ಕೋಟೆಗಳನ್ನು ನಿರ್ಮಿಸಲಾಗಿದೆ ಎಂದು ಖಚಿತವಾಗಿ ತಿಳಿದಿದೆ. ಈ ೩ ಕೋಟೆಗಳಲ್ಲಿ, ಗೋವಾ ಕೋಟೆಯು ಮುಕ್ಕಾಲು ಹೆಕ್ಟೇರ್ ಮೇಲ್ಮೈ ಪ್ರದೇಶದಲ್ಲಿ ಹರಡಿಕೊಂಡಿದೆ. ಕೋಟೆಯು ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ಸಮುದ್ರದಿಂದ ಆವೃತವಾಗಿದೆ. ಕೋಟೆಯು ದಕ್ಷಿಣ ಭಾಗದಲ್ಲಿ ಸ್ವಾಭಾವಿಕ ಎತ್ತರವನ್ನು ಹೊಂದಿದೆ. ಈ ಎತ್ತರದ ಮೇಲೆ ರಚನೆಗಳ ಅವಶೇಷಗಳನ್ನು ಕಾಣಬಹುದು.[೧]

ಕನಕ್‍ದುರ್ಗ್ ಕೋಟೆ ಬದಲಾಯಿಸಿ

ಕನಕ್‍ದುರ್ಗ್ ಕೋಟೆಯು ಹರ್ನಾಯಿ ಬಂದರಿಗೆ ಸಮೀಪದಲ್ಲಿದೆ. ಕನಕ್‍ದುರ್ಗ್ ಕೋಟೆಯು ಎಲ್ಲಾ ೩ ಕಡೆಗಳಲ್ಲಿ ಸಮುದ್ರದಿಂದ ಆವೃತವಾಗಿದೆ ಮತ್ತು ಸುಮಾರು ಕಾಲು ಹೆಕ್ಟೇರ್ ಮೇಲ್ಮೈ ವಿಸ್ತೀರ್ಣವನ್ನು ಹೊಂದಿದೆ. ಈ ಕೋಟೆಯು ಅಂಡಾಕಾರವಾಗಿದ್ದು ಮೆಟ್ಟಿಲುಗಳ ಮೂಲಕ ಇದನ್ನು ಪ್ರವೇಶಿಸಬಹುದು. ಮೆಟ್ಟಿಲುಗಳ ಕೊನೆಯಲ್ಲಿ, ನೀವು ಕೆಳಗಿನ ಮಟ್ಟದಲ್ಲಿ ಬಲಭಾಗದಲ್ಲಿ ನೀರಿನ ಟ್ಯಾಂಕ್ ಅನ್ನು ಕಾಣಬಹುದು.[೨]

ಹರ್ನಾಯಿ ಮೀನು ಮಾರುಕಟ್ಟೆ ಬದಲಾಯಿಸಿ

ಮೀನುಗಾರಿಕೆಯು ಹರ್ನಾಯಿ ಜನರ ವ್ಯಾಪಾರದ ಮುಖ್ಯ ಮೂಲವಾಗಿದೆ. ಆಪೂಸು ಮಾವಿನ ಹಣ್ಣುಗಳ ವ್ಯಾಪಾರ ಕೂಡ ನಡೆಯುತ್ತದೆ.

ಪಾಮ್‌ಫ್ರೆಟ್, ಕಿಂಗ್‌ಫಿಶ್, ಮ್ಯಾಕೆರೆಲ್, ಬಿಳಿ ದೈತ್ಯ ಸೀಗಡಿಗಳು, ನಳ್ಳಿ, ಸ್ಕ್ವಿಡ್‌ಗಳು ಇತ್ಯಾದಿಗಳನ್ನು ಒಳಗೊಂಡಿರುವ ವಿವಿಧ ಮೀನುಗಳನ್ನು ಇಲ್ಲಿ ನೋಡಬಹುದು.[೨]

ಉಲ್ಲೇಖಗಳು ಬದಲಾಯಿಸಿ

  1. "Taluka Dapoli- Research Website".
  2. Pantave, Mujib (2021-08-27). "Harnai beach". Trendifyworld. Archived from the original on 2022-03-12. Retrieved 2022-08-12.
ಉಲ್ಲೇಖ ದೋಷ: <ref> tag with name "COI-1" defined in <references> is not used in prior text.
"https://kn.wikipedia.org/w/index.php?title=ಹರ್ನಾಯಿ&oldid=1178567" ಇಂದ ಪಡೆಯಲ್ಪಟ್ಟಿದೆ